ಗೋರಖ್‌ನಾಥ್ ದೇವಸ್ಥಾನದ ಭದ್ರತಾ ಸಿಬ್ಬಂದಿ ಮೇಲೆ ದಾಳಿ ಪ್ರಕರಣ: ಅಪರಾಧಿ ಅಹ್ಮದ್ ಮುರ್ತಾಜಾ ಅಬ್ಬಾಸಿಗೆ ಮರಣದಂಡನೆ ಶಿಕ್ಷೆ

Gorakhnath Temple Attack Case ಗೋರಖ್‌ನಾಥ್ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿದ ಅಪರಾಧಿ ಅಹ್ಮದ್ ಮುರ್ತಾಜಾ ಅಬ್ಬಾಸಿಗೆ ಮರಣದಂಡನೆ ವಿಧಿಸಿದ ಲಕ್ನೋದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ.

ಗೋರಖ್‌ನಾಥ್ ದೇವಸ್ಥಾನದ ಭದ್ರತಾ ಸಿಬ್ಬಂದಿ ಮೇಲೆ ದಾಳಿ ಪ್ರಕರಣ: ಅಪರಾಧಿ ಅಹ್ಮದ್ ಮುರ್ತಾಜಾ ಅಬ್ಬಾಸಿಗೆ ಮರಣದಂಡನೆ ಶಿಕ್ಷೆ
Ahmad Murtaza Abbasi
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 30, 2023 | 6:46 PM

ಕಳೆದ ವರ್ಷ ಗೋರಖ್‌ಪುರದ (Gorakhpur) ಗೋರಖ್‌ನಾಥ್ ದೇವಸ್ಥಾನದಲ್ಲಿ (Gorakhnath temple)ಭದ್ರತಾ ಸಿಬ್ಬಂದಿಯ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿದ ಅಪರಾಧಿ ಅಹ್ಮದ್ ಮುರ್ತಾಜಾ ಅಬ್ಬಾಸಿಗೆ (Ahmad Murtaza Abbasi)ಲಕ್ನೋದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಸೋಮವಾರ ಮರದಂಡನೆ ವಿಧಿಸಿದೆ. ಶನಿವಾರ ಲಕ್ನೋದ ಎಟಿಎಸ್ ನ್ಯಾಯಾಲಯ ಅಬ್ಬಾಸಿಗೆ ಶಿಕ್ಷೆ ವಿಧಿಸಿದೆ. ಎಫ್‌ಐಆರ್ ಪ್ರಕಾರ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪದವೀಧರನಾಗಿದ್ದ ಅಬ್ಬಾಸಿ ಕಳೆದ ವರ್ಷ ಏಪ್ರಿಲ್ 3 ರಂದು ಗೋರಖನಾಥ ದೇವಾಲಯದ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದ.

ಆವರಣದಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಮೇಲೆ ಅಬ್ಬಾಸಿ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಪ್ರಾಂತೀಯ ಸಶಸ್ತ್ರ ಕಾನ್ಸ್‌ಟೇಬಲ್‌ಗಳು (ಪಿಎಸಿ) ಗಾಯಗೊಂಡಿದ್ದಾರೆ. ಅವರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಎಟಿಎಸ್ ತನಿಖೆ ನಡೆಸಿತ್ತು.

ಘಟನೆಯ ಹಿಂದೆ ಭಯೋತ್ಪಾದನೆಯ ಲಕ್ಷ್ಯವಿರಬಹುದು  ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ-ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಉತ್ತರ ಪ್ರದೇಶ ಗೃಹ ಇಲಾಖೆ ಕೂಡ ಘಟನೆಯನ್ನು ಆಳವಾದ ಪಿತೂರಿಯ ಭಾಗವೆಂದು ಹೇಳಿದ್ದು, ಇದು ಉಗ್ರ ಕೃತ್ಯ ಎಂದು ಹೇಳಿತ್ತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖನಾಥ ದೇವಾಲಯದ ಪ್ರಧಾನ ಅರ್ಚಕ (ಮಹಾಂತ್) ಮತ್ತು ಇಲ್ಲಿ ಅವರ ವೈಯಕ್ತಿಕ ವಸತಿ ಹೊಂದಿದ್ದಾರೆ. ದಾಳಿ ವೇಳೆ ಸಿಎಂ ಯೋಗಿ ಅಲ್ಲಿರಲಿಲ್ಲ.

ಪ್ರಕರಣದ ತನಿಖೆ ನಡೆಸುತ್ತಿದ್ದ ಉತ್ತರ ಪ್ರದೇಶದ ಎಟಿಎಸ್ ಪ್ರಕಾರ, ಅಬ್ಬಾಸಿ 2013 ರಲ್ಲಿ ಭಯೋತ್ಪಾದಕ ಸಂಘಟನೆ ಅನ್ಸರ್-ಉಲ್-ತೌಹೀದ್‌ ಸದಸ್ಯನಾಗಿದ್ದು 2014 ರಲ್ಲಿ ಐಸಿಸ್‌ನೊಂದಿಗೆ ಇದು ವಿಲೀನಗೊಂಡಿತು. ಅವರು 2020 ರಲ್ಲಿ ಐಸಿಸ್‌ಗಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಐಎಸ್‌ಐಎಸ್‌ನ ಭಯೋತ್ಪಾದಕ ಸಿದ್ಧಾಂತವನ್ನು ಅನುಸರಿಸುತ್ತಿರುವ ಆರೋಪಿಯು ಗೋರಖನಾಥ ದೇವಾಲಯದ ದಕ್ಷಿಣ ದ್ವಾರದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಯ ಮೇಲೆ ‘lone wolf attack ಶೈಲಿಯಲ್ಲಿ ದಾಳಿ ನಡೆಸಿ ಅಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯ ರೈಫಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದನು ಎಂದು ಎಟಿಸ್ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:23 pm, Mon, 30 January 23