ರಾಜಸ್ಥಾನ: ಗೆಸ್ಟ್​ಹೌಸ್​ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ರಾಜಸ್ಥಾನದ ಗೆಸ್ಟ್​ಹೌಸ್​ವೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆಯಾಗಿದೆ. ಸಂಜೆ ಗೃಹರಕ್ಷಕ ಸಿಬ್ಬಂದಿ ಕೊಠಡಿಗೆ ತಲುಪಿದಾಗ ಯಾವುದೇ ಚಟುವಟಿಕೆ ಗಮನಕ್ಕೆ ಬಂದಿಲ್ಲ ಮತ್ತು ಯಾರೂ ಸ್ಪಂದಿಸಲಿಲ್ಲ. ಸಿಬ್ಬಂದಿ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದು, ಅವರು ಪರಿಶೀಲಿಸಲು ಹೋದಾಗ ಕೊಠಡಿಯೊಳಗೆ ನಾಲ್ಕು ಮೃತದೇಹಗಳು ಬಿದ್ದಿರುವುದು ಕಂಡಿತ್ತು. ಮಾಹಿತಿ ಪಡೆದ ಬಾಲಾಜಿ ಪೊಲೀಸರು ಹಾಗೂ ತೋಡಭೀಮ್ ಠಾಣೆ ಪ್ರಭಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದರು.

ರಾಜಸ್ಥಾನ: ಗೆಸ್ಟ್​ಹೌಸ್​ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ
ಪೊಲೀಸ್Image Credit source: India TV
Follow us
ನಯನಾ ರಾಜೀವ್
|

Updated on: Jan 15, 2025 | 10:33 AM

ರಾಜಸ್ಥಾನದ ಮೆಹಂದಿಪುರದ ಬಾಲಾಜಿ ಪಟ್ಟಣದ ಧರ್ಮಶಾಲಾ ಅತಿಥಿಗೃಹದಲ್ಲಿ ಕುಟುಂಬದ ನಾಲ್ವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ. ಮೃತರಲ್ಲಿ ಪೋಷಕರು, ಮಗ ಮತ್ತು ಮಗಳು ಸೇರಿದ್ದಾರೆ, ಅವರೆಲ್ಲರೂ ಉತ್ತರಾಖಂಡದ ಡೆಹ್ರಾಡೂನ್‌ನ ರಾಯ್‌ಪುರ ಪ್ರದೇಶದವರು.

ಜನವರಿ 12ರಂದು ಸಮಾಧಿ ವಾಲಿ ಗಲಿಯ ರಾಧಾ-ಕೃಷ್ಣ ಆಶ್ರಮ ಧರ್ಮಶಾಲಾದಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು ಮತ್ತು ಜನವರಿ 14 ರಂದು ಮಧ್ಯಾಹ್ನ ಚೆಕ್ ಔಟ್ ಮಾಡಲು ನಿರ್ಧರಿಸಿದ್ದರು.

ಸಂಜೆ ಗೃಹರಕ್ಷಕ ಸಿಬ್ಬಂದಿ ಕೊಠಡಿಗೆ ತಲುಪಿದಾಗ ಯಾವುದೇ ಚಟುವಟಿಕೆ ಗಮನಕ್ಕೆ ಬಂದಿಲ್ಲ ಮತ್ತು ಯಾರೂ ಸ್ಪಂದಿಸಲಿಲ್ಲ. ಸಿಬ್ಬಂದಿ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದು, ಅವರು ಪರಿಶೀಲಿಸಲು ಹೋದಾಗ ಕೊಠಡಿಯೊಳಗೆ ನಾಲ್ಕು ಮೃತದೇಹಗಳು ಬಿದ್ದಿರುವುದು ಕಂಡಿತ್ತು. ಮಾಹಿತಿ ಪಡೆದ ಬಾಲಾಜಿ ಪೊಲೀಸರು ಹಾಗೂ ತೋಡಭೀಮ್ ಠಾಣೆ ಪ್ರಭಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದರು.

ಮತ್ತಷ್ಟು ಓದಿ: ನಾಪತ್ತೆಯಾಗಿದ್ದ ಛತ್ತೀಸ್‌ಗಢದ ಪತ್ರಕರ್ತನ ಶವ ಟ್ಯಾಂಕ್‌ನಲ್ಲಿ ಪತ್ತೆ; ಕಾಂಗ್ರೆಸ್ ನಾಯಕನ ಕೈವಾಡದ ಶಂಕೆ

ಘಟನೆಯನ್ನು ದೃಢಪಡಿಸಿದ ಕರೋಲಿ ಎಸ್ಪಿ ಬ್ರಿಜೇಶ್ ಜ್ಯೋತಿ ಉಪಾಧ್ಯಾಯ, ಮೆಹಂದಿಪುರ ಬಾಲಾಜಿಯ ಸಮಾಧಿ ವಾಲಿ ಗಲಿಯಲ್ಲಿರುವ ಧರ್ಮಶಾಲಾದಲ್ಲಿ ಕುಟುಂಬದ ನಾಲ್ಕು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ. ತೋಡಭೀಮ್ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ, ಬಾಗಿಲು ತೆರೆದಿತ್ತು ಎಂದರು.

ಘಟನಾ ಸ್ಥಳದಲ್ಲಿನ ಪ್ರಾಥಮಿಕ ಅವಲೋಕನಗಳ ಆಧಾರದ ಮೇಲೆ ಇಬ್ಬರ ಶವ ನೆಲದ ಮೇಲೆ ಮಲಗಿರುವ ರೀತಿ ಇತ್ತು, ಇನ್ನಿಬ್ಬರ ಶವ ಹಾಸಿಗೆಯ ಮೇಲೆ ಪತ್ತೆಯಾಗಿವೆ. ವಿಷ ಕುಡಿದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿಗೆ ನಿಖರ ಕಾರಣವನ್ನು ನಿರ್ಧರಿಸಲಾಗುವುದು. ಆದರೆ ಸಾವಿನ ಹಿಂದಿರುವ ಸ್ಪಷ್ಟ ಕಾರಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ