ಜಂತರ್ ಮಂತರ್ನಲ್ಲಿ ಸತ್ಯಾಗ್ರಹ ನಡೆಸಲು ಮುಂದಾದ ಕಿಸಾನ್ ಮಹಾಪಂಚಾಯತ್; ಸುಪ್ರೀಂಕೋರ್ಟ್ಗೆ ಅರ್ಜಿ
ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಆಗಾಗ ಹೆದ್ದಾರಿಗಳನ್ನು ಬಂದ್ ಮಾಡುತ್ತಿದ್ದಾರೆ. ಮೊನ್ನೆ ಸೆಪ್ಟೆಂಬರ್ 27ರಂದು ನಡೆಸಲಾದ ಭಾರತ್ ಬಂದ್ನಲ್ಲೂ ಕೂಡ ದೇಶಾದ್ಯಂತ ಹಲವು ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿದ್ದರು.
ದೆಹಲಿ: ಇಲ್ಲಿನ ಜಂತರ್ ಮಂತರ್ನಲ್ಲಿ ಸತ್ಯಾಗ್ರಹ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿ ಕಿಸಾನ್ ಮಹಾಪಂಚಾಯತ್ (ರೈತ ಸಂಘಟನೆ) ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ (SKM)ಕ್ಕೆ ಅನುಮತಿ ನೀಡಿದಂತೆ ನಮಗೂ ಕೊಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಂದು ಕಿಸಾನ್ ಪಂಚಾಯತ್ ಸಂಘಟನೆ ಸುಪ್ರೀಂಕೋರ್ಟ್ ಬಳಿ ಕೇಳಿದ್ದು, ಕೋರ್ಟ್ ಇಂದು ಅರ್ಜಿ ವಿಚಾರಣೆ ನಡೆಸಲಿದೆ.
ಜಂತರ್ಮಂತರ್ನಲ್ಲಿ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ. ಇದಕ್ಕೆ ಅನುಮತಿ ನೀಡುವುದರ ಜತೆಗೆ ನಮ್ಮನ್ನು ತಡೆಯದಂತೆ ಕೇಂದ್ರ ಸರ್ಕಾರ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಪೊಲೀಸ್ ಕಮಿಷನರ್ಗೆ ನಿರ್ದೇಶನ ನೀಡಬೇಕು. ಸುಮಾರು 200 ರೈತರು ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು ಎಂದು ಕಿಸಾನ್ ಮಹಾಪಂಚಾಯತ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಆಗಾಗ ಹೆದ್ದಾರಿಗಳನ್ನು ಬಂದ್ ಮಾಡುತ್ತಿದ್ದಾರೆ. ಮೊನ್ನೆ ಸೆಪ್ಟೆಂಬರ್ 27ರಂದು ನಡೆಸಲಾದ ಭಾರತ್ ಬಂದ್ನಲ್ಲೂ ಕೂಡ ದೇಶಾದ್ಯಂತ ಹಲವು ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿದ್ದರು. ಅದಾದ ಬಳಿಕ ಸುಪ್ರೀಂಕೋರ್ಟ್ ಈ ಬಗ್ಗೆ ಪ್ರಶ್ನೆ ಮಾಡಿತ್ತು. ಸಾರ್ವಜನಿಕರಿಗಾಗಿ ಇರುವ ಹೆದ್ದಾರಿಗಳನ್ನು ಹೀಗೆ ಬಂದ್ ಮಾಡುವುದು ಹೇಗೆ ಸಾಧ್ಯ? ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ಮಾಡುವ ಸಂಬಂಧ ನ್ಯಾಯಾಂಗದ ಕಾನೂನನ್ನು ಸರಿಯಾಗಿ ಕಾರ್ಯಗತಗೊಳಿಸುವುದು ಕಾರ್ಯಾಂಗದ ಪ್ರಮುಖ ಕರ್ತವ್ಯ ಎಂದು ಹೇಳಿತ್ತು.
ಮೂರು ಕೃಷಿ ಕಾಯ್ದೆಗಳ ವಿರುದ್ಧ ಹಲವು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಸೆ.27ರಂದು ನಡೆಸಲಾದ ಭಾರತ್ ಬಂದ್ಗೆ ತಮಿಳುನಾಡು, ಛತ್ತೀಸ್ಗಡ್, ಕೇರಳ, ಪಂಜಾಬ್, ಜಾರ್ಖಂಡ, ಆಂಧ್ರಪ್ರದೇಶ ಬೆಂಬಲ ಸೂಚಿಸಿದ್ದವು. ಕೃಷಿ ಕಾಯ್ದೆಗಳ ಸಂಬಂಧ ನಮ್ಮ ಸಂಕಷ್ಟ ಕೇಳಬೇಕು. ಅವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂಬುದು ರೈತ ಸಂಘಟನೆಗಳ ಆಗ್ರಹವಾಗಿದೆ. ಆದರೆ ರೈತರ ಪ್ರತಿಭಟನೆಯಿಂದ ಗಡಿ ಭಾಗದಲ್ಲಿ ಹಲವು ವಿಧದ ತೊಂದರೆಗಳು ಎದುರಾಗಿವೆ. ಆಗಾಗ ಪ್ರತಿಭಟನೆ ನೆಪದಲ್ಲಿ ಅವರು ನಡೆಸುವ ಹೆದ್ದಾರಿ ಬಂದ್ನಿಂದ ಸಾರ್ವಜನಿಕರಿಗೆ ಸಂಕಷ್ಟ ಉಂಡಾಗುತ್ತಿದೆ.
ಇದನ್ನೂ ಓದಿ: ಗುರುತು ಸಿಗದಂತೆ ಬದಲಾದ ಬಿಗ್ ಬಾಸ್ ಮಹಿಳಾ ಸ್ಪರ್ಧಿ; ಈ ಪರಿವರ್ತನೆ ನಂಬಲು ಸಾಧ್ಯವೇ?
Team India New Coach: ಕುಂಬ್ಳೆ ಅಲ್ಲ: ಟೀಮ್ ಇಂಡಿಯಾ ಮುಂದಿನ ಕೋಚ್ ಇವರಂತೆ: ಹಿಂಟ್ ಕೊಟ್ಟ ಎಂಎಸ್ಕೆ ಪ್ರಸಾದ್
Published On - 9:46 am, Fri, 1 October 21