AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dense Fog: ದೆಹಲಿಯಲ್ಲಿ ದಟ್ಟ ಹೊಂಜು; 100ಕ್ಕೂ ಹೆಚ್ಚು ವಿಮಾನಗಳು ತಡ, 2 ವಿಮಾನಗಳ ಮಾರ್ಗ ಬದಲಾವಣೆ

ರಾತ್ರಿ 11:45ಕ್ಕೆ ಬರಬೇಕಿದ್ದ ಸ್ಪೈಸ್​ಜೆಟ್ ಮತ್ತು ನಸುಕಿನ 2:15ಕ್ಕೆ ಇಳಿಯಬೇಕಿದ್ದ ಇಂಡಿಗೋ ವಿಮಾನಗಳನ್ನು ಜೈಪುರಕ್ಕೆ ಕಳುಹಿಸಲಾಯಿತು. ಈ ವರ್ಷ ಹೊಂಜಿನ ಕಾರಣಕ್ಕೆ ಮಾರ್ಗ ಬದಲಾವಣೆಯಾದ ಮೊದಲ ಎರಡು ವಿಮಾನಗಳಿವು.

Dense Fog: ದೆಹಲಿಯಲ್ಲಿ ದಟ್ಟ ಹೊಂಜು; 100ಕ್ಕೂ ಹೆಚ್ಚು ವಿಮಾನಗಳು ತಡ, 2 ವಿಮಾನಗಳ ಮಾರ್ಗ ಬದಲಾವಣೆ
ದೆಹಲಿಯಲ್ಲಿ ದಟ್ಟ ಮಂಜು
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 28, 2022 | 7:50 AM

Share

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಟ್ಟ ಹೊಂಜು (Flights Diverted) ನೀರಿನ ಕಣಗಳೊಂದಿಗೆ ಹೊಗೆ ಬೆರೆತ ಮಂಜು – Dense Fog) ಸೃಷ್ಟಿಯಾದ ಹಿನ್ನೆಲೆಯಲ್ಲಿ ಮಂಗಳವಾರ 100ಕ್ಕೂ ಹೆಚ್ಚು ವಿಮಾನಗಳ ವೇಳೆ  ಬದಲಾವಣೆ ಮಾಡಲಾಗಿತ್ತು. ದೃಷ್ಟಿ ಸಾಮರ್ಥ್ಯವು ಕೇವಲ 200 ಮೀಟರ್​ಗಳಿಗೆ ಕುಸಿದಿತ್ತು. ರಾತ್ರಿ 11:45ಕ್ಕೆ ಬರಬೇಕಿದ್ದ ಸ್ಪೈಸ್​ಜೆಟ್ ಮತ್ತು ನಸುಕಿನ 2:15ಕ್ಕೆ ಇಳಿಯಬೇಕಿದ್ದ ಇಂಡಿಗೋ ವಿಮಾನಗಳನ್ನು ಜೈಪುರಕ್ಕೆ ಕಳುಹಿಸಲಾಯಿತು. ಈ ವರ್ಷ ಹೊಂಜಿನ ಕಾರಣಕ್ಕೆ ಮಾರ್ಗ ಬದಲಾವಣೆಯಾದ ಮೊದಲ ಎರಡು ವಿಮಾನಗಳಿವು.

ಎರಡೂ ಪ್ರಕರಣಗಳಲ್ಲಿ ಪೈಲಟ್​ಗಳು ರನ್​ವೇ ಸರಿಯಾಗಿ ಗುರುತಿಸಲು ಆಗುತ್ತಿಲ್ಲ ಎಂದು ನಿಲ್ದಾಣ ನಿಯಂತ್ರಕರಿಗೆ ತಿಳಿಸಿದ್ದರು. 50 ಮೀಟರ್​ಗಳಷ್ಟು ದೂರದಿಂದಲೂ ರನ್​ವೇ ಗುರುತಿಸಲು ವಿಫಲರಾದ ಹಿನ್ನೆಲೆಯಲ್ಲಿ ಎಟಿಸಿ (Air Traffic Controller – ATC) ಕೇಂದ್ರವು ಎರಡೂ ವಿಮಾನಗಳನ್ನು ಸಮೀಪದ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಿತು. ಹತ್ತಿರದ ವಿಮಾನ ನಿಲ್ದಾಣ ಜೈಪುರವಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. 50 ಮೀಟರ್​ಗಳಿಗೂ ಕಡಿಮೆ ಅಂತರದಲ್ಲಿ ರನ್​ವೇ ಕಾಣಿಸುವ ಪರಿಸ್ಥಿತಿ (Runway Visibility Range – RVR) ಇದ್ದಾಗಲೂ ವಿಮಾನಗಳನ್ನು ಇಳಿಸಲು ಅನುಮತಿ ನೀಡಲಾಗುತ್ತದೆ. ಆದರೆ ವಿಮಾನಗಳು ಹಾರಲು ಕನಿಷ್ಠ 125 ಮೀಟರ್​ಗಳ ವಿಸಿಬಿಲಿಟಿ ಇರಬೇಕು ಎನ್ನುವ ನಿಯಮವಿದೆ. ಹೀಗಾಗಿ ಹಲವು ವಿಮಾನಗಳು ನಿಲ್ದಾಣದಿಂದ ಹಾರುವುದು ಸಹ ತಡವಾಯಿತು.

ಮಂಗಳವಾರ ನಸುಕಿನ 3.30ರಿಂದ 7.30ರ ಅವಧಿಯಲ್ಲಿ 50 ಮೀಟರ್​ಗೂ ಕಡಿಮೆ ದೂರಕ್ಕೆ ವಿಸಿಬಲಿಟಿ ಕುಸಿದಿತ್ತು. 7.30ರ ನಂತರ ಪರಿಸ್ಥಿತಿ ಸುಧಾರಿಸಿತು. ಈ ನಾಲ್ಕು ಗಂಟೆಗಳ ಅವಧಿಯಲ್ಲಿ ಪಾಲಮ್ ಮತ್ತು ಸಫ್ತಾರ್​ಜಂಗ್ ಪ್ರದೇಶದಲ್ಲಿ ವಿಸಿಬಲಿಟಿ ಕುಸಿದಿದ್ದ ಕಾರಣ CAT-III B ಪ್ರಕ್ರಿಯೆಗಳನ್ನು ಜಾರಿಗೊಳಿಸಲಾಯಿತು. CAT-III B ಪ್ರಕ್ರಿಯೆಗಳು ಜಾರಿಯಲ್ಲಿದ್ದಾಗ ಪೈಲಟ್​ಗಳನ್ನು ರನ್​ವೇಯನ್ನು ನಿಖರವಾಗಿ ಗುರುತಿಸಿದ್ದು ಮನವರಿಕೆಯಾದರೆ ಮಾದರೆ ಎಟಿಸಿ ಕೇಂದ್ರವು ವಿಮಾನ ಇಳಿಸಲು ಅನುಮತಿ ನೀಡುತ್ತದೆ.

ಮುಂದಿನ ಎರಡು ದಿನಗಳ ಅವಧಿಗೂ ದೆಹಲಿಯಲ್ಲಿ ಸಾಧಾರಣದಿಂದ ಭಾರೀ ಹೊಂಜು ಆವರಿಸಬಹುದು. ರಾಷ್ಟ್ರ ರಾಜಧಾನಿಯ ವಿವಿಧೆಡೆ ವಿಸಿಬಲಿಟಿ ಪ್ರಮಾಣವು 200 ಮೀಟರ್​ಗೂ ಕಡಿಮೆ ವಿಸ್ತೀರ್ಣಕ್ಕೆ ಕುಸಿಯಬಹುದು ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ಇದನ್ನೂ ಓದಿ: US Winter Storm: ಅಮೆರಿಕದಲ್ಲಿ ಭೀಕರ ಹಿಮಪಾತದಿಂದ 34 ಜನ ಸಾವು; ಹಲವು ವಿಮಾನಗಳು ರದ್ದು, ವಿದ್ಯುತ್ ಇಲ್ಲದೆ ಲಕ್ಷಾಂತರ ಜನರ ಪರದಾಟ

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು