AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ವರ್ಷಗಳಲ್ಲಿ ಮೂರು ಮದುವೆಯಾಗಿ ಜೈಲುಪಾಲಾದ ವ್ಯಕ್ತಿ

ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಪಿಂಟು ಬರ್ನ್‌ವಾಲ್ ಎಂಬ ವ್ಯಕ್ತಿ ಮೂರು ವರ್ಷಗಳಲ್ಲಿ ಮೂವರು ಮಹಿಳೆಯರನ್ನು ಮದುವೆಯಾಗಿ ಜೈಲು ಸೇರಿದ್ದಾರೆ. ವಿಚ್ಛೇದನ ನೀಡದೆ ಈ ಮದುವೆಗಳನ್ನು ಮಾಡಿಕೊಂಡಿದ್ದಾರೆ. ಮೊದಲ ಮತ್ತು ಎರಡನೇ ಪತ್ನಿಯರು ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಬೇಡಿಕೆಯ ಆರೋಪ ಮಾಡಿದ್ದು, ಅದನ್ನ ಆತ ನಿರಾಕರಿಸಿದ್ದಾರೆ. ಕುಟುಂಬದ ಪರಿಸ್ಥಿತಿ ಕಾರಣ ಹಿಂದಿನ ವಿವಾಹ ಮುಂದುವರಿಸಲಾಗಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಮೂರು ವರ್ಷಗಳಲ್ಲಿ ಮೂರು ಮದುವೆಯಾಗಿ ಜೈಲುಪಾಲಾದ ವ್ಯಕ್ತಿ
ಪಿಂಟುImage Credit source: NDTV
ನಯನಾ ರಾಜೀವ್
|

Updated on: Dec 26, 2025 | 9:14 AM

Share

ಗೋಪಾಲ್​ಗಂಜ್, ಡಿಸೆಂಬರ್ 26: ವ್ಯಕ್ತಿಯೊಬ್ಬ ಮೂರು ವರ್ಷಗಳಲ್ಲಿ ಮೂರು ಮದುವೆ(Marriage)ಯಾಗಿ ಈಗ ಜೈಲುಪಾಲಾಗಿರುವ ಘಟನೆ ಬಿಹಾರದ ಗೋಪಾಲ್​ಗಂಜ್​ನಲ್ಲಿ ನಡೆದಿದೆ. ಗೋಪಾಲ್‌ಗಂಜ್ ಜಿಲ್ಲೆಯ ಪಿಂಟು ಬರ್ನ್‌ವಾಲ್ ಎಂಬ ವ್ಯಕ್ತಿಯನ್ನು ಮೂರು ವರ್ಷಗಳ ಅವಧಿಯಲ್ಲಿ ತನ್ನ ಹಿಂದಿನ ಯಾವುದೇ ಪತ್ನಿಯರಿಗೆ ವಿಚ್ಛೇದನ ನೀಡದೆ ಮೂವರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಆತನ ಮೊದಲ ಮತ್ತು ಎರಡನೇ ಪತ್ನಿ ಆತನ ಮೇಲೆ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಬೇಡಿಕೆಯ ಆರೋಪ ಹೊರಿಸಿದ ನಂತರ ಆತನನ್ನು ಬಂಧಿಸಲಾಗಿದೆ.

ಆರೋಪಗಳಿಗೆ ಪ್ರತಿಕ್ರಿಯಿಸಿದ ಪಿಂಟು ಬರ್ನ್ವಾಲ್, ವರದಕ್ಷಿಣೆ, ಹಿಂಸೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ತನ್ನ ವಿರುದ್ಧ ಮಾಡಲಾದ ಆರೋಪಗಳು ಸುಳ್ಳು ಎಂದು ಅವರು ಹೇಳಿಕೊಂಡಿದ್ದಾರೆ. ವರದಕ್ಷಿಣೆ ಆರೋಪಗಳಿಗೆ ಸಂಬಂಧಿಸಿದಂತೆ ಅವರು ಹೇಳಿದ್ದೆಲ್ಲವೂ ಸುಳ್ಳು, ನಾವು ಅವರಿಂದ ಒಂದು ರೂಪಾಯಿ ಕೂಡ ಪಡೆದಿಲ್ಲ ಎಂದು ಪಿಂಟು ಹೇಳಿದ್ದಾರೆ.

ತಾನು ಮೂವರು ಮಹಿಳೆಯರನ್ನು ಮದುವೆಯಾಗಿದ್ದೇನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅವರ ಪ್ರಕಾರ, ಅವರ ಮನೆಯ ಪರಿಸ್ಥಿತಿಯಿಂದ ಹಿಂದಿನ ವಿವಾಹಗಳನ್ನು ಮುಂದುವರಿಸಲು ಸಾಧ್ಯವಾಗಿಲ್ಲ ನನ್ನ ತಾಯಿಗೆ 60 ವರ್ಷ. ಅವರಿಬ್ಬರೂ ಎರಡು ದಿನಗಳವರೆಗೆ ಅಡುಗೆಯನ್ನೂ ಮಾಡಿರಲಿಲ್ಲ ಎಂದು ಪಿಂಟು ಹೇಳಿದ್ದಾರೆ.

ಮತ್ತಷ್ಟು ಓದಿ: ಇನ್​ಸ್ಟಾಗ್ರಾಂ ಪ್ರೇಯಸಿ ಜೊತೆ ಮದುವೆ ಫಿಕ್ಸ್; ಮಂಟಪಕ್ಕೆ ಬಂದ ವರನಿಗೆ ಶಾಕ್ ನೀಡಿದ ವಧು!

ಇಬ್ಬರೂ ಪತ್ನಿಯರ ಲಿಖಿತ ದೂರುಗಳ ನಂತರ, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗುತ್ತಿದೆ. ಖುಷ್ಬೂ ಅವರೊಂದಿಗಿನ ತನ್ನ ಮೊದಲ ಮದುವೆಯ ಬಗ್ಗೆ ಮಾತನಾಡುತ್ತಾ, ಪಿಂಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮೊದಲನೆಯವಳು, ಖುಷ್ಬೂ, ಆಕೆ ನನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಊರಿನವರಿಗೆ ತಿಳಿದಿದೆ, ಆಕೆಯ ದಾಳಿಯಲ್ಲಿ ಅಂದು ನಾನು ಮತ್ತು ನನ್ನ ತಾಯಿ ಇಬ್ಬರೂ ಸಾಯಬೇಕಿತ್ತು ಎಂದು ಅವರು ಹೇಳಿದ್ದಾರೆ.

10 ವರ್ಷ ವಯಸ್ಸಿನ ಅಂತರವಿತ್ತು ಮತ್ತು ಯಾವುದೇ ದೈಹಿಕ ಸಂಬಂಧವಿಲ್ಲ ಎಂದು ಹೇಳಿದ ಅವರು, ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಅತ್ಯಾಚಾರ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ಕರೆದಿದ್ದಾರೆ.

ನನ್ನ ತಾಯಿ ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಹೃದಯ ಕಾಯಿಲೆ ಮತ್ತು ಮಧುಮೇಹದಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ನನಗೆ ಅಡುಗೆ ಮಾಡಲು ಸಹ ಬರುತ್ತಿರಲಿಲ್ಲ.

ಮದುವೆಯ ನಂತರ ಪದೇ ಪದೇ ಚಿತ್ರಹಿಂಸೆ ನೀಡಲಾಗಿದೆ ಎಂದು ಖುಷ್ಬೂ ಆರೋಪಿಸಿದ್ದಾರೆ.ನಾನು ಪಿಂಟು ಜೊತೆ ಅವನ ಅತ್ತೆಯ ಮನೆಯಲ್ಲಿ ವಾಸಿಸುತ್ತಿದ್ದೆ. ಅವನು ನನಗೆ ಚಿತ್ರಹಿಂಸೆ ನೀಡಿ, ಹೊಡೆದಿದ್ದಾರೆ ಮತ್ತು ಒಂದು ದಿನ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದರು ಎಂದು ಅವರು ಹೇಳಿದ್ದಾರೆ. ಕೂಡಲೇ ಆಕೆ ತನ್ನ ತವರು ಮನೆಗೆ ಬಂದಿದ್ದಳು, ಅಂದಿನಿಂದ ಯಾವ ಸಂಪರ್ಕವೂ ಇರಲಿಲ್ಲ.

ಏಪ್ರಿಲ್ 18, 2024 ರಂದು, ಪಿಂಟು ತನಗೆ ವಿಚ್ಛೇದನ ನೀಡದೆ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದು ಮೊದಲನೇ ಹೆಂಡತಿ ಹೇಳಿದ್ದಾಳೆ. ಎರಡನೇ ಹೆಂಡತಿಗೆ 10 ತಿಂಗಳ ಮಗುವಿದೆ, ಮತ್ತು ಮೂರನೇ ಹೆಂಡತಿಗೆ ಒಂದು ತಿಂಗಳ ಮಗುವಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ