Fire Mishap: ಉತ್ತರ ಪ್ರದೇಶದಲ್ಲಿ ಅಗ್ನಿ ದುರಂತ; ಒಂದೇ ಕುಟುಂಬದ ಐವರು ಸಜೀವ ದಹನ

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 28, 2022 | 7:05 AM

ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮೃತರ ಪೈಕಿ ಮೂವರು ಸಣ್ಣಮಕ್ಕಳಿದ್ದಾರೆ.

Fire Mishap: ಉತ್ತರ ಪ್ರದೇಶದಲ್ಲಿ ಅಗ್ನಿ ದುರಂತ; ಒಂದೇ ಕುಟುಂಬದ ಐವರು ಸಜೀವ ದಹನ
ಉತ್ತರ ಪ್ರದೇಶದ ಮೌ ಪಟ್ಟಣದ ಸಮೀಪ ಅಗ್ನಿ ಅನಾಹುತದಿಂದ ಮನೆ ಭಸ್ಮವಾಗಿದೆ.
Image Credit source: Tv9Kannada

ಲಖನೌ: ಉತ್ತರ ಪ್ರದೇಶದ ಮೌ (Uttar Pradesh Mau Town) ಪಟ್ಟಣದ ಸಮೀಪದ ಗ್ರಾಮವೊಂದರಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದಿದ್ದು, ಒಂದೇ ಕುಟುಂಬದ ಐವರು ಸಜೀವ ದಹನಗೊಂಡಿರುವ (Fire Accident) ಘಟನೆ ಮಂಗಳವಾರ ನಡೆದಿದೆ. ಶಹಪುರ್ ಗ್ರಾಮದಲ್ಲಿ ದುರಂತ ಸಂಭವಿಸಿದ ಮಾಹಿತಿ ಲಭ್ಯವಾದ ತಕ್ಷಣ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಜೀವ ಉಳಿಸಲು ಪ್ರಯತ್ನಿಸಿದರು. ಮೃತರ ಪಾರ್ಥಿವ ಶರೀರಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೌ ಜಿಲ್ಲಾಧಿಕಾರಿ ಅರುಣ್​ ಕುಮಾರ್, ‘ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮೃತರ ಪೈಕಿ ಮೂವರು ಸಣ್ಣಮಕ್ಕಳಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಕೊಪಗಂಜ್ ಪೊಲೀಸರು ಧಾವಿಸಿದರು. ಅಗ್ನಿಶಾಮಕ ದಳ, ವೈದ್ಯಕೀಯ ಮತ್ತು ಪರಿಹಾರ ಸಿಬ್ಬಂದಿಯ ತಂಡಗಳು ಸ್ಥಳಕ್ಕೆ ಧಾವಿಸಿದವು’ ಎಂದು ಹೇಳಿದ್ದಾರೆ. ‘ಒಲೆಯೊಂದರಿಂದ ಹಾರಿದ ಕಿಡಿಯಿಂದ ಅಗ್ನಿಅನಾಹುತ ಸಂಭವಿಸಿರಬಹುದು’ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ತುರ್ತು ಪರಿಹಾರವಾಗಿ ಉತ್ತರ ಪ್ರದೇಶ ಸರ್ಕಾರವು ಸಂತ್ರಸ್ತರ ಕುಟುಂಬಕ್ಕೆ ₹ 4 ಲಕ್ಷ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Video: ಇಂಡೋನೇಷ್ಯಾ ಮಸೀದಿಯಲ್ಲಿ ಅಗ್ನಿ ಅನಾಹುತ, ಧರೆಗುರುಳಿದ ಪವಿತ್ರ ಗುಮ್ಮಟ

ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada