Vanraj Andekar: ಪುಣೆಯಲ್ಲಿ ಎನ್​ಸಿಪಿಯ ಮಾಜಿ ಕೌನ್ಸಿಲರ್​ನ ಗುಂಡಿಕ್ಕಿ ಹತ್ಯೆ

ಪುಣೆಯಲ್ಲಿ ಎನ್​ಸಿಪಿಯ ಮಾಜಿ ಕೌನ್ಸಿಲರ್​ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮುನ್ಸಿಪಲ್ ಕಾರ್ಪೊರೇಷನ್ ಮಾಜಿ ಕೌನ್ಸಿಲರ್ ವನರಾಜ್ ಅಂದೇಕರ್ ​​ಅವರನ್ನು ಭಾನುವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪುಣೆ ಪೊಲೀಸರ ಪ್ರಕಾರ, ಆತನ ಮೇಲೆ ಹರಿತವಾದ ಆಯುಧಗಳಿಂದ ಕೂಡ ದಾಳಿ ನಡೆಸಲಾಗಿದೆ. ನಗರದ ನಾನಾ ಪೇಠ ಪ್ರದೇಶದಲ್ಲಿ ಮಾಜಿ ಕೌನ್ಸಿಲರ್‌ನನ್ನು ಹತ್ಯೆ ಮಾಡಲಾಗಿದೆ.

Vanraj Andekar: ಪುಣೆಯಲ್ಲಿ ಎನ್​ಸಿಪಿಯ ಮಾಜಿ ಕೌನ್ಸಿಲರ್​ನ ಗುಂಡಿಕ್ಕಿ ಹತ್ಯೆ
ವನರಾಜ್​Image Credit source: ABP Live
Follow us
ನಯನಾ ರಾಜೀವ್
|

Updated on:Sep 02, 2024 | 11:24 AM

ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಒಂದೆಡೆ ಸಿದ್ಧತೆ ನಡೆಯುತ್ತಿದೆ, ಮತ್ತೊಂದೆಡೆ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಮಾಜಿ ಕೌನ್ಸಿಲರ್ ವನರಾಜ್ ಅಂದೇಕರ್ ​​ಅವರನ್ನು ಭಾನುವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಪುಣೆ ಪೊಲೀಸರ ಪ್ರಕಾರ, ಆತನ ಮೇಲೆ ಹರಿತವಾದ ಆಯುಧಗಳಿಂದ ಕೂಡ ದಾಳಿ ನಡೆಸಲಾಗಿದೆ. ನಗರದ ನಾನಾ ಪೇಠ ಪ್ರದೇಶದಲ್ಲಿ ಮಾಜಿ ಕೌನ್ಸಿಲರ್‌ನನ್ನು ಹತ್ಯೆ ಮಾಡಲಾಗಿದೆ. ರಾತ್ರಿ 9.30ರ ಸುಮಾರಿಗೆ ತಮ್ಮ ಸಂಬಂಧಿಯೊಂದಿಗೆ ಇಮಾಂದಾರ್ ಚೌಕದಲ್ಲಿ ನಿಂತಿದ್ದರು. ಆಗ ಅವರ ಮೇಲೆ ದಾಳಿ ನಡೆದಿದೆ.

ಕ್ರೈಂ ಬ್ರಾಂಚ್ ಮತ್ತು ಇತರ ವಲಯದ ತಂಡಗಳು ವನರಾಜ್ ಅಂದೇಕರ್ ​​ಅವರನ್ನು ಪತ್ತೆ ಹಚ್ಚಿ ಬಂಧಿಸುವ ಮುನ್ನವೇ ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.

ಮತ್ತಷ್ಟು ಓದಿ: Shocking Video: ಕುಡಿದ ಮತ್ತಿನಲ್ಲಿ ಅಣ್ಣನನ್ನು ಕೊಂದು ಮನೆಯೊಳಗೇ ಹೂತಿಟ್ಟ ತಮ್ಮ; ಶಾಕಿಂಗ್ ವಿಡಿಯೋ ಇಲ್ಲಿದೆ

ದಾಳಿಕೋರರು ಮೊದಲು ಮಾಜಿ ಕೌನ್ಸಿಲರ್ ವನರಾಜ್ ಮೇಲೆ ಹಲ್ಲೆ ನಡೆಸಿ ನಂತರ ಗುಂಡು ಹಾರಿಸಿದ್ದಾರೆ. ವನರಾಜ್ ಅಂದೇಕರ್ ​​ರಕ್ತದಲ್ಲಿ ತೊಯ್ದು ಬಿದ್ದಿದ್ದಾಗ ದಾಳಿಕೋರರು ಅಲ್ಲಿಂದ ಓಡಿ ಹೋಗಿದ್ದಾರೆ.

ವನರಾಜ್ ಅಂದೇಕರ್ ​​ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಸೂನ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಸದ್ಯ ಪೊಲೀಸರು ಈ ಬಗ್ಗೆ ತನಿಖೆಯಲ್ಲಿ ನಿರತರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಕೌಟುಂಬಿಕ ಕಲಹ ಹಾಗೂ ಹಣದ ಕಾರಣದಿಂದ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವ ಮೂವರ ವಿಚಾರಣೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:23 am, Mon, 2 September 24

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ