ಗೋವಾ: ಪಾರ್ಟಿಗೆಂದು ಆಹ್ವಾನಿಸಿ ಮೂವರು ಬಾಲಕಿಯರ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ

ಹುಟ್ಟುಹಬ್ಬದ ಪಾರ್ಟಿಗೆಂದು ಕರೆದು ಸ್ನೇಹಿತರೇ ಮೂವರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗೋವಾದಲ್ಲಿ ನಡೆದಿದೆ. ಪೊಲೀಸರ ಬಳಿ ಬಾಲಕಿಯರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಇಬ್ಬರು ಆರೋಪಿಗಳು ಹುಟ್ಟುಹಬ್ಬ ಆಚರಣೆಗೆಂದು ಕಾಯ್ದಿರಿಸಿದ ಹೋಟೆಲ್​​ ಕೊಠಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಗೋವಾ ಮಕ್ಕಳ ಕಾಯ್ದೆಯಡಿಯಲ್ಲಿ ಅತ್ಯಾಚಾರ ಮತ್ತು ಅಪಹರಣದ ಆರೋಪಗಳನ್ನು ಹೊರಿಸಲಾಗಿದೆ.

ಗೋವಾ: ಪಾರ್ಟಿಗೆಂದು ಆಹ್ವಾನಿಸಿ ಮೂವರು ಬಾಲಕಿಯರ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ
ಕ್ರೈಂ
Image Credit source: Shutterstock

Updated on: Jun 12, 2025 | 9:37 AM

ಗೋವಾ, ಜೂನ್ 12: ಪಾರ್ಟಿಗೆಂದು ಮೂವರು ಬಾಲಕಿಯರನ್ನು ಆಹ್ವಾನಿಸಿ ಸ್ನೇಹಿತರೇ  ಅತ್ಯಾಚಾರವೆಸಗಿರುವ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ. ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಜೂನ್ 8 ರಂದು ಈ ಘಟನೆ ನಡೆದಿದ್ದು, ಹುಡುಗಿಯರ ಪೋಷಕರು ಪೊಲೀಸರ ಬಳಿ ನಾಪತ್ತೆ ದೂರು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.

ಬಾಲಕಿಯರು 11, 13 ಮತ್ತು 15 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದ್ದು, ಅವರಲ್ಲಿ ಇಬ್ಬರು ಒಡಹುಟ್ಟಿದವರು. ಪೊಲೀಸರ ಪ್ರಕಾರ, ಹುಡುಗಿಯರು ಆರೋಪಿಗಳ ಸ್ನೇಹಿತರಾಗಿದ್ದರು ಮತ್ತು ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದರಿಂದ ಇವರು ಹೋಗಿದ್ದರು.

ಪೊಲೀಸರು ಅವರನ್ನು ಹುಡುಕಲು ಹಲವಾರು ತಂಡಗಳನ್ನು ರಚಿಸಿದ ನಂತರ ಅದೇ ದಿನ ಕ್ಯಾಲಂಗುಟ್ ಬೀಚ್‌ನಲ್ಲಿರುವ ಹೋಟೆಲ್‌ನಿಂದ ಅವರನ್ನು ರಕ್ಷಿಸಲಾಯಿತು.ಪೊಲೀಸರು ಅಲ್ತಾಫ್ (19) ಮತ್ತು ಓಂ (21) ಎಂದು ಗುರುತಿಸಲಾದ ಆರೋಪಿಗಳನ್ನು ಸಹ ಬಂಧಿಸಿದ್ದಾರೆ.

ಇದನ್ನೂ ಓದಿ
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣದ ಎ3 ಪೊಲೀಸಪ್ಪನ ಮಗ ಪರಾರಿ
ಹೆಬ್ಬಾಳ್ಕರ್​​ಗೆ ಅವಾಚ್ಯ ಪದ ಬಳಕೆ ಆರೋಪ: ಸಿಟಿ ರವಿಗೆ ಕೋರ್ಟ್​ ರಿಲೀಫ್!
ಯೋಧನ ಅಂತ್ಯಕ್ರಿಯೆಗೆ ಸರ್ಕಾರಿ ಜಾಗ ಕೇಳಿದವರ ಮೇಲೆ ಲಾಠಿ ಬೀಸಿದ ಪೊಲೀಸರು
ಕುರಾನ್ ಸುಟ್ಟಿದ್ದನ್ನ ಖಂಡಿಸಿ ಪ್ರತಿಭಟನೆ: ಪೊಲೀಸರ ಮೇಲೆಯೇ ಚಪ್ಪಲಿ ಎಸೆತ

ಪೊಲೀಸರ ಬಳಿ ಬಾಲಕಿಯರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಇಬ್ಬರು ಆರೋಪಿಗಳು ಹುಟ್ಟುಹಬ್ಬ ಆಚರಣೆಗೆಂದು ಕಾಯ್ದಿರಿಸಿದ ಹೋಟೆಲ್​​ ಕೊಠಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಗೋವಾ ಮಕ್ಕಳ ಕಾಯ್ದೆಯಡಿಯಲ್ಲಿ ಅತ್ಯಾಚಾರ ಮತ್ತು ಅಪಹರಣದ ಆರೋಪಗಳನ್ನು ಹೊರಿಸಲಾಗಿದೆ.

ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾದ ನಂತರ ಪೊಲೀಸರು ಹೋಟೆಲ್ ಮಾಲೀಕರನ್ನು ಬಂಧಿಸಿದ್ದಾರೆ. ಮತ್ತು ಪೋಷಕರ ಅನುಪಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಕರಿಗೆ ಕೊಠಡಿಗಳನ್ನು ಹೇಗೆ ನೀಡಲಾಯಿತು ಎಂದು ಪ್ರಶ್ನಿಸಿದರು.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಮೂರು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಮೆಟ್ರೋ ಸೇತುವೆ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

ಮತ್ತೊಂದು ಘಟನೆ
ಚಾಕೊಲೇಟ್​ ಆಮಿಷವೊಡ್ಡಿ 4 ವರ್ಷದ ಬಾಲಕಿ ಕರೆದೊಯ್ದು ಅತ್ಯಾಚಾರ, ಇಟ್ಟಿಗೆಯಿಂದ ಹಲ್ಲೆ
ಚಾಕೊಲೇಟ್ ಆಮಿಷವೊಡ್ಡಿ 4 ವರ್ಷದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಪಕ್ಕದ ಮನೆಯ ವ್ಯಕ್ತಿ ಬಾಲಕಿಗೆ ಆಮಿಷವೊಡ್ಡಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಬಳಿಕ ಇಟ್ಟಿಗೆಯಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಮಂಗಳವಾರ ಸಂಜೆ ಕಾನ್ಪುರ ನಗರ ಜಿಲ್ಲೆಯ ಘಟಂಪುರದಲ್ಲಿ ಈ ಘಟನೆ ನಡೆದಿದೆ.

ಸಂಜೆ 5.30 ರ ಸುಮಾರಿಗೆ ಬಾಲಕಿ ಹತ್ತಿರದ ಅಂಗಡಿಗೆ ಹೋಗಿದ್ದಳು ಎಂದು ಆಕೆಯ ತಂದೆ ಹೇಳಿದ್ದಾರೆ .ಅಂಗಡಿಯ ಬಳಿ, ಅದೇ ಪ್ರದೇಶದ ಯುವಕನೊಬ್ಬ ಬಾಲಕಿ ಬಳಿ ಚಾಕೊಲೇಟ್​ ಕೊಡಿಸುವುದಾಗಿ ಹೇಳಿ ಅಂಗಡಿಯ ಹಿಂದಿನ ಪೊದೆಯೊಳಗೆ ಕರೆದೊಯ್ದಿದ್ದ. ಬಾಲಕಿ ನೋವಿನಿಂದ ಕಿರುಚಿದಾಗ, ಆರೋಪಿ ಆಕೆಯ ಬಾಯಿಯೊಳಗೆ ಎಲೆಗಳನ್ನು ತುರುಕಿದ್ದಾನೆ.

ಆಕೆ ಅಳುತ್ತಲೇ ಇದ್ದಳು. ಆ ವ್ಯಕ್ತಿ ಹತ್ತಿರದಲ್ಲಿ ಇರಿಸಲಾಗಿದ್ದ ಇಟ್ಟಿಗೆಯಿಂದ ಆಕೆಗೆ ಹಲವಾರು ಬಾರಿ ಹೊಡೆದು ಬಾಲಕಿಯನ್ನು ರಕ್ತದ ಮಡುವಿನಲ್ಲಿ ಬಿಟ್ಟು ಓಡಿಹೋಗಿದ್ದಾನೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ ಬಾಲಕಿಯ ತಂದೆ, ನನ್ನ ಮಗಳು ಸಂಜೆ 5.30 ರ ಸುಮಾರಿಗೆ ಹತ್ತಿರದ ಅಂಗಡಿಗೆ ಹೋಗಿದ್ದಳು. 10 ರಿಂದ 15 ನಿಮಿಷಗಳಾದರೂ ಆಕೆ ಹಿಂತಿರುಗದಿದ್ದಾಗ, ಅವಳ ತಾಯಿ ಆಕೆಯನ್ನು ಹುಡುಕಲು ಹೋಗಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us