Madhya Pradesh: ಬಸ್ ಭೀಕರ ಅಪಘಾತ; 7 ಮಂದಿ ದುರ್ಮರಣ, 13 ಜನರಿಗೆ ಗಾಯ
ಪರಿಸ್ಥಿತಿ ಗಂಭೀರ ಆಗಿರುವವರನ್ನು ಘಟನೆ ನಡೆದ ಸ್ಥಳದಿಂದ 79 ಕಿಮೀ ದೂರದಲ್ಲಿರುವ ಗ್ವಾಲಿಯರ್ನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಧ್ಯಪ್ರದೇಶದ ಬಿಂದ್ ಜಿಲ್ಲೆಯಲ್ಲಿ ಬಸ್ವೊಂದು ಡಂಪರ್ ವಾಹನ (ಕಸ, ಮಣ್ಣು ಸಾಗಿಸುವ ವಾಹನ)ಕ್ಕೆ ಡಿಕ್ಕಿ ಹೊಡೆದು ಏಳು ಮಂದಿ ಮೃತಪಟ್ಟ ದುರ್ಘಟನೆ ನಡೆದಿದೆ. ಬಿಂದ್ ಜಿಲ್ಲೆಯ ಗೋಹಾದ್ ಚೌಕದ ಬಳಿ ನಡೆದ ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. 13 ಮಂದಿಯಲ್ಲಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ ಎಂದೂ ಹೇಳಲಾಗಿದೆ.
ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದರೂ, ಪರಿಸ್ಥಿತಿ ಗಂಭೀರ ಆಗಿರುವವರನ್ನು ಘಟನೆ ನಡೆದ ಸ್ಥಳದಿಂದ 79 ಕಿಮೀ ದೂರದಲ್ಲಿರುವ ಗ್ವಾಲಿಯರ್ನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಸ್ನಲ್ಲಿದ್ದವರೆಲ್ಲ ಗ್ವಾಲಿಯರ್ನಿಂದ ಬರೇಲಿಗೆ ಹೋಗುತ್ತಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ತ್ರಿಶೂಲ್ ಪರ್ವತದ ಬಳಿ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾದ ಐವರು ನೌಕಾಪಡೆ ಸಿಬ್ಬಂದಿ; ರಕ್ಷಣಾ ಕಾರ್ಯಾಚರಣೆ
ಭಾರತದ ಕೊವಿಶೀಲ್ಡ್ ಕೊರೊನಾ ಲಸಿಕೆಗೆ ಮಾನ್ಯತೆ ನೀಡಿದ ಆಸ್ಟ್ರೇಲಿಯಾ ಸರ್ಕಾರ
Published On - 10:07 am, Fri, 1 October 21