AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆ ಕಾಯ್ದೆ ಮರುಪರಿಶೀಲನೆ; ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯಲು ರೂಪಿಸಿದ್ದ ವಿವಾದಾತ್ಮಕ ನಿಯಮಾವಳಿಗಳನ್ನು ಮರುಪರಿಶೀಲಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಹೊಸ ಪರಿಶೀಲನಾ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠದ ಮುಂದೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಷಯವನ್ನು ಅಧಿಕೃತವಾಗಿ ಪೀಠಕ್ಕೆ ಆಲಿಸಿದ್ದಾರೆ. ಯುಜಿಸಿಯ ನೂತನ ನಿಯಮಾವಳಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ನಿಯಮಗಳು ಮೇಲ್ನೋಟಕ್ಕೆ ಅಸ್ಪಷ್ಟವಾಗಿದ್ದು ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದು ಹೇಳಿ ಅವುಗಳ ಜಾರಿಗೆ ಹಿಂದೆ ತಡೆಯಾಜ್ಞೆ ನೀಡಿತ್ತು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆ ಕಾಯ್ದೆ ಮರುಪರಿಶೀಲನೆ; ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ
Ugc
ಸುಷ್ಮಾ ಚಕ್ರೆ
|

Updated on: Nov 05, 2026 | 3:21 PM

Share

ನವದೆಹಲಿ, ನವೆಂಬರ್ 5: ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಗಟ್ಟಲು ರೂಪಿಸಿದ್ದ ‘ಯುಜಿಸಿ ಈಕ್ವಿಟಿ ನಿಯಮಾವಳಿಗಳನ್ನು ಮರುಪರಿಶೀಲಿಸಲು ವಿಶೇಷ ಸಮಿತಿಯೊಂದನ್ನು ರಚಿಸುವ ಕುರಿತು ಆಲೋಚಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ನಿಯಮಗಳ ಅಸ್ಪಷ್ಟತೆಯಿಂದ ದುರುಪಯೋಗವಾಗುವ ಹಾಗೂ ಸಮಾಜದ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಳೆದ ಜನವರಿಯಲ್ಲಿ ಈ ನಿಯಮಾವಳಿಗಳ ಜಾರಿಗೆ ತಡೆಯಾಜ್ಞೆ ನೀಡಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠದ ಮುಂದೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಪ್ರಮುಖ ವಿಚಾರವನ್ನು ಕೋರ್ಟ್‌ ಗಮನಕ್ಕೆ ತಂದರು.

ಇದನ್ನೂ ಓದಿ: ಕೆಇಎ ಯುಜಿಸಿಇಟಿ 2026: 3ನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ಕಾಲೇಜು ಪ್ರವೇಶ ಕಡ್ಡಾಯ, ತಪ್ಪಿದರೆ ಕಾನೂನು ಕ್ರಮ

“ಮುಂದಿನ ತಲೆಮಾರಿನ ಯುವಕರ ಹಿತದೃಷ್ಟಿಯಿಂದ ಹಾಗೂ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯ ಹಿತರಕ್ಷಣೆಯಾಗುವಂತೆ ನೀವು ಈ ನಿಯಮಾವಳಿಗಳನ್ನು ಏಕೆ ಮರುಪರಿಶೀಲಿಸಬಾರದು? ಯಾವುದೇ ವರ್ಗದ ವಿದ್ಯಾರ್ಥಿಗಳು ತಮ್ಮ ವಿರುದ್ಧ ತಾರತಮ್ಯವಾಗುತ್ತಿದೆ ಅಥವಾ ಅಸಮಾಧಾನವಿದೆ ಎಂದು ಭಾವಿಸಬಾರದು” ಎಂದು ಸಿಜೆಐ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠ ಸಾಲಿಸಿಟರ್ ಜನರಲ್‌ಗೆ ಸಲಹೆ ನೀಡಿತು.

ಸಮಿತಿ ರಚನೆಗೆ ಕೇಂದ್ರದ ಸಿದ್ಧತೆ:

ಸುಪ್ರೀಂ ಕೋರ್ಟ್ ಸಲಹೆಗೆ ಸ್ಪಂದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ನಿಯಮಾವಳಿಗಳನ್ನು ಪುನರ್ ಪರಿಶೀಲಿಸಲು ಸರ್ಕಾರ ಸಮಿತಿಯೊಂದನ್ನು ರಚಿಸುವ ಆಲೋಚನೆಯಲ್ಲಿದೆ. ದೇಶದ ಯಾವುದೇ ವಿಭಾಗದ ವಿದ್ಯಾರ್ಥಿಗಳು ಅಸಮಾಧಾನಗೊಳ್ಳದಂತೆ ಅಥವಾ ಆತಂಕಕ್ಕೆ ಒಳಗಾಗದಂತೆ ಈ ಇಡೀ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ” ಎಂದು ಆಶ್ವಾಸನೆ ನೀಡಿದರು.

ಇದನ್ನೂ ಓದಿ: UGC-NET 2026: ಯುಜಿಸಿ ನೆಟ್ ಫಲಿತಾಂಶ ಪ್ರಕಟ; ಮೂರು ವಿಷಯಗಳಿಗೆ ಸೆಪ್ಟೆಂಬರ್​ನಲ್ಲಿ ಮರು ಪರೀಕ್ಷೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಉತ್ತೇಜನಕ್ಕೆ ಸಂಬಂಧಿಸಿದ ಈ ಕಾಯ್ದೆಯನ್ನು ಜನವರಿ 13, 2026ರಂದು ಹೊರಡಿಸಲಾಗಿತ್ತು. ಆದರೆ, ನಿಯಮಗಳ ಅಸ್ಪಷ್ಟತೆಯಿಂದ ದುರುಪಯೋಗದ ಅಪಾಯವಿದೆ ಎಂದು ತಿಳಿಸಿ ಜನವರಿ 29, 2026ರಂದು ಸುಪ್ರೀಂ ಕೋರ್ಟ್ ಈ ನಿಯಮಾವಳಿಗಳ ಜಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಮಧ್ಯಂತರ ವ್ಯವಸ್ಥೆಯಾಗಿ 2012ರ ಯುಜಿಸಿ ತಾರತಮ್ಯ ತಡೆ ನಿಯಮಗಳು ಮುಂದುವರಿಯಲಿವೆ ಎಂದು ಕೋರ್ಟ್ ತಿಳಿಸಿತ್ತು.

ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧಕ ರೋಹಿತ್ ವೇಮುಲ 2016ರಲ್ಲಿ ಹಾಗೂ ಮುಂಬೈ ವೈದ್ಯಕೀಯ ವಿದ್ಯಾರ್ಥಿನಿ ಪಾಯಲ್ ತಡ್ವಿ 2019ರಲ್ಲಿ ಸಾವನ್ನಪ್ಪಿದ ನಂತರ ಅವರ ಪೋಷಕರು 2019ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಈ ಹೊಸ ಈಕ್ವಿಟಿ ನಿಯಮಾವಳಿಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ
‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ