AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೋಜ್‌ಪುರಿ ಹಾಡುಗಳಿಗೆ ಮೋದಿ, ಯೋಗಿ ಡ್ಯಾನ್ಸ್ ಮಾಡುವ ಎಡಿಟೆಡ್ ರೀಲ್ಸ್ ವಿರುದ್ಧ ಎಫ್ಐಆರ್​​

ವೈರಲ್ ಆಗಿರುವ ವಿಡಿಯೊಗಳು ಮಹಾತ್ಮ ಗಾಂಧಿ, ಮೋದಿ ಮತ್ತು ಆದಿತ್ಯನಾಥ್ ಭೋಜ್‌ಪುರಿ ಹಾಡುಗಳಿಗೆ ನೃತ್ಯ ಮತ್ತು ಹಾಡುವುದನ್ನು ತೋರಿಸುತ್ತವೆ.  ರಾಥೋಡ್ ಅವರು ಬಲ್ಲಿಯಾ ಪೊಲೀಸರಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರಾಥೋಡ್ ಎಕ್ಸ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಮಹಾತ್ಮ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೋಜ್‌ಪುರಿ ಹಾಡಿಗೆ ನೃತ್ಯ ಮತ್ತು ಹಾಡುತ್ತಿರುವುದನ್ನು ಕಾಣಬಹುದು.

ಭೋಜ್‌ಪುರಿ ಹಾಡುಗಳಿಗೆ ಮೋದಿ, ಯೋಗಿ ಡ್ಯಾನ್ಸ್ ಮಾಡುವ ಎಡಿಟೆಡ್ ರೀಲ್ಸ್ ವಿರುದ್ಧ ಎಫ್ಐಆರ್​​
ಮೋದಿ - ಯೋಗಿ
ರಶ್ಮಿ ಕಲ್ಲಕಟ್ಟ
|

Updated on: Sep 25, 2024 | 5:06 PM

Share

ದೆಹಲಿ ಸೆಪ್ಟೆಂಬರ್ 25: ಮಹಾತ್ಮ ಗಾಂಧಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒಳಗೊಂಡ “ಆಕ್ಷೇಪಾರ್ಹ” ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿ (FIR) ದಾಖಲಿಸಿದ್ದಾರೆ.  ತನ್ನನ್ನು ರಾಷ್ಟ್ರೀಯವಾದಿ, ಸಾಮಾಜಿಕ ಕಾರ್ಯಕರ್ತೆ ಮತ್ತು ಸಾರ್ವಜನಿಕ ಭಾಷಣಕಾರ ಎಂದು ಬಣ್ಣಿಸಿಕೊಳ್ಳುವ ಎಕ್ಸ್ ಬಳಕೆದಾರರಾದ ನೇಹಾ ಸಿಂಗ್ ರಾಥೋಡ್ ಅವರು ಮಂಗಳವಾರ ವಿಡಿಯೊವನ್ನು ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ರಾಥೋಡ್ ವಿಡಿಯೊಗಳನ್ನು ಖಂಡಿಸಿದ್ದು ಅವುಗಳ ಹಿಂದಿನ ಉದ್ದೇಶಗಳನ್ನು ಪ್ರಶ್ನಿಸಿದರು.

“ಉತ್ತರ ಪ್ರದೇಶದ ಜನಪ್ರಿಯ ಮತ್ತು ಯಶಸ್ವಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ ಮಹಾರಾಜ್ ಅವರು ತಮ್ಮ ರಾಜ್ಯದಲ್ಲಿ ಮಹಿಳೆಯರ ಗೌರವ, ಭದ್ರತೆ ಮತ್ತು ಸಬಲೀಕರಣಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಕೆಲವು ಅಗ್ಗದ ಬೀದಿ ರೀಲರ್‌ಗಳು ಕೆಲವು ವೀಕ್ಷಣೆಗಳಿಗಾಗಿ ಯೋಗಿ ಜಿಯನ್ನು ಈ ರೀತಿ ಬಳಸಬಹುದೇ?” ಎಂದು ರಾಥೋರ್ ಬರೆದಿದ್ದಾರೆ.

“ಇದಷ್ಟೇ ಅಲ್ಲ, ಅಗ್ಗದ ಜನಪ್ರಿಯತೆಗಾಗಿ ಪ್ರಧಾನಿ ಮತ್ತು ಮಹಾತ್ಮ ಗಾಂಧಿಯವರ ವಿಡಿಯೊಗಳನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.

ವೈರಲ್ ಆಗಿರುವ ವಿಡಿಯೊಗಳು ಮಹಾತ್ಮ ಗಾಂಧಿ, ಮೋದಿ ಮತ್ತು ಆದಿತ್ಯನಾಥ್ ಭೋಜ್‌ಪುರಿ ಹಾಡುಗಳಿಗೆ ನೃತ್ಯ ಮತ್ತು ಹಾಡುವುದನ್ನು ತೋರಿಸುತ್ತವೆ.  ರಾಥೋಡ್ ಅವರು ಬಲ್ಲಿಯಾ ಪೊಲೀಸರಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ರಾಥೋಡ್ ಎಕ್ಸ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಮಹಾತ್ಮ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೋಜ್‌ಪುರಿ ಹಾಡಿಗೆ ನೃತ್ಯ ಮತ್ತು ಹಾಡುತ್ತಿರುವುದನ್ನು ಕಾಣಬಹುದು.

ಸೈಬರ್ ಠಾಣೆಯ ಮಾಧ್ಯಮ ವಿಭಾಗದ ಉಸ್ತುವಾರಿ ಪ್ರವೀಣ್ ಸಿಂಗ್ ಅವರ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ.

ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಝಾ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಹರಿಯಾಣದಲ್ಲೂ ಮುಡಾ ಹಗರಣದ ಸದ್ದು; ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಮೋದಿ ವಾಗ್ದಾಳಿ

‘ಚುನಾವಣಾ ಹಾಸ್ಯ’ ಎಂದಿದ್ದರು ಮೋದಿ

ಇತ್ತೀಚಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕನ್ ರಾಪರ್ ಲಿಲ್ ಯಾಚಿ ಅವರ ವೈರಲ್ ಟೆಂಪ್ಲೇಟ್ ಅನ್ನು ಆಧರಿಸಿ ಸಂಗೀತ ಕಚೇರಿಯಲ್ಲಿ ನೃತ್ಯ ಮಾಡುವ ಅನಿಮೇಟೆಡ್ ಮೀಮ್ ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. “ಈ ವಿಡಿಯೊವನ್ನು ಪೋಸ್ಟ್ ಮಾಡುವುದರಿಂದ ‘ದಿ ಡಿಕ್ಟೇಟರ್’ ನನ್ನನ್ನು ಇದಕ್ಕಾಗಿ ಬಂಧಿಸಲು ಹೋಗುವುದಿಲ್ಲ ಎಂದು ನನಗೆ ತಿಳಿದಿದೆ” ಎಂದು ಎಕ್ಸ್ ಬಳಕೆದಾರ @Atheist_Krishna ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಬರೆದಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ನಿಮ್ಮೆಲ್ಲರಂತೆ ನಾನೂ ಕೂಡ ನನ್ನ ನೃತ್ಯ ನೋಡಿ ಆನಂದಿಸಿದೆ. ಗರಿಷ್ಠ ಮತದಾನದ ಅವಧಿಯಲ್ಲಿ ಅಂತಹ ಸೃಜನಶೀಲತೆ ನಿಜವಾಗಿಯೂ ಖುಷಿ ಕೊಟ್ಟಿದೆ! #PollHumour” ಎಂದಿದ್ದಾರೆ ಪ್ರಧಾನಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ