AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲಿ ವಾರಸುದಾರರಿಲ್ಲದ 8,000 ಜಿಲೆಟಿನ್ ಕಡ್ಡಿಗಳು ಪತ್ತೆ, ಬೆಚ್ಚಿ ಬಿದ್ದಿರುವ ಜನರಿಗೆ ತನಿಖೆಗೆ ಆಗ್ರಹ

ಜಿಲೆಟಿನ್ ಕಡ್ಡಿಗಳು ಗಣಿಯ ಆವರಣದಿಂದ ಹೊರಗೆ ಹೇಗೆ ಬಂದವು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

ಕೇರಳದಲ್ಲಿ ವಾರಸುದಾರರಿಲ್ಲದ 8,000 ಜಿಲೆಟಿನ್ ಕಡ್ಡಿಗಳು ಪತ್ತೆ, ಬೆಚ್ಚಿ ಬಿದ್ದಿರುವ ಜನರಿಗೆ ತನಿಖೆಗೆ ಆಗ್ರಹ
ಕೇರಳದ ಶೋರನೂರು ಸಮೀಪ ಪತ್ತೆಯಾದ ಜಿಲೆಟಿನ್ ಕಡ್ಡಿಗಳ ಪೆಟ್ಟಿಗೆ
TV9 Web
| Edited By: |

Updated on:Aug 04, 2022 | 10:14 AM

Share

ಕೊಚ್ಚಿ: ಕೇರಳದ ಶೊರನೂರು ಜಿಲ್ಲೆಯ ವದರಕುರಿಸಿ ಎಂಬಲ್ಲಿ ಕಲ್ಲುಗಣಿಯ ಹತ್ತಿರದಲ್ಲಿ ಭಾರೀ ಪ್ರಮಾಣದ ಜಿಲೆಟಿನ್ ಸ್ಫೋಟಕಗಳು (Gelatine Sticks) ಪತ್ತೆಯಾಗಿವೆ. 40 ಪೆಟ್ಟಿಗೆಗಳಲ್ಲಿ ಸುಮಾರು 8,000 ಜಿಲೆಟಿನ್ ಕಡ್ಡಿಗಳು ಕಾಣಿಸಿಕೊಂಡಿವೆ. ಇವು ಗಣಿಯ ಆವರಣದಿಂದ ಹೊರಗೆ ಹೇಗೆ ಬಂದವು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಪ್ರತಿ ಪೆಟ್ಟಿಗೆಯಲ್ಲಿ ಸುಮಾರು ಜಿಲೆಟಿನ್ ಕಡ್ಡಿಗಳಿವೆ. ಜಿಲೆಟಿನ್ ಕಡ್ಡಿಗಳನ್ನು ಗಣಿಯನ್ನು ಕಲ್ಲು ಒಡೆಯಲು ಬಳಸಲಾಗುತ್ತದೆ.

ಕಲ್ಲು ಕ್ವಾರಿಯ ಮಾರ್ಗದಲ್ಲಿ ಈ ಪೆಟ್ಟಿಗೆಗಳು ಅನಾಥವಾಗಿ ಬಿದ್ದಿದ್ದವು. ಸ್ಥಳೀಯರು ಪೆಟ್ಟಿಗಳನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಜಿಲಿಟಿನ್ ಕಡ್ಡಿಗಳು ಹೀಗೆ ಕ್ವಾರಿಯಿಂದ ಹೊರಗೆ ಬಂದಿರುವುದರ ಬಗ್ಗೆ ಆತಂಕ ವ್ಯಕ್ತವಾಗಿದೆ. ಶೊರನೂರ್​ನಿಂದ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳಿದ್ದ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪತ್ತಂಬಿ ತಹಶೀಲ್ದಾರ್ ಸಹ ಸ್ಥಳಕ್ಕೆ ಭೇಟಿ ಬಂದಿದ್ದು, ಸ್ಫೋಟಕಗಳು ಹೇಗೆ ಸಾರ್ವಜನಿಕ ಸ್ಥಳಕ್ಕೆ ಬಂದು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಯತ್ನಿಸುತ್ತಿದ್ದಾರೆ.

ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಸ್ಫೋಟಕಗಳನ್ನು ಹೀಗೆ ರಸ್ತೆಯ ಮೇಲೆ ಬಿಟ್ಟು ಹೋದವರ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಬಲ ಸ್ಫೋಟಕ

ಗಣಿಗಳಲ್ಲಿ ಬಂಡೆ ಸೀಳಲು ಬಳಸುವ ಜೆಲಿಟಿನ್ ಕಡ್ಡಿಗಳು ಪ್ರಬಲ ಸ್ಫೋಟಕಗಳಾಗಿವೆ. ಕರ್ನಾಟಕದಲ್ಲಿ 2021ರ ಫೆಬ್ರುವರಿಯಲ್ಲಿ ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಿಸಿ 11 ಮಂದಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

Published On - 10:13 am, Thu, 4 August 22