ಕೇರಳ: ಕಲ್ಲಂಗಡಿ ಟ್ರಕ್​ನಲ್ಲಿ ಸ್ಫೋಟಕಗಳು ಪತ್ತೆ

ಲಯಾರ್-ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ಸ್ಫೋಟಗಳು ಪತ್ತೆಯಾಗಿದ್ದು, ಆತಂಕ ಮನೆ ಮಾಡಿದೆ. ತಮಿಳುನಾಡಿನ ಧರ್ಮಪುರಿಯ ಪಾಪರಪಟ್ಟಿ ಮೂಲದ ಲಾರಿ ಚಾಲಕ ಸೆಂಥಿಲ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಲಯಾರ್-ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಆತಂಕ ಮನೆ ಮಾಡಿದೆ. ತಮಿಳುನಾಡಿನ ಧರ್ಮಪುರಿಯ ಪಾಪರಪಟ್ಟಿ ಮೂಲದ ಲಾರಿ ಚಾಲಕ ಸೆಂಥಿಲ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 100ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ, ಜಿಲೆಟಿನ್ ಹಾಗೂ ಡಿಟೋನೇಟರ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಪಾಲಕ್ಕಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿಯ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಲಾರಿಯ ಮೇಲೆ ರಾಶಿ ಹಾಕಿದ್ದ ಕಲ್ಲಂಗಡಿ ಹಣ್ಣುಗಳನ್ನು ತೆಗೆದು ಪರಿಶೀಲಿಸಿದಾಗ ಪೆಟ್ಟಿಗೆಗಳಲ್ಲಿ ಸ್ಫೋಟಕಗಳು ತ್ರಿಶೂರ್​​ಗೆ ಸಾಗಿಸಲಾಗುತ್ತಿತ್ತು ಎಂದು ಸೆಂಥಿಲ್ ಕುಮಾರ್ ತಿಳಿಸಿದ್ದಾರೆ.

ಕೇರಳ: ಕಲ್ಲಂಗಡಿ ಟ್ರಕ್​ನಲ್ಲಿ ಸ್ಫೋಟಕಗಳು ಪತ್ತೆ
ಟ್ರಕ್

Updated on: Feb 05, 2026 | 1:16 PM

ಪಾಲಕ್ಕಾಡ್, ಫೆಬ್ರವರಿ 05: ವಲಯಾರ್-ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣನ್ನು ಸಾಗಿಸುತ್ತಿದ್ದ ಟ್ರಕ್​ನಲ್ಲಿ ಸ್ಫೋಟಕಗಳು(Explosive) ಪತ್ತೆಯಾಗಿದ್ದು, ಆತಂಕ ಮನೆ ಮಾಡಿದೆ. ತಮಿಳುನಾಡಿನ ಧರ್ಮಪುರಿಯ ಪಾಪರಪಟ್ಟಿ ಮೂಲದ ಲಾರಿ ಚಾಲಕ ಸೆಂಥಿಲ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

100ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ, ಜಿಲೆಟಿನ್ ಹಾಗೂ ಡಿಟೋನೇಟರ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಪಾಲಕ್ಕಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿಯ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಲಾರಿಯ ಮೇಲೆ ರಾಶಿ ಹಾಕಿದ್ದ ಕಲ್ಲಂಗಡಿ ಹಣ್ಣುಗಳನ್ನು ತೆಗೆದು ಪರಿಶೀಲಿಸಿದಾಗ ಪೆಟ್ಟಿಗೆಗಳಲ್ಲಿ ಸ್ಫೋಟಕಗಳು ತ್ರಿಶೂರ್​​ಗೆ ಸಾಗಿಸಲಾಗುತ್ತಿತ್ತು ಎಂದು ಸೆಂಥಿಲ್ ಕುಮಾರ್ ತಿಳಿಸಿದ್ದಾರೆ.

ಸುಳಿವು ದೊರೆತ ನಂತರ, ದಕ್ಷಿಣ ಇನ್ಸ್​ಪೆಕ್ಟರ್ ವಿಪಿನ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು. ಬಾಂಬ್ ನಿಷ್ಕ್ರಿಯ ದಳವೂ ಸ್ಥಳಕ್ಕೆ ತಲುಪಿತ್ತು. ಚಾಲಕನನ್ನು ವಿಚಾರಣೆ ನಡೆಸಿದ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ದೆಹಲಿ ಸ್ಫೋಟ: ಉಮರ್ ಜತೆ ಜಗಳವಾಡಿ, 6.5 ಲಕ್ಷ ರೂ. ಕೊಟ್ಟು ಎಕೆ-47 ಖರೀದಿಸಿದ್ದ ಉಗ್ರ ಮುಜಮ್ಮಿಲ್

ಕಳೆದ ವರ್ಷವಷ್ಟೇ ಪಾಲಕ್ಕಾಡ್ ಮತ್ತು ಕೊಯಮತ್ತೂರಿನ ಪೊಲೀಸರು ತಮಿಳುನಾಡಿನಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ನಲವತ್ತು ಸಾವಿರಕ್ಕೂ ಹೆಚ್ಚು ಜಿಲೆಟಿನ್​ಗಳು ಹಾಗೂ ಐದು ಸಾವಿರಕ್ಕೂ ಹೆಚ್ಚು ಡಿಟೋನೇಟರ್​ಗಳನ್ನು ವಶಪಡಿಸಿಕೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ