ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರದಂದು ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ಕೊವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಮೇ 10 ರಂದು ಗರಿಷ್ಠ ಪ್ರಮಾಣ ತಲುಪಿದ ನಂತರ ಈಗ 22,28,724ಕ್ಕೆ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 1,73,790 ಹೊಸ ಪ್ರಕರಣಗಳು ಪತ್ತೆಯಾಗಿವೆ ಮತ್ತು ಇದೇ ಅವಧಿಯಲ್ಲಿ 3,617 ಜನ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಇದುವರೆಗೆ 2,77,29,247 ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ಅರೋಗ್ಯ ಸಚಿವಾಲಯ ಹೇಳಿದೆ.
ಭಾರತದ ಕೊವಿಡ್ ಪ್ರಕರಣಗಳನ್ನು ಕುರಿತಂತೆ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಹೀಗಿದೆ:
1. ಸತತವಾಗಿ 13ನೇ ದಿನ ಭಾರತಲ್ಲಿ 3 ಲಕ್ಷಕ್ಕಿಂತ ಕಡಿಮೆ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಕಳೆದೆರಡು ದಿನಗಳಿಂದ 200,000 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಕೊರೋನಾ ವೈರಸ್ ರೋಗದ ಪ್ರಕರಣಗಳು ದಾಖಲಾಗಿವೆ ಎಂದು ಅರೋಗ್ಯ ಇಲಾಖೆ ಹೇಳಿದೆ.
2. ಕಳೆದ 24 ಗಂಟೆಗಳಲ್ಲಿ ಒಟ್ಟು 1,14, 428ರಷ್ಟು ಪ್ರಕರಣಗಳು ತಗ್ಗಿವೆ ಮತ್ತ ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳು ಶೇಕಡಾ 8.04 ಮಾತ್ರ ಇವೆ ಎಂದು ಇಲಾಖೆಯ ಪ್ರಕಟಣೆ ತಿಳಿಸುತ್ತದೆ.
3. ಕಳೆದ 24 ಗಂಟೆಗಳಲ್ಲಿ ಸಂಭವಿಸಿರುವ 3,617 ಸಾವುಗಳ ಪೈಕಿ 873 ಮಹಾರಾಷ್ಟ್ರದಲ್ಲಿ, 486 ತಮಿಳುನಾಡು, 401 ಕರ್ನಾಟಕ, 194 ಕೇರಳ, 176 ಪಂಜಾಬ್, 154 ಉತ್ತರ ಪ್ರದೇಶ, 145 ಪಶ್ಚಿಮ ಬಂಗಾಳ, 139 ದೆಹಲಿ ಮತ್ತು 103 ಆಂಧ್ರ ಪ್ರದೇಶದಲ್ಲಿ ವರದಿಯಾಗಿವೆ.
4. ಇಲಾಖೆಯ ಡ್ಯಾಶ್ಬೋರ್ಡ್ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಇದುವರೆಗೆ 93,198, ಕರ್ನಾಟಕದಲ್ಲಿ 27,806, ದೆಹಲಿಯಲ್ಲಿ 23,951, ತಮಿಳುನಾಡಿನಲ್ಲಿ 22,775, ಉತ್ತರ ಪ್ರದೇಶದಲ್ಲಿ 20,053, ಪಶ್ಚಿಮ ಬಂಗಾಳದಲ್ಲಿ 15,120, ಪಂಜಾಬ್ನಲ್ಲಿ 14,180 ಮತ್ತು ಛತ್ತೀಸ್ಗಡ್ನಲ್ಲಿ 12,915 ಜನ ಸೋಂಕಿನಿಂದಾಗಿ ಮರಣವನ್ನಪ್ಪಿದ್ದಾರೆ.
5 .ಸತತವಾಗಿ 16 ನೇ ದಿನ ಭಾರತದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಜಾಸ್ತಿಯಿದೆ. ಇಲಾಖೆ ನೀಡಿರುವ ಮಾಹಿತಿಯನ್ವಯ, ಕಳೆದ 24 ಗಂಟೆಗಳಲ್ಲಿ 2,84,601 ಜನ ಸೋಕಿನಿಂದ ಚೇತರಿಸಿಕೊಂಡಿದ್ದಾರೆ ಮತ್ತು ದಿನವಹಿ ಗುಣಹೊಂದಿದವರ ಹಿನ್ನೆಲೆಯಿಂದ ನೋಡಿದರೆ ಕಳೆದ 24 ಗಂಟೆಗಳಲ್ಲಿ 1,10,811 ಹೆಚ್ಚುವರಿ ಜನ ಗುಣಮುಖರಾಗಿದ್ದಾರೆ.
6. ದೇಶದಲ್ಲಿ ಪಿಡುಗು ಆರಂಭಗೊಂಡ ನಂತರ ಇದುವರೆಗೆ 2,51,78,011 ಜನ ಕೋವಿಡ್-19 ರೋಗದಿಂದ ಗುಣಮುಖರಾಗಿದ್ದಾರೆ. ಗುಣ ಹೊಂದಿರುವವರು ಒಟ್ಟಾರೆ ಶೇಕಡಾ 90.80 ರಷ್ಟಿದ್ದಾರೆ ಎಂದು ಇಲಾಖೆ ತಿಳಿಸಿದೆ.
7. ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 20,80,048 ಕೋವಿಡ್ ಟೆಸ್ಟ್ಗಳನ್ನು ಮಾಡಲಾಗಿದೆ. ಭಾರತದಲ್ಲಿ ಇದುವರಗೆ 34.11 ಕೋಟಿ ಟೆಸ್ಟ್ಗಳನ್ನು ಮಾಡಲಾಗಿದೆಯೆಂದು ಇಲಾಖೆ ಹೇಳಿದೆ.
8. ವಾರಾವಹಿ ಪಾಸಿಟಿವಿಟಿ ಪ್ರಮಾಣ ಸಹ ಕಡಿಮೆಯಾಗುತ್ತಿದೆ ಎಂದು ಇಲಾಖೆ ಹೇಳಿದೆ. ಪ್ರಸಕ್ತ ಸಾಪ್ತಾಹಿಕ ಪಾಸಿಟಿವಿಟಿ ಪ್ರಮಾಣ ಶೇಕಡಾ 9.84 ರಷ್ಟಿದ್ದು ಶನಿವಾರದಂದು ಅದು ಶೇಕಡಾ 8.36 ಕ್ಕಿಳಿದಿದೆ. ಕಳೆದ 5 ದಿನಗಳಿಂದ ಅದು ಶೇಕಡಾ 10ಕ್ಕಿಂತ ಕಮ್ಮಿಯಿದೆ.
9. ಶನಿವಾರದವರೆಗೆ ದೇಶದಲ್ಲಿ ಕೊವಿಡ್ ಲಸಿಕೆಯ 20.89 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಅಮೇರಿಕ ನಂತರ 20 ಕೋಟಿಗಿಂತ ಹೆಚ್ಚು ಲಸಿಕಾ ಡೋಸ್ಗಳನ್ನು ನೀಡಿರುವ ಎರಡನೇ ರಾಷ್ಟ್ರ ಭಾರತವಾಗಿದೆ ಎಂದ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
10. ಶನಿವಾರ ಬೆಳಗ್ಗೆ 7 ಗಂಟೆಯವರೆಗೆ 29,72,971 ಸೆಷನ್ಗಳಲ್ಲಿ 20,89,02,445 ಡೋಸುಗಳನ್ನು ನೀಡಲಾಗಿದೆ ಎಂದು ಅರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Covid Warriors: ಕೊವಿಡ್ ಸೇನಾನಿಗಳಿಗೆ ಪ್ರೋತ್ಸಾಹ ಧನ 6 ತಿಂಗಳವರೆಗೂ ವಿಸ್ತರಣೆ ಮಾಡುವಂತೆ ಆದೇಶ