ಒಳ್ಳೇ ಸುದ್ದಿ | ಕೋವಿಡ್ ಸಾಂಕ್ರಾಮಿಕ ಆವರಿಸಿದ್ದಾಗಲೇ ಶುರುವಾಯ್ತು ‘ರೈಸ್ ಎಟಿಎಂ’

ಪಕ್ಕದ ಕಟ್ಟಡದಲ್ಲಿರುವ 3 ಬಿಎಚ್​ಕೆ ಅಪಾರ್ಟ್​ಮೆಂಟ್ ಖರೀದಿಸಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ ಕಟ್ಟಡದ ಹೊರಗೆ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನರನ್ನು ನೋಡಿ ನನ್ನ ಮನಸ್ಸು ಬದಲಾಯಿತು. ಸದಾಕಾಲ ನನಗೆ ಇದೇ ಕೆಲಸ ಮುಂದುವರಿಸಲು ಸಾಧ್ಯವಾಗಲ್ಲ. ಆದರೆ ಕಷ್ಟದಲ್ಲಿರುವವರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂಬುದು ನನ್ನ ಉದ್ದೇಶ..

ಒಳ್ಳೇ ಸುದ್ದಿ | ಕೋವಿಡ್ ಸಾಂಕ್ರಾಮಿಕ ಆವರಿಸಿದ್ದಾಗಲೇ ಶುರುವಾಯ್ತು ‘ರೈಸ್ ಎಟಿಎಂ'
ರಾಮು ಅವರ ರೈಸ್ ಎಟಿಎಂ ( ಕೃಪೆ : ಫೇಸ್​​ಬುಕ್ )
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 24, 2020 | 5:55 PM

ಹೈದಾರಾಬಾದ್: ಇಲ್ಲಿನ ಕಂಪನಿಯೊಂದರಲ್ಲಿ ಎಚ್​ಆರ್ ಮ್ಯಾನೇಜರ್ ಆಗಿದ್ದ ದೊಸಪತಿ ರಾಮುಗೆ ದೊಡ್ಡ ಅಪಾರ್ಟ್​ಮೆಂಟ್ ಖರೀದಿಸಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಇರಬೇಕು ಎಂಬ ಕನಸಿತ್ತು. ಆದರೆ ಆ ಕನಸನ್ನು ಪಕ್ಕಕ್ಕಿಟ್ಟ ರಾಮು, ಕೋವಿಡ್ ಕಾಲದಲ್ಲಿ ಬಡವರಿಗೆ ನೆರವಾಗಲು ರೈಸ್ ಎಟಿಎಂ ಆರಂಭಿಸಿ, ಹಲವರ ಕಷ್ಟಗಳಿಗೆ ಸ್ಪಂದಿಸಿದರು.

ರೈಸ್ ಎಟಿಎಂ ಆರಂಭಿಸಲು ತಮ್ಮ ಪಿಎಫ್​ ಖಾತೆಯಿಂದ ಸ್ವಲ್ಪ ಹಣವನ್ನು ಹಿಂಪಡೆದರು, ಕ್ರೆಡಿಟ್ ಕಾರ್ಡ್ ಬಳಸಿದರು. ನಲಗೊಂಡಾದಲ್ಲಿರುವ ಜಮೀನು ಮಾರಿದ ಹಣವನ್ನೂ ಇದಕ್ಕೆ ವಿನಿಯೋಗಿಸಿದರು. ಲಾಕ್ ಡೌನ್ ಆಗಿದ್ದ ತಿಂಗಳುಗಳಲ್ಲಿ ಬಡವರಿಗೆ ನೆರವಾಗಿದ್ದ ರೈಸ್ ಎಟಿಎಂ ಡಿ.19ಕ್ಕೆ 250 ದಿನಗಳನ್ನು ಪೂರೈಸಿದೆ.

ಈ ಸಮಾಜ ನನಗೆ ಕೊಟ್ಟಿದ್ದನ್ನು ವಾಪಸ್ ಕೊಡಬೇಕು ಎಂದು 2006ರಲ್ಲಿಯೇ ನಿರ್ಧರಿಸಿದ್ದೆ. ಅದರಂತೆಯೇ ಈ ಕೆಲಸ ಮಾಡುತ್ತಿದ್ದೇನೆ ಅಂತಾರೆ ರಾಮು. 2006ರಲ್ಲಿ ನನ್ನ ಮೊದಲ ಮಗ ಜನಿಸುವುದಕ್ಕೆ 5 ತಿಂಗಳು ಮೊದಲು ಬೈಕ್ ಅಪಘಾತದಲ್ಲಿ ನನ್ನ ತಲೆಗೆ ಪೆಟ್ಟಾಗಿತ್ತು. ಅದರಿಂದ ಗುಣಮುಖವಾಗಿದ್ದು ನನಗೆ ಮರುಜನ್ಮ ಸಿಕ್ಕಿದ ಅನುಭವವನ್ನು ನೀಡಿತ್ತು. ನನ್ನ ಸಂಬಳದಲ್ಲಿ ಶೇಕಡಾ 70 ರಷ್ಟು ಹಣವನ್ನು ಬಡವರ ಸಹಾಯಕ್ಕೆ ಮೀಸಲಿಡುತ್ತೇನೆ ಎಂದು ಅಂದೇ ನಾನು ನಿರ್ಧಾರ ತೆಗೆದುಕೊಂಡೆ ಎಂದು ತಮ್ಮ ಬದುಕು ಸಾಗಿಬಂದ ಹಾದಿಯನ್ನು ನೆನಪಿಸಿಕೊಂಡರು.

ಸಂಪೂರ್ಣ ಗುಣಮುಖನಾದ ನಂತರ ರಾಮು ಹೆಲ್ಮೆಟ್ ಬಳಕೆ /ಸೀಟ್ ಬೆಲ್ಟ್ ಬಳಕೆ ಬಗ್ಗೆ ಜಾಗೃತಿ ಅಭಿಯಾನದಲ್ಲಿ ಭಾಗಿಯಾದರು. ಆಮೇಲೆ ರಕ್ತದಾನದ ಬಗ್ಗೆ, ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲು ಒತ್ತಾಯಿಸುವ, ಮನೆಯಲ್ಲಿ ನಿಯಮಿತವಾಗಿ ವಿದ್ಯುತ್ ಬಳಕೆ ಬಗ್ಗೆ, ಒಂದೇ ಬಾರಿ ಬಳಕೆಯ ಪ್ಲಾಸ್ಟಿಕ್​ ನಿಷೇಧಿಸುವ ಅಭಿಯಾನಗಳಲ್ಲಿ ಸಕ್ರಿಯರಾದರು. ಲಾಕ್​ಡೌನ್ ಹೊತ್ತಲ್ಲಿ ಬಿಗ್ ಬಾಸ್ ಕಾರ್ಯಕ್ರಮದಿಂದ ಪ್ರೇರಿತರಾದ ಇವರು 21 ದಿನ ಮನೆಯೊಳಗೆ ಇರುವ ಚಾಲೆಂಜ್ ಸ್ವೀಕರಿಸಿ ಎಂದು ಜನರಿಗೆ ಕರೆಗೊಟ್ಟರು.

ಇದನ್ನೂ ಓದಿ: ಒಳ್ಳೇ ಸುದ್ದಿ | ಓದುವ ಕನಸಿಗೆ ಆಸರೆ; ಎತ್ತಿನಗಾಡಿ ಏರಿ ಚೆನ್ನೈಗೆ ಬಂದವಳ ವಿಮಾನ ಹತ್ತಿಸಿದರು

ಮಗನ ಹುಟ್ಟುಹಬ್ಬದ ದಿನ ಹೊಳೆದ ಯೋಚನೆಯ ಸಾಕಾರ ರೂಪವೇ ರೈಸ್ ಎಟಿಎಂ. ಆ ದಿನ ನಾನು ಚಿಕನ್ ಅಂಗಡಿ ಹೊರಗೆ ಕಾಯುತ್ತಾ ನಿಂತಿದ್ದೆ. ಆಗ ನಮ್ಮ ಪಕ್ಕದ ಕಟ್ಟಡದ ವಾಚ್​ಮೆನ್ ಪತ್ನಿ ₹2,000 ಕೊಟ್ಟು ಚಿಕನ್ ಖರೀದಿಸುವುದನ್ನು ನೋಡಿದೆ. ಅಷ್ಟೊಂದು ಪ್ರಮಾಣದಲ್ಲಿ ಚಿಕನ್ ಯಾಕೆ ಖರೀದಿಸಿದರು ಎಂದು ವಿಚಾರಿಸಿದಾಗ ಆಕೆ ಮತ್ತು ಆಕೆಯ ಸೊಸೆ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದ ಒಡಿಶಾದ ವಲಸೆ ಕಾರ್ಮಿಕರಿಗಾಗಿ ಊಟ ಬಡಿಸುತ್ತಿದ್ದ ವಿಷಯ ತಿಳಿಯಿತು.

ಲಕ್ಷ್ಮಮ್ಮನ ಸಂಪಾದನೆ ಬರೀ ₹6,000. ಅದರಲ್ಲಿಯೂ ಆಕೆ ₹2000 ವನ್ನು ಇನ್ನೊಬ್ಬರಿಗಾಗಿ ಖರ್ಚು ಮಾಡುತ್ತಿದ್ದರು. ನನಗೆ ಒಳ್ಳೆ ಸಂಬಳ ಬರುತ್ತಿದೆ. ನಮ್ಮ ಕುಟುಂಬದ ಸದಸ್ಯರು ಆರಾಮವಾಗಿದ್ದಾರೆ. ಹಾಗಾಗಿ ಬಡವರಿಗೆ ಸಹಾಯ ಮಾಡುವುದಕ್ಕೆ ನನಗೆ ಯಾವುದೇ ಅಡ್ಡಿಯಿರುವುದಿಲ್ಲ ಎಂಬ ಯೋಚನೆ ಬಂತು ಎಂದು ರಾಮು ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಹೆಮ್ಮೆಯಿಂದ ಹೇಳಿಕೊಂಡರು.

ಹತ್ತಿರದ ಕಿರಾಣಿ ಅಂಗಡಿಯ ಸಹಭಾಗಿತ್ವ ಮತ್ತು ನಮ್ಮ ಅಪಾರ್ಟ್ ಮೆಂಟ್​ನ ವಾಚ್​ಮೆನ್ ಸಹಾಯದಿಂದ 24 x7 ರೈಸ್ ಎಟಿಎಂ ಸ್ಥಾಪಿಸಿದೆ. ಮೊದಲು 193 ಮಂದಿ ಬಂದರು. ಆಮೇಲೆ ಅಲ್ಲಿಗೆ ಬರುವ ಜನರ ಸಂಖ್ಯೆ ಏರುತ್ತಾ ಹೋಯಿತು. ಆಹಾರವಸ್ತುಗಳು ಮಾತ್ರವಲ್ಲ, ಔಷಧಿ, ಹಾಲು, ತರಕಾರಿಯೂ ನಮಗೆ ಅಗತ್ಯವಾಗಿತ್ತು. ನನ್ನ ಕ್ರೆಡಿಟ್ ಕಾರ್ಡ್ ಬಳಸಿದರೂ ಹಣ ಸಾಕಾಗಲಿಲ್ಲ. ನಾನು ನಮ್ಮ ಕಂಪನಿಯಲ್ಲಿ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ 5 ಲಕ್ಷ ಹಣವನ್ನು ಪಿಎಫ್​ನಿಂದ ತೆಗೆದುಕೊಂಡೆ. ನನ್ನ ಪತ್ನಿ ಖಾಸಗಿ ಶಾಲೆಯಲ್ಲಿ ಗಣಿತ ಶಿಕ್ಷಕಿ. ಆಕೆ ನನ್ನ ಕಾರ್ಯಗಳಿಗೆ ಬೆಂಬಲವಾಗಿ ನಿಂತರು ಎಂದು ರಾಮು ಹೇಳುತ್ತಾರೆ.

ಜೂನ್ ತಿಂಗಳ ಮಧ್ಯಭಾಗದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಆರಂಭಿಸಿದ್ದರು. ಲಾಕ್​​ಡೌನ್​ನಿಂದಾಗಿ ಹಲವರು ಕೆಲಸ ಕಳೆದುಕೊಂಡಿದ್ದರು. ಅವರ ಕುಟುಂಬಗಳಲ್ಲಿ ಕೆಲವರಿಗೆ ಕೊರೊನಾ ವೈರಸ್ ಸೋಂಕಿತ್ತು. ಕೆಲವರು ನನ್ನಲ್ಲಿ ದುಃಖ ತೋಡಿಕೊಂಡರು. ನನಗೆ ಎಲ್ಲದಕ್ಕೂ ಹಣ ಹೊಂದಿಸಲು ಕಷ್ಟವಾಗುತ್ತಿತ್ತು. ಹಾಗಾಗಿ ನಾನು ನಲಗೊಂಡಾದಲ್ಲಿರುವ ಜಮೀನು ಮಾರಿ ಸಿಕ್ಕಿದ್ದ ಹಣವನ್ನು ಬಳಸತೊಡಗಿದೆ. ಪಕ್ಕದ ಕಟ್ಟಡದಲ್ಲಿರುವ 3 ಬಿಎಚ್​ಕೆ ಅಪಾರ್ಟ್​ಮೆಂಟ್ ಖರೀದಿಸಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ ಕಟ್ಟಡದ ಹೊರಗೆ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನರನ್ನು ನೋಡಿ ನನ್ನ ಮನಸ್ಸು ಬದಲಾಯಿತು.

ಇದನ್ನೂ ಓದಿ: Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?

ಕೃಪೆ: ಫೇಸ್​​ಬುಕ್

ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಗೆ ಹೈದರಾಬಾದ್​ನಲ್ಲಿನ ತಗ್ಗುಪ್ರದೇಶಗಳು ಜಲಾವೃತವಾದವು. ಈ ಪ್ರವಾಹದಲ್ಲಿ ಹೆಚ್ಚು ಸಮಸ್ಯೆಯಾದ ಎಲ್.ಬಿ.ನಗರ್ ಪ್ರದೇಶವಿರುವುದೇ ನಮ್ಮ ಮನೆ ಪಕ್ಕದಲ್ಲಿ. ಪ್ರವಾಹದ ನಂತರದ ದಿನಗಳಲ್ಲಿ 300ರಿಂದ 350 ಜನರು ಸಹಾಯಕ್ಕಾಗಿ ರೈಸ್ ಎಟಿಎಂ ಮುಂದೆ ನಿಂತಿದ್ದರು. ಇದರಿಂದ ಇಲ್ಲಿಯವರೆಗೆ 25,000 ಜನರಿಗೆ ಸಹಾಯವಾಗಿದೆ.

ನಾನು ಖರೀದಿಸಬೇಕು ಎಂದು ಬಯಸಿದ್ದ ಆ ಫ್ಲಾಟ್ ಅನ್ನು ಪ್ರತಿದಿನ ನೋಡುತ್ತಿರುತ್ತೇನೆ. ಆದರೆ ರೈಸ್ ಎಟಿಎಂನ ಮುಂದೆ ಕಾಯುತ್ತಿರುವ ಜನರನ್ನು ನೋಡಿದರೆ ನನಗೆ ನನ್ನ ಕನಸು ನನಸಾಗಿಲ್ಲ ಎಂಬ ಬೇಸರ ಆವರಿಸುವುದಿಲ್ಲ. ಈವರೆಗೆ ಸುಮಾರು ₹ 52 ಲಕ್ಷ ಇದಕ್ಕಾಗಿ ವ್ಯಯಿಸಿದ್ದೇನೆ. ಯಾವುದೋ ಒಂದು ಶಕ್ತಿ ನನ್ನಿಂದ ಈ ಕಾರ್ಯಗಳನ್ನು ಮಾಡಿಸುತ್ತಿದೆ. ನನ್ನ ಪತ್ನಿಯ ಸಹಾಯ ಇಲ್ಲದೇ ಇರುತ್ತಿದ್ದರೆ ಇದು ಯಾವುದೂ ಸಾಧ್ಯವಾಗುತ್ತಿರಲಿಲ್ಲ.

ಈಗ ಎಲ್ಲರ ಬದುಕು ಸಹಜ ಸ್ಥಿತಿಗೆ ಬರುತ್ತಿದೆ. ಆದರೂ ನಾನು ರೈಸ್ ಎಟಿಎಂ ನಿಲ್ಲಿಸಲು ಆಲೋಚಿಸುತ್ತಿಲ್ಲ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು ಎಂಬುದೇ ನನ್ನ ಆಶಯ. ತುಂಬಾ ಕಷ್ಟದಲ್ಲಿರುವ ಜನರಿಗೆ ಇದು ನೆರವಾಗಬೇಕು. ಅಕ್ಕಿಗೆಂದು ಪದೇಪದೇ ನನ್ನಲ್ಲಿಗೆ ಬರುವವರಿಗೆ ಕೆಲಸ ಹುಡುಕಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಆಪ್ತವಾಗಿ ಮಾತನಾಡುತ್ತೇನೆ. ಸ್ವಾವಲಂಬಿ ಜೀವನದ ಸಾಧ್ಯತೆಗಳನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ. ಸದಾಕಾಲ ನನಗೆ ರೈಸ್ ಎಟಿಎಂ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಆದರೆ ಕಷ್ಟದಲ್ಲಿರುವವರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು. ನನ್ನ ಕೈಲಾದಷ್ಟು ದಿವಸ ಇದನ್ನು ಮುಂದುವರಿಸುತ್ತೇವೆ ಎಂದು ರಾಮು ಹೇಳುತ್ತಾರೆ.

ಕೊರೊನಾ ರೋಗಿಗಳಲ್ಲೂ ಕ್ರಿಸ್ಮಸ್​ ಸಂಭ್ರಮ ಮೂಡಿಸಿದ ಸಂತ ಕ್ಲಾಸ್; ಕೆಂಪು PPE Kit ಧರಿಸಿ ಉಡುಗೊರೆ ತಂದ ಮಮತಾಮಯಿ

Published On - 5:53 pm, Thu, 24 December 20

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?