ಆದೇಶ ಪಾಲಿಸುತ್ತಿಲ್ಲ, ಕೆಲಸದಲ್ಲಿಯೂ ಇಲ್ಲ ಆಸಕ್ತಿ; ಪೊಲೀಸ್ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದು ಹಾಕಿದ ಉತ್ತರ ಪ್ರದೇಶ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: May 12, 2022 | 9:07 AM

ಗೋಯೆಲ್ ಅವರ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಕಳೆದ ತಿಂಗಳು ಗೋಯೆಲ್ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮುಖ್ಯಮಂತ್ರಿಯೊಂದಿಗಿನ ಪ್ರಮುಖ ಸಭೆಗೂ ಗೈರು ಹಾಜರಾಗಿದ್ದರು.

ಆದೇಶ ಪಾಲಿಸುತ್ತಿಲ್ಲ, ಕೆಲಸದಲ್ಲಿಯೂ ಇಲ್ಲ ಆಸಕ್ತಿ; ಪೊಲೀಸ್ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದು ಹಾಕಿದ ಉತ್ತರ ಪ್ರದೇಶ ಸರ್ಕಾರ
ಮುಕುಲ್ ಗೋಯೆಲ್
Follow us on

ದೆಹಲಿ:  “ಕೆಲಸದಲ್ಲಿ ಆಸಕ್ತಿ ವಹಿಸುತ್ತಿಲ್ಲ” ಮತ್ತು “ಆದೇಶವನ್ನು ಪಾಲಿಸುತ್ತಿಲ್ಲ” ಎಂಬ ಕಾರಣದಿಂದ ಉತ್ತರ ಪ್ರದೇಶದ (Uttar Pradesh) ಪೊಲೀಸ್ ಮುಖ್ಯಸ್ಥರನ್ನು ಅವರ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಪೊಲೀಸ್ ಮಹಾನಿರ್ದೇಶಕ ಮುಕುಲ್ ಗೋಯೆಲ್ (Mukul Goel) ಅವರನ್ನು ಅತ್ಯಲ್ಪ ಹುದ್ದೆಗೆ ಇಳಿಸಿ ಹಿಂಭಡ್ತಿ ನೀಡಿ ನಾಗರಿಕ ರಕ್ಷಣಾ ಇಲಾಖೆಯ (Civil Defence department)ಮಹಾನಿರ್ದೇಶಕರಾಗಿ ನಿಯೋಜಿಸಲಾಗಿದೆ. ಸದ್ಯ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಅವರಿಗೆ ಪೊಲೀಸ್ ಮುಖ್ಯಸ್ಥರ ಜವಾಬ್ದಾರಿ ನೀಡಲಾಗಿದೆ. ಗೋಯೆಲ್ ಅವರ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಕಳೆದ ತಿಂಗಳು ಗೋಯೆಲ್ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮುಖ್ಯಮಂತ್ರಿಯೊಂದಿಗಿನ ಪ್ರಮುಖ ಸಭೆಗೂ ಗೈರು ಹಾಜರಾಗಿದ್ದರು. 1987 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ, ಮುಕುಲ್ ಗೋಯೆಲ್ ಅವರು ಜುಲೈ 2021 ರಲ್ಲಿ ರಾಜ್ಯದ ಉನ್ನತ ಪೋಲೀಸ್ ಆಗಿ ಅಧಿಕಾರ ವಹಿಸಿಕೊಂಡರು. ಅವರು ಅಪರಾಧ ನಿಯಂತ್ರಣದ ಮೇಲೆ ಕೇಂದ್ರೀಕರಿಸುವುದಾಗಿ ಮತ್ತು ಪೊಲೀಸರು ಸೂಕ್ಷ್ಮ ಮತ್ತು ರಾಜ್ಯದ ಜನರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದಾಗಿ ಹೇಳಿದ್ದರು.

ಅವರು ಈ ಹಿಂದೆ ಅಲ್ಮೋರಾ, ಜಲೌನ್, ಮೈನ್‌ಪುರಿ, ಹತ್ರಾಸ್, ಅಜಂಗಢ್, ಗೋರಖ್‌ಪುರ, ವಾರಣಾಸಿ, ಸಹರಾನ್‌ಪುರ ಮತ್ತು ಮೀರತ್ ಜಿಲ್ಲೆಗಳಲ್ಲಿ ಎಸ್‌ಪಿ/ಎಸ್‌ಎಸ್‌ಪಿಯಾಗಿ ಕೆಲಸ ಮಾಡಿದ್ದರು. ಅವರು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಲ್ಲೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ
ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತಾಯಿಯನ್ನು ಭೇಟಿ ಮಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ