ಮೊಮ್ಮಗಳು ಹುಟ್ಟಿದ್ದಕ್ಕೆ ಅಜ್ಜ ಫುಲ್​ ಖುಷ್​​; ಮನೆಗೆ ಕರೆದುಕೊಂಡು ಬರಲು ಹೆಲಿಕಾಪ್ಟರ್​ ಸಿದ್ಧ ಮಾಡಿಟ್ಟ ರೈತ !

ಸ್ವಲ್ಪ ದಿನಗಳ ಹಿಂದೆ ಪುಣೆಯಲ್ಲಿ ದಂಪತಿಯೊಬ್ಬರು ಹೀಗೆ ಮಾಡಿದ್ದರು. ತಮ್ಮ ನವಜಾತ ಹೆಣ್ಣುಮಗುವನ್ನು ಹೆಲಿಕಾಪ್ಟರ್​ ಮೂಲಕವೇ ಮನೆಗೆ ಕರೆದುಕೊಂಡು ಹೋಗಿ ಸುದ್ದಿ ಮಾಡಿದ್ದರು.

ಮೊಮ್ಮಗಳು ಹುಟ್ಟಿದ್ದಕ್ಕೆ ಅಜ್ಜ ಫುಲ್​ ಖುಷ್​​; ಮನೆಗೆ ಕರೆದುಕೊಂಡು ಬರಲು ಹೆಲಿಕಾಪ್ಟರ್​ ಸಿದ್ಧ ಮಾಡಿಟ್ಟ ರೈತ !
ಮೊಮ್ಮಗಳನ್ನು ಕರೆತರಲು ಅಜ್ಜ ಬಾಡಿಗೆ ಪಡೆದ ಹೆಲಿಕಾಪ್ಟರ್​
Follow us
TV9 Web
| Updated By: Lakshmi Hegde

Updated on:Apr 27, 2022 | 10:59 AM

ಕಾಲ ಮೊದಲಿನಂತೆ ಇಲ್ಲ. ಗಂಡು ಮಗುವೇ ಬೇಕೆಂಬ ಬಯಕೆ ಸ್ವಲ್ಪ ದೂರವಾಗುತ್ತಿದೆ. ಹೆಣ್ಣು ಮಗು ಹುಟ್ಟಿದರೆ ಮನಸ್ಪೂರ್ತಿಯಾಗಿ ಸಂಭ್ರಮಿಸುವ ಜನರು ಹೆಚ್ಚಾಗುತ್ತಿದ್ದಾರೆ. ಹೀಗೆ ಪುಣೆಯಲ್ಲೊಬ್ಬರು ರೈತ ತನಗೆ ಹೆಣ್ಣು ಮೊಮ್ಮಗು ಹುಟ್ಟಿತು ಎಂಬ ಸಂತೋಷಕ್ಕೆ ಸಿಕ್ಕಾಪಟೆ ಖುಷಿಗೊಂಡು, ಆಕೆಯನ್ನು ಕರೆದುಕೊಂಡು ಬರಲು ಒಂದು ಹೆಲಿಕಾಪ್ಟರ್​​ನ್ನೇ ಬಾಡಿಗೆಗೆ ಪಡೆದಿದ್ದಾರೆ.  ಹೆಲಿಕಾಪ್ಟರ್ ಬಾಡಿಗೆ ಪಡೆದವರು, ಬಾಳೆವಾಡಿ ಪ್ರದೇಶದ ನಿವಾಸಿ ಅಜಿತ್​ ಪಾಂಡುರಂಗ ಬಾಲ್ವಾಡ್ಕರ್​ ಎಂಬುವರು. ಸೊಸೆಗೆ ಹೆಣ್ಣು ಮಗು ಹುಟ್ಟಿತು ಎಂಬುದನ್ನು ಸಂಭ್ರಮಿಸುತ್ತಿರುವ ಇವರೀಗ ಮೊಮ್ಮಗಳನ್ನು ಮನೆಗೆ ಬರಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಸದ್ಯ ಸೊಸೆ ತನ್ನ ಮಗುವೊಂದಿಗೆ ತವರು ಮನೆಯಾದ ಶೇವಲ್ ವಾಡಿಯಲ್ಲಿ ಇದ್ದು, ಅವರಿಬ್ಬರನ್ನೂ ಹೆಲಿಕಾಪ್ಟರ್​​ನಲ್ಲಿ ಕರೆದುಕೊಂಡು ಬರಬೇಕು ಎಂಬುದು ಅಜಿತ್​ ಪಾಂಡುರಂಗ ಅವರ ಆಸೆ. ಹೀಗಾಗಿ ಈಗಾಗಲೇ ಹೆಲಿಕಾಪ್ಟರ್​ ಬಾಡಿಗೆ ಪಡೆದು ಸಿದ್ಧವಾಗಿಟ್ಟುಕೊಂಡಿದ್ದಾರೆ.

ಸ್ವಲ್ಪ ದಿನಗಳ ಹಿಂದೆ ಪುಣೆಯಲ್ಲಿ ದಂಪತಿಯೊಬ್ಬರು ಹೀಗೆ ಮಾಡಿದ್ದರು. ತಮ್ಮ ನವಜಾತ ಹೆಣ್ಣುಮಗುವನ್ನು ಹೆಲಿಕಾಪ್ಟರ್​ ಮೂಲಕವೇ ಮನೆಗೆ ಕರೆದುಕೊಂಡು ಹೋಗಿ ಸುದ್ದಿ ಮಾಡಿದ್ದರು. ಈ ಫೋಟೋ, ವಿಡಿಯೋಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದವು. ನಮ್ಮ ಕುಟುಂಬದಲ್ಲಿ ಹುಟ್ಟುತ್ತಿರುವ ಮೊದಲ ಹೆಣ್ಣು ಮಗು ಇದು. ಹೀಗಾಗಿ ಆಕೆಯನ್ನು ತುಂಬ ವಿಶೇಷ ರೀತಿಯಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ಸುಮಾರು 1 ಲಕ್ಷ ರೂಪಾಯಿ ಕೊಟ್ಟು ಚಾಪರ್ ಸಿದ್ಧಗೊಳಿಸಿದ್ದೇವೆ ಎಂದು ಹೆಣ್ಣು ಮಗುವಿನ ತಂದೆ ವಿಶಾಲ್​ ಜಾರೇಕರ್​ ತಿಳಿಸಿದ್ದರು.

ಇದನ್ನೂ ಓದಿ: ತುಮಕೂರಿನಲ್ಲಿ ದಲಿತರ ಬೀದಿಗೆ ದೇವರನ್ನ ಕಳುಹಿಸಲು ಹಿಂದೇಟು! ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

Published On - 10:59 am, Wed, 27 April 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ