ರೈತರ ಕುಂದುಕೊರತೆಗಳ ಶೀಘ್ರ ಪರಿಹಾರಕ್ಕೆ ಸುಪ್ರೀಂಕೋರ್ಟ್​ನಲ್ಲಿ ವಿಶೇಷ ಸಮಿತಿ ರಚನೆ

|

Updated on: Aug 22, 2024 | 12:53 PM

ರೈತರ ಕುಂದುಕೊರತೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬಹು ಸದಸ್ಯರ ಸಮಿತಿಯನ್ನು ಶೀಘ್ರ ರಚಿಸಲಾಗುವುದು ಎಂದು ಸುಪ್ರೀಂಕೋರ್ಟ್​ ಹೇಳಿದೆ. ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದ ಮನವಿಯನ್ನು ಅದು ಆಲಿಸುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದೆ. ಕಳೆದ ತಿಂಗಳುಗಳಿಂದ ರೈತರು ತಮ್ಮ ಬೇಡಿಕೆಗಳ ಪರವಾಗಿ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರ ಕುಂದುಕೊರತೆಗಳ ಶೀಘ್ರ ಪರಿಹಾರಕ್ಕೆ ಸುಪ್ರೀಂಕೋರ್ಟ್​ನಲ್ಲಿ ವಿಶೇಷ ಸಮಿತಿ ರಚನೆ
ಪ್ರತಿಭಟನೆ
Follow us on

ರೈತರ ಕುಂದುಕೊರತೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬಹು ಸದಸ್ಯರ ಸಮಿತಿಯನ್ನು ಶೀಘ್ರ ರಚಿಸಲಾಗುವುದು ಎಂದು ಸುಪ್ರೀಂಕೋರ್ಟ್​ ಹೇಳಿದೆ. ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದ ಮನವಿಯನ್ನು ಅದು ಆಲಿಸುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದೆ. ಕಳೆದ ತಿಂಗಳುಗಳಿಂದ ರೈತರು ತಮ್ಮ ಬೇಡಿಕೆಗಳ ಪರವಾಗಿ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಯುನೈಟೆಡ್ ಕಿಸಾನ್ ಮೋರ್ಚಾ (ರಾಜಕೀಯೇತರ) ಬ್ಯಾನರ್ ಅಡಿಯಲ್ಲಿ 250 ರೈತ ಸಂಘಗಳು ಪ್ರತಿಭಟನೆ ನಡೆಸುತ್ತಿವೆ. ಫೆಬ್ರವರಿ 13 ರಿಂದ ಪಂಜಾಬ್‌ನ ಅನೇಕ ರೈತ ಸಂಘಗಳು ತಮ್ಮ ಬೇಡಿಕೆಗಳೊಂದಿಗೆ ದೆಹಲಿಯತ್ತ ಮೆರವಣಿಗೆಯನ್ನು ಪ್ರಾರಂಭಿಸಿದ ದಿನದಿಂದ ಶಂಭು ಗಡಿಯನ್ನು ಮುಚ್ಚಲಾಗಿದೆ.

ರೈತರ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹರಿಯಾಣ ಸರ್ಕಾರವು ಅವರನ್ನು ತಡೆಯಲು ಅಂಬಾಲಾ-ನವದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಭದ್ರತಾ ಪಡೆಗಳು ರೈತರನ್ನು ಅಲ್ಲಿಯೇ ತಡೆದು ಸುಮಾರು ಏಳು ತಿಂಗಳಿಂದ ರೈತರು ಅಲ್ಲೇ ನಿಂತಿದ್ದಾರೆ.

ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರಮುಖ ಬೇಡಿಕೆ ‘ಬೆಂಬಲಬೆಲೆ’
ರೈತರ, ಕೂಲಿಕಾರರ ಸಾಲ ಮನ್ನಾ ಮಾಡಬೇಕು.
ಭೂಸ್ವಾಧೀನ ಕಾಯ್ದೆ 2013 ಜಾರಿಗೊಳಿಸಬೇಕು.
ಲಖೀಂಪುರ ಹಿಂಸಾಚಾರದ ಆರೋಪಿಗಳಿಗೆ ಶಿಕ್ಷೆಯಾಗಬೇಕು.
ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ವ್ಯವಸ್ಥೆ ಮಾಡಬೇಕು

ಮತ್ತಷ್ಟು ಓದಿ: Delhi Chalo: ದೆಹಲಿ ಚಲೋ: ಹರ್ಯಾಣ ಗಡಿ ದಾಟಲು ರೈತರು ಸಜ್ಜು, ಗಾಜಿಪುರ ಗಡಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ

ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ಪ್ರಾಣ ಕಳೆದುಕೊಂಡವರಿಗೆ ಪಿಂಚಣಿ ನೀಡಬೇಕು. ಅಲ್ಲದೆ, ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಸಿಗಬೇಕು.
ಶಂಭು ಗಡಿಯು ಪಂಜಾಬ್‌ನ ಪಟಿಯಾಲ ಜಿಲ್ಲೆಯಲ್ಲಿ ಬರುತ್ತದೆ. ಇದರ ಗಡಿಗಳು ಹರಿಯಾಣದ ಅಂಬಾಲಾದೊಂದಿಗೆ ಹೊಂದಿಕೊಂಡಿದೆ.
ಶಂಭು ಗಡಿ ದೆಹಲಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ. ರೈತರು ಇಲ್ಲಿಗೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಆದ್ದರಿಂದ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ನಿಲ್ಲಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ