ಪಾಕ್​ ಸ್ನೈಪರ್‌ ದಾಳಿಗೆ ರಕ್ಷಣಾ ಕವಚ, ಮೇಜರ್‌ ಅನೂಪ್‌ ಸಿದ್ಧಪಡಿಸಿದ ಈ ಜಾಕೆಟ್‌ ತಾಕತ್ತೇನು?

ಪಾಕ್​ ಸ್ನೈಪರ್‌ ದಾಳಿಗೆ ರಕ್ಷಣಾ ಕವಚ, ಮೇಜರ್‌ ಅನೂಪ್‌ ಸಿದ್ಧಪಡಿಸಿದ ಈ ಜಾಕೆಟ್‌ ತಾಕತ್ತೇನು?

ದೆಹಲಿ: ಪಾಕಿಸ್ತಾನ ನಡೆಸೋ ಸ್ನೈಪರ್ ದಾಳಿಗಳನ್ನ ಮೆಟ್ಟಿನಿಲ್ಲೋಕೆ ಭಾರತಕ್ಕೆ ಸಿಕ್ಕಿದೆ ಪರಮ ಶಕ್ತಿ. ಅದುವೇ ಈ ಸರ್ವತ್ರ ರಕ್ಷಣಾ ಕವಚ. ಇನ್ಮುಂದೆ ಶತ್ರುಗಳ ಕಾಣದ ಸ್ನೈಪರ್​ ದಾಳಿಗೆ ಬಲಿಯಾಗೋದಿಲ್ಲ ನಮ್ಮ ಸೇನಾನಿಗಳು. ಇಂಥಾದ್ದೊಂದು ಬಲಿಷ್ಟ ಶಕ್ತಿಯಲ್ಲಿ ಭಾರತ ಸೇನೆಗೆ ತುಂಬಿರೋದು ಯಾರು ಗೊತ್ತಾ? ಅವರೇ ಮೇಜರ್ ಅನೂಪ್ ಮಿಶ್ರಾ. ಅಷ್ಟಕ್ಕೂ ಯಾರು ಈ ಅನೂಪ್ ಮಿಶ್ರಾ? ಯಾವುದು ಅನೂಪ್ ಮಿಶ್ರಾರ ಆ ಆಧುನಿಕ ರಕ್ಷಾಕವಚ? ಏನಿದರ ವಿಶೇಷತೆ? ಬಲಿಷ್ಠ ಭಾರತವನ್ನ ನೇರಾನೇರ ಯುದ್ಧ ಸಾರಿ ಎದುರಿಸಲು ಹೆದರುವ […]

sadhu srinath

|

Nov 19, 2020 | 12:01 AM

ದೆಹಲಿ: ಪಾಕಿಸ್ತಾನ ನಡೆಸೋ ಸ್ನೈಪರ್ ದಾಳಿಗಳನ್ನ ಮೆಟ್ಟಿನಿಲ್ಲೋಕೆ ಭಾರತಕ್ಕೆ ಸಿಕ್ಕಿದೆ ಪರಮ ಶಕ್ತಿ. ಅದುವೇ ಈ ಸರ್ವತ್ರ ರಕ್ಷಣಾ ಕವಚ. ಇನ್ಮುಂದೆ ಶತ್ರುಗಳ ಕಾಣದ ಸ್ನೈಪರ್​ ದಾಳಿಗೆ ಬಲಿಯಾಗೋದಿಲ್ಲ ನಮ್ಮ ಸೇನಾನಿಗಳು. ಇಂಥಾದ್ದೊಂದು ಬಲಿಷ್ಟ ಶಕ್ತಿಯಲ್ಲಿ ಭಾರತ ಸೇನೆಗೆ ತುಂಬಿರೋದು ಯಾರು ಗೊತ್ತಾ? ಅವರೇ ಮೇಜರ್ ಅನೂಪ್ ಮಿಶ್ರಾ. ಅಷ್ಟಕ್ಕೂ ಯಾರು ಈ ಅನೂಪ್ ಮಿಶ್ರಾ? ಯಾವುದು ಅನೂಪ್ ಮಿಶ್ರಾರ ಆ ಆಧುನಿಕ ರಕ್ಷಾಕವಚ? ಏನಿದರ ವಿಶೇಷತೆ?

ಬಲಿಷ್ಠ ಭಾರತವನ್ನ ನೇರಾನೇರ ಯುದ್ಧ ಸಾರಿ ಎದುರಿಸಲು ಹೆದರುವ ಪುಕ್ಕಲು ಪಾಕಿಸ್ತಾನ. ಒಂದೊಮ್ಮೆ ಸೈನಿಕರ ಮೂಲಕ ಗಡಿಯಲ್ಲಿ. ಇನ್ನೊಮ್ಮೆ ಉಗ್ರರ ಮೂಲಕ ದೇಶದೊಳಗೆ ನುಗ್ಗಿ ದಾಳಿ ನಡೆಸುತ್ತಾರೆ. ಗಡಿಯಲ್ಲಿ ಭಾರತೀಯ ಯೋಧರನ್ನು ಸ್ನೈಪರ್‌ಗಳ ಮೂಲಕ ಗುರಿಯಾಗಿಸೋ ಸಾಕಷ್ಟು ಘಟನೆಗಳು ನಡೆದಿವೆ. ಭಾರತೀಯ ಯೋಧರನ್ನು ಗುರಿಯಾಗಿಸಿ ಪಾಕಿಸ್ತಾನಿ ಕುತಂತ್ರಿಗಳು ಸ್ನೈಪರ್ ದಾಳಿ ನಡೆಸಲು ಹೊಂಚು ಹಾಕಿ ಕೂರ್ತಾರೆ. ಈ ರೀತಿ ಪಾಕಿಸ್ತಾನದ ಸ್ನೈಪರ್ ದಾಳಿಗೆ ಬಲಿಯಾದ ಭಾರತೀಯ ಯೋಧರ ದೊಡ್ಡ ಪಟ್ಟಿಯೇ ಇದೆ.

ಸ್ನೈಪರ್ ದಾಳಿಯಲ್ಲಿ ಹುತಾತ್ಮರಾದ ಯೋಧರು: ಪಾಕಿಸ್ತಾನಿ ಪಡೆ ಭಾರತದ ಸೈನಿಕರ ಮೇಲೆ ರಹಸ್ಯವಾಗಿ ನಡೆಸಿದ ಸ್ನೈಪರ್ ದಾಳಿಯಲ್ಲಿ ಕಳೆದ 2018ರ ಸೆಪ್ಟಂಬರ್ ಮತ್ತು ಅಕ್ಟೋಬರ್​ನಲ್ಲಿ ಮೂರು ಸ್ನೈಪರ್ ದಾಳಿಗಳು ನಡೆದಿವೆ. ಅವುಗಳಲ್ಲಿ 18 ಸೆಪ್ಟಂಬರ್ 2018ರಲ್ಲಿ ಪುಲ್ವಾಮಾದಲ್ಲಿ ನಡೆದ ಸ್ನೈಪರ್ ದಾಳಿಗೆ ಎಸ್ಎಸ್​ಬಿ ಯೋಧ ವಿಜಯ್ ಕುಮಾರ್ ಹುತಾತ್ಮರಾಗಿದ್ರು. ಬಳಿಕ 26 ಅಕ್ಟೋಬರ್ 2018, ತ್ರಾಲ್ ಪ್ರದೇಶದಲ್ಲಿ, ಪಾಕ್ ಸ್ನೈಪರ್ ದಾಳಿಗೆ ರಾಜೇಂದ್ರ ಸಿಂಹ್ ಹುತಾತ್ಮರಾದ್ರು. ಇದಾದ ಒಂದೇ ದಿನದ ಅಂತರದಲ್ಲಿ 27 ಅಕ್ಟೋಬರ್ 2018, ನೌಗಾಮ್ ಪ್ರದೇಶದಲ್ಲಿ ಸಿಐಎಸ್​ಎಫ್ ಅಧಿಕಾರಿ ರಾಜೇಂದ್ರ ಪ್ರಸಾದ್, ಪಾಕ್ ಪಡೆಯ ಸ್ನೈಪರ್ ದಾಳಿಗೆ ಹುತಾತ್ಮರಾದ್ರು.

ಹೀಗೆ ಸ್ನೈಪರ್ ರೈಫಲ್ ಬಳಸಿ ಒಂದು ಕಿಲೋಮೀಟರ್ ದೂರದಲ್ಲಿ ಅವಿತುಕೊಂಡು, ಹೊಂಚು ಹಾಕಿ ಪಾಕಿಸ್ತಾನದ ಪಾಪಿಗಳು ಭಾರತೀಯ ಯೋದರ ಮೇಲೆ ದಾಳಿ ನಡೆಸಿದ್ದಾರೆ. ಅಷ್ಟಕ್ಕೂ ಇಂಥಾ ಸ್ನೈಪರ್ ರಫೈಲ್ ಗಳ ಶಕ್ತಿಯಾದ್ರು ಎಂಥಾದ್ದು? ಈ ಸ್ನೈಫರ್‌ ರೈಫಲ್‌ಗಳ ವಿಶೇಷತೆಗಳಾದ್ರೂ ಏನ? ಈ ಸ್ನೈಫರ್​ ರಫೈಲ್​ಗಳ ತೂಕ ಕಾಟ್ರಿಜ್ ಇಲ್ಲದೆ ಇದ್ದಲ್ಲಿ 2.9 ಕೆಜಿಗಳಷ್ಟು ಇರುತ್ತೆ. 30 ಸುತ್ತುಗಳ ಗುಂಡುಗಳನ್ನ ಇದರಲ್ಲಿ ತುಂಬಿಸಿದ್ದೇ ಆದ್ರೆ, ಇದರ ತೂಕ 3.4ಕೆಜಿಗಳಷ್ಟು ಇರುತ್ತೆ.

ಇದೇ ಕಾರಣಕ್ಕೆ ಇದನ್ನ ಸುಲಭವಾಗಿ ಹೊತ್ತು ತರಬಹುದಾಗಿದೆ. ಈ ಎಮ್-4 ಸ್ನೈಪರ್ ರೈಫಲ್ ಒಂದೇ ನಿಮಿಷದಲ್ಲಿ ಬರೋಬ್ಬರಿ 750ರಿಂದ. 900 ಬುಲ್ಲಟ್​ಗಳನ್ನ ಹಾರಿಸೋ ಸಾಮರ್ಥ್ಯ ಹೊಂದಿದೆ. ಈ ರೈಫೈಲ್​ನಿಂದ ಸಿಡಿಸುವ ಗುಂಡು ಒಂದು ಸೆಕೆಂಡಿಗೆ ಬರೋಬ್ಬರಿ 910 ಮೀಟರ್ ಗಳಷ್ಟು ವೇಗದಲ್ಲಿ ನುಗ್ಗುತ್ತೆ. ಇದರ ಅರ್ಥ, ಸುಮಾರು 900ಮೀಟರ್​ನಷ್ಟು ದೂರದಲ್ಲಿರೋ ಗುರಿಯನ್ನು ಕೂಡಾ ಕೇವಲ ಒಂದೇ ಸೆಕೆಂಡ್‌​ನಲ್ಲಿ ತಲುಪುತ್ತೆ ಈ ಸ್ನೈಪರ್​.

ಆಧುನಿಕ ಯುಗದಲ್ಲಿ ಅತ್ಯಾಧುನಿಕ ರಕ್ಷಣಾಕವಚ! ಮೇಜರ್ ಅನೂಪ್ ಮಿಶ್ರಾ ಸಿದ್ಧಪಡಿಸಿರೋ ಈ ಬುಲೆಟ್ ಪ್ರೂಫ್ ಜಾಕೆಟ್ ಸೇನಾನಿಗಳ ಕೈಸೇರಿದ್ರೆ.. ಗಡಿಯಲ್ಲಿ ನಡೆಯೋ ಗುಂಡಿನ ಕಾಳಗವೇ ಆಗಿರಲಿ.. ಗುಳ್ಳೆನರಿಯಂತೆ ಬಂದು ಶತ್ರುಗಳು ಸುರಿಸೋ ಗುಂಡಿನ ಸುರಿಮಳೆಯೇ ಆಗಿರಲಿ. ಸ್ನೈಪರ್ ದಾಳಿಗಳೇ ಆಗಿರಲಿ.. ಯೋಧರಿಗೆ ಯಾವುದೇ ಪ್ರಾಣ ಹಾನಿಯಾಗದಂತೆ ರಕ್ಷಣೆ ಮಾಡುತ್ತೆ. 2018ರಲ್ಲೇ ದೇಶಕಾಯೋ ಸೇನಾನಿಗಳಿಗೆ, ಉಗ್ರರ ಸಂಹಾರಕ್ಕೆ ಕಾರ್ಯಾಚರಣೆಗೆ ಇಳಿಯೋ ಯೋಧರಿಗೆ 1 ಲಕ್ಷದ 63 ಸಾವಿರ ಬುಲೆಟ್ ಪ್ರೂಫ್ ಜಾಕೆಟ್​ಗಳನ್ನ ಭಾರತೀಯ ಸೇನೆ ಒದಗಿಸಿತ್ತು. ಆದ್ರೆ ಆ ಎಲ್ಲಾ ಬುಲೆಟ್ ಪ್ರೂಫ್ ಜಾಕೆಟ್​ಗಳಿಗಿಂತ ಬಲಿಷ್ಠ ಹಾಗೂ ಅತ್ಯಾಧುನಿಕ ಜಾಕೆಟ್​ಗಳನ್ನ ಅನೂಪ್ ಮಿಶ್ರಾ ಸಿದ್ಧಪಡಿಸಿದ್ದಾರೆ.

ಮೇಜರ್ ಅನೂಪ್ ಮಿಶ್ರಾ ಸಾಧನೆಗೆ ಪ್ರಶಸ್ತಿಯ ಕಿರೀಟ! ಯೋಧರ ಜೀವ ರಕ್ಷಣೆಗಾಗಿ. ಮೇಜರ್ ಅನೂಪ್ ಮಿಶ್ರಾ ಸಿದ್ಧಪಡಿಸಿದ ಈ ಅತ್ಯಾಧುನಿಕ ಬುಲೆಟ್ ಪ್ರೂಫ್ ಜಾಕೆಟ್​ಗೆ ದೇಶವೇ ಜೈ ಅಂತಿದೆ. ಸೇನಾಧಿಕಾರಿಗಳಿಂದಲೂ, ಸರ್ಕಾರದಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಅತ್ತ ಪಾಕಿಸ್ತಾನ ಮೇಜರ್ ಅನೂಪ್ ಮಿಶ್ರಾ ಸಾಧನೆ ಕಂಡು ಕೈ ಹಿಸುಕಿಕೊಳ್ಳುತ್ತಿದ್ರೆ. ಮೇಜರ್ ಅನೂಪ್ ಶರ್ಮಾ 2019ರ ಅತ್ಯುತ್ತಮ ಸೇನಾ ಸಮವಸ್ತ್ರದ ವಿನ್ಯಾಸಕಾರ ಅನ್ನೋ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada