Godavari Express Train: ಹಳಿ ತಪ್ಪಿದ ಗೋದಾವರಿ ಎಕ್ಸ್​ಪ್ರೆಸ್ ರೈಲು, 6 ಬೋಗಿಗಳಿಗೆ ಹಾನಿ

| Updated By: ನಯನಾ ರಾಜೀವ್

Updated on: Feb 15, 2023 | 8:27 AM

ವಿಶಾಖಪಟ್ಟಣಂನಿಂದ ಹೈದರಾಬಾದ್​ಗೆ ಹೊರಟಿದ್ದ ಗೋದಾವರಿ ಎಕ್ಸ್​ಪ್ರೆಸ್​ ರೈಲು ಬುಧವಾರ ಮುಂಜಾನೆ ಹಳಿ ತಪ್ಪಿದೆ. ಹೈದರಾಬಾದ್‌ನ ಉಪನಗರದ ಬೀಬಿನಗರ ಬಳಿ ಗೋದಾವರಿ ಎಕ್ಸ್‌ಪ್ರೆಸ್ ಹಳಿತಪ್ಪಿದ ನಂತರ ಪ್ರಯಾಣಿಕರು ಭಯಭೀತರಾಗಿದ್ದರು.

Godavari Express Train: ಹಳಿ ತಪ್ಪಿದ ಗೋದಾವರಿ ಎಕ್ಸ್​ಪ್ರೆಸ್ ರೈಲು, 6 ಬೋಗಿಗಳಿಗೆ ಹಾನಿ
ಗೋದಾವರಿ ಎಕ್ಸ್​ಪ್ರೆಸ್ ರೈಲು
Follow us on

ವಿಶಾಖಪಟ್ಟಣಂನಿಂದ ಹೈದರಾಬಾದ್​ಗೆ ಹೊರಟಿದ್ದ ಗೋದಾವರಿ ಎಕ್ಸ್​ಪ್ರೆಸ್​ ರೈಲು ಬುಧವಾರ ಮುಂಜಾನೆ ಹಳಿ ತಪ್ಪಿದೆ. ಹೈದರಾಬಾದ್‌ನ ಉಪನಗರದ ಬೀಬಿನಗರ ಬಳಿ ಗೋದಾವರಿ ಎಕ್ಸ್‌ಪ್ರೆಸ್ ಹಳಿತಪ್ಪಿದ ನಂತರ ಪ್ರಯಾಣಿಕರು ಭಯಭೀತರಾಗಿದ್ದರು. ಗೋದಾವರಿ ಎಕ್ಸ್ ಪ್ರೆಸ್ ಎಸ್ 5 ಬೋಗಿ ಬಿಟ್ಟು ಸಿಕಂದರಾಬಾದ್ ಗೆ ಹೊರಟಿತ್ತು. ಬೆಳಗ್ಗೆ 5.30ರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ರೈಲಿನ ವೇಗ ಕಡಿಮೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ.

ಪ್ರಯಾಣಿಕರು ಉಸಿರು ಬಿಗಿ ಹಿಡಿದರು. ಏತನ್ಮಧ್ಯೆ, ಗೋದಾವರಿ ಎಕ್ಸ್‌ಪ್ರೆಸ್ ಹಳಿತಪ್ಪಿದ್ದರಿಂದ ಅನೇಕ ರೈಲುಗಳ ಸಂಚಾರಕ್ಕೆ ಅಡ್ಡಿಯಾಯಿತು. ಭುವನಗಿರಿ, ಬೀಬಿನಗರ ಮತ್ತು ಘಟಕೇಸರ್ ನಿಲ್ದಾಣಗಳಲ್ಲಿ ಹಲವು ರೈಲುಗಳನ್ನು ನಿಲ್ಲಿಸಬೇಕಾಯಿತು. ಘಟನೆ ಕುರಿತು ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಗೋದಾವರಿ ಎಕ್ಸ್‌ಪ್ರೆಸ್ (12727) ವಿಶಾಖಪಟ್ಟಣಂ ಮತ್ತು ಹೈದರಾಬಾದ್ ನಡುವೆ ಚಲಿಸುತ್ತದೆ ಎಂದು ತಿಳಿದಿದೆ. ವಿಶಾಖಪಟ್ಟಣದಿಂದ ಸಂಜೆ 5.20ಕ್ಕೆ ಹೊರಟು ಮರುದಿನ ಬೆಳಗ್ಗೆ 6.15ಕ್ಕೆ ನಾಂಪಲ್ಲಿ ನಿಲ್ದಾಣವನ್ನು ತಲುಪುತ್ತದೆ. ಬೆಳಿಗ್ಗೆ 5.15 ಕ್ಕೆ ಸಿಕಂದರಾಬಾದ್ ತಲುಪುವ ಈ ರೈಲಿನಲ್ಲಿ ಕೆಲವು ನೂರು ಪ್ರಯಾಣಿಕರು ಪ್ರಯಾಣಿಸುತ್ತಾರೆ.

ಇತ್ತೀಚೆಗೆ ಕಿರಂಡೋಲ್ ಪ್ಯಾಸೆಂಜರ್ ರೈಲು ಭಾರಿ ಅಪಘಾತಕ್ಕೀಡಾಗಿದ್ದು ಗೊತ್ತೇ ಇದೆ. ಜನವರಿ 17 ರಂದು, ಬೆಳಿಗ್ಗೆ 9.40 ರ ಸುಮಾರಿಗೆ, ಅರಕು ವಿಭಾಗದ ಅಡಿಯಲ್ಲಿ ಶಿವಲಿಂಗಪುರಂ ರೈಲು ನಿಲ್ದಾಣದ ಬಳಿ ಸುರಂಗ ಸಂಖ್ಯೆ ಏಳರಲ್ಲಿ ಇ-ರೈಲು ಹಳಿತಪ್ಪಿತು. ಹಿಂಬದಿಯಿಂದ ಆರು ಬೋಗಿಯ ಚಕ್ರಗಳು ಹಳಿತಪ್ಪಿದವು. ಕೊನೆಯಲ್ಲಿದ್ದ ಎರಡು ವಿಸ್ಟಾಡೋಮ್ ಕೋಚ್‌ಗಳು ಸುರಂಗದಲ್ಲಿಯೇ ಉಳಿದಿವೆ. ಇದರಿಂದ ಪ್ರಯಾಣಿಕರು ಗಾಬರಿಗೊಂಡು ಬೋಗಿಯಿಂದ ಕೆಳಗಿಳಿದಿದ್ದಾರೆ.

ಅಪಘಾತ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಹಳಿತಪ್ಪಿದ ಆರನೇ ಬೋಗಿಯಿಂದ ಹಿಂದಿನ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಮುಂಭಾಗದ 11 ಬೋಗಿಗಳಿಗೆ ಸ್ಥಳಾಂತರಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ