AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ದಾಖಲೆ ಪ್ರಕರಣ: ದಾವೂದ್ ಇಬ್ರಾಹಿಂನ ಆಪ್ತ ಛೋಟಾ ಶಕೀಲ್‌ನ ಮೈದುನ ಸಲೀಂ ಖುರೇಷಿ ವಿರುದ್ಧ ಎಫ್‌ಐಆರ್

ದಕ್ಷಿಣ ಮುಂಬೈನ ನಲ್ ಬಜಾರ್ ಪ್ರದೇಶದಲ್ಲಿ ಕಟ್ಟಡವನ್ನು ಹೊಂದಿರುವ ಮೊಹಮ್ಮದ್ ರಫೀಕ್ ತಾಂಬೆ, ಖುರೇಷಿ ವಿರುದ್ಧ ಫೋರ್ಜರಿ ಪ್ರಕರಣವನ್ನು ದಾಖಲಿಸಿದ್ದಾರೆ.

ನಕಲಿ ದಾಖಲೆ ಪ್ರಕರಣ: ದಾವೂದ್ ಇಬ್ರಾಹಿಂನ ಆಪ್ತ ಛೋಟಾ ಶಕೀಲ್‌ನ ಮೈದುನ ಸಲೀಂ ಖುರೇಷಿ ವಿರುದ್ಧ ಎಫ್‌ಐಆರ್
ದಾವೂದ್ ಇಬ್ರಾಹಿಂ
TV9 Web
| Edited By: |

Updated on: Aug 10, 2022 | 9:07 PM

Share

ದಾವೂದ್ ಇಬ್ರಾಹಿಂನ (Dawood Ibrahim) ಆಪ್ತ ಛೋಟಾ ಶಕೀಲ್‌ನ ಮೈದುನ ಸಲೀಂ ಖುರೇಷಿ (Salim Qureshi) ಸೇರಿದಂತೆ ಒಂಬತ್ತು ಜನರ ವಿರುದ್ಧ ಮುಂಬೈನ ದಾದರ್ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ. ಮುಂಬೈನಲ್ಲಿರುವ ಆಸ್ತಿಯೊಂದಕ್ಕೆ ಕಡಿಮೆ ತೆರಿಗೆ ಪಾವತಿಸಲು ಒಂಬತ್ತು ಜನರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಸಲೀಂ ಫ್ರೂಟ್ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಖುರೇಷಿಯನ್ನು ಈ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದ್ದು ಪ್ರಸ್ತುತ ಎನ್‌ಐಎ ಕಸ್ಟಡಿಯಲ್ಲಿದ್ದಾನೆ. ದಕ್ಷಿಣ ಮುಂಬೈನ ನಲ್ ಬಜಾರ್ ಪ್ರದೇಶದಲ್ಲಿ ಕಟ್ಟಡವನ್ನು ಹೊಂದಿರುವ ಮೊಹಮ್ಮದ್ ರಫೀಕ್ ತಾಂಬೆ, ಖುರೇಷಿ ವಿರುದ್ಧ ಫೋರ್ಜರಿ ಪ್ರಕರಣವನ್ನು ದಾಖಲಿಸಿದ್ದಾರೆ. ಖುರೇಷಿ ಮತ್ತು ಪ್ರಕರಣದ ಇತರ ಆರೋಪಿಗಳು ಕಡಿಮೆ ತೆರಿಗೆ ಪಾವತಿಸಲು ಆಸ್ತಿ ಮಾರಾಟದ ಬಗ್ಗೆ ನಕಲಿ ದಾಖಲೆಗಳನ್ನು ಬಳಸಿ ರಾಜ್ಯದ ಬೊಕ್ಕಸಕ್ಕೆ ವಂಚಿಸಿದ್ದಾರೆ ಎಂದು ತಾಂಬೆ ಪೊಲೀಸರಿಗೆ ತಿಳಿಸಿದ್ದಾರೆ. ಖುರೇಷಿ ಅವರು ಕಟ್ಟಡದ ಐವತ್ತು ಪ್ರತಿಶತವನ್ನು ಖರೀದಿಸಿದ್ದರಿಂದ ಬಾಡಿಗೆದಾರರಿಗೆ ಬಾಡಿಗೆ ಪಾವತಿಸಬೇಕೆಂದು ವಕೀಲರಿಂದ ನೋಟಿಸ್ ಬಂದಾಗ ವಿಷಯ ತಾಂಬೆ ಅವರ ಗಮನಕ್ಕೆ ಬಂದಿತು. ತಾಂಬೆ ಅವರು ತಹಶೀಲ್ದಾರರ ಕಚೇರಿಗೆ ತೆರಳಿ ಪರಿಶೀಲಿಸಿದಾಗ, ಬಾಡಿಗೆದಾರರ ವಿದ್ಯುತ್ ಬಿಲ್‌ಗಳು, ಗುಮಾಸ್ತ ಪರವಾನಗಿಗಳು, ನಕಲಿ ಬಾಡಿಗೆದಾರರ ರಸೀದಿಗಳು ಮತ್ತು ನಕಲಿ ಬಾಡಿಗೆದಾರರ ಪಟ್ಟಿ ಮತ್ತು ಸದರಿ ಆಸ್ತಿಯ ನೋಂದಣಿಗೆ ಬಳಸಲಾದ ಇತರ ದಾಖಲೆಗಳು ನಕಲಿ ದಾಖಲೆಗಳಾಗಿದ್ದು ಮತ್ತು ಬಾಡಿಗೆದಾರರಿಗೆ ಸೇರಿಲ್ಲ ಎಂಬುದು ತಿಳಿದುಬಂದಿದೆ.

ನೋಂದಣಿ ಉದ್ದೇಶಗಳಿಗಾಗಿ ಕಡಿಮೆ ಸುಂಕ ಅಥವಾ ತೆರಿಗೆಯನ್ನು ಪಾವತಿಸಲು ದಾಖಲೆಗಳನ್ನು ಬಳಸಲಾಗುತ್ತಿತ್ತು, ಇದು ಆಸ್ತಿಯ ನಿಜವಾದ ಬೆಲೆಗಿಂತ ತುಂಬಾ ಕಡಿಮೆಯಾಗಿದೆ. ಖುರೇಷಿ ಮತ್ತು ಇತರರು ರಾಜ್ಯದ ಬೊಕ್ಕಸವನ್ನು ವಂಚಿಸಿದ್ದು, ನಕಲಿ ದಾಖಲೆಗಳನ್ನು ಬಳಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವನ್ನು ಉಂಟುಮಾಡಿದರು. ತಾಂಬೆ ಪ್ರಕಾರ, ಸಲೀಂ ಖುರೇಷಿ ಅವರು ಕೇವಲ 21 ಲಕ್ಷ ರೂಪಾಯಿಗೆ ಕಟ್ಟಡದಲ್ಲಿ ಶೇ 50 ಫ್ಲಾಟ್‌ಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ತಾಂಬೆ ಹೇಳಿಕೆಯ ಆಧಾರದ ಮೇಲೆ ದಾದರ್ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದ್ದು ದಾಖಲೆಗಳನ್ನು ನಕಲಿ ಎಂದು ಪತ್ತೆ ಹಚ್ಚಿದ್ದಾರೆ. ಸಲೀಂ ಖುರೇಷಿ ಮತ್ತು ಇತರ ಎಂಟು ಜನರ ವಿರುದ್ಧ ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳನ್ನು ಹೊರಿಸಲಾಗಿದೆ.

ಸಲೀಂ ಖುರೇಷಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಂಪನಿಯ ಸಹಚರ ಎಂದು ಆರೋಪಿಸಲಾಗಿದೆ. ಎನ್‌ಐಎ ಪ್ರಕಾರ, ದಾವೂದ್ ಸಹಚರ ಛೋಟಾ ಶಕೀಲ್ ಹೆಸರಿನಲ್ಲಿ ಆಸ್ತಿ ವ್ಯವಹಾರ ಮತ್ತು ಡಿ ಕಂಪನಿಯ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ಭಯೋತ್ಪಾದಕ ನಿಧಿ ಸಂಗ್ರಹಿಸಲು ವಿವಾದಿತ ಒಪ್ಪಂದ ಮೂಲಕ ಭಾರಿ ಮೊತ್ತದ ಹಣವನ್ನು ಸುಲಿಗೆ ಮಾಡುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾನೆ.

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ