ಭದ್ರತೆ ವಿಚಾರದಲ್ಲಿ NCC ಪಾತ್ರ ಹೆಚ್ಚಿಸಲು ಭಾರತ ಸರ್ಕಾರ ಶ್ರಮಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ
ಸರ್ಕಾರವು ಎನ್ಸಿಸಿಯ ಪಾತ್ರವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಗಡಿಭಾಗದ ಹಾಗೂ ದೇಶದ ಕಡಲ ತೀರದ ಭದ್ರತೆಯನ್ನು ಹೆಚ್ಚಿಸುವಲ್ಲಿ ಎನ್ಸಿಸಿ ಹೆಚ್ಚಿನ ಪಾತ್ರ ವಹಿಸುವಂತೆ ಪ್ರೋತ್ಸಾಹಿಸಲಾಗುವುದು.
ದೆಹಲಿ: ಅದು ನೆರೆ ಹಾವಳಿಯ ಪರಿಸ್ಥಿತಿಯಾಗಿರಲಿ ಅಥವಾ ಪ್ರಾಕೃತಿಕ ವಿಕೋಪದ ಸಂದರ್ಭವಾಗಿರಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಭಾರತೀಯ ಜನತೆಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಕೊವಿಡ್ ಕಷ್ಟಕಾಲದಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ವಿದ್ಯಾರ್ಥಿಗಳು ಸಮಾಜದಲ್ಲಿ ಕೊರೊನಾ ನಿರ್ವಹಣೆಗೆ ಶ್ರಮಿಸಿದ್ದಾರೆ ಎಂದು ಸ್ಮರಿಸಿಕೊಂಡರು. ರಾಷ್ಟ್ರ ರಾಜಧಾನಿಯ ಕಾರ್ಯಪ್ಪ ಮೈದಾನದಲ್ಲಿ ಎನ್ಸಿಸಿ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರವು ಎನ್ಸಿಸಿ ಪಾತ್ರವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಗಡಿ ಭಾಗದ ಹಾಗೂ ದೇಶದ ಕಡಲ ತೀರದ ಭದ್ರತೆಯನ್ನು ಹೆಚ್ಚಿಸುವಲ್ಲಿ ಎನ್ಸಿಸಿ ಹೆಚ್ಚಿನ ಪಾತ್ರ ವಹಿಸುವಂತೆ ಪ್ರೋತ್ಸಾಹಿಸಲಾಗುವುದು ಎಂದು ಮೋದಿ ತಿಳಿಸಿದರು. ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು, 175 ಜಿಲ್ಲೆಗಳ ಎನ್ಸಿಸಿ ವೇದಿಕೆಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಇದಕ್ಕಾಗಿ ಸುಮಾರು 1 ಲಕ್ಷದಷ್ಟು ಎನ್ಸಿಸಿ ಕೆಡೆಟ್ಗಳಿಗೆ ಭೂಸೇನೆ, ವಾಯುಸೇನೆ, ಜಲಸೇನೆಯಿಂದ ತರಬೇತಿ ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ರೋಮಾಂಚಕಾರಿ ‘ವರ್ಟಿಕಲ್ ಚಾರ್ಲಿ’ ಹಾಗೂ ‘ಏಕಲವ್ಯ’ ಪ್ರದರ್ಶನ ತೋರಿದ ರಫೇಲ್ ಜೆಟ್ ವಿಮಾನ
ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಕೆಡೆಟ್ಗಳಿಂದ ಗೌರವ ಸ್ವೀಕರಿಸಿದರು. ಬಳಿಕ, ಹಲವು ಕಲಾವಿದರಿಂದ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ಜರುಗಿದವು.
ಪ್ರಧಾನಿ ನರೇಂದ್ರ ಮೋದಿ ಗೌರವ ಸ್ವೀಕರಿಸುತ್ತಿರುವುದು.
Delhi: Prime Minister Narendra Modi inspects the parade at the rally of National Cadet Corps (NCC) at Cariappa Ground. pic.twitter.com/Vqs2gW1IQP
— ANI (@ANI) January 28, 2021
ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನಗಳು ಜನಮನಸೂರೆಗೊಂಡವು.
#WATCH: Delhi | Artists perform in presence of PM Narendra Modi at the rally of National Cadet Corps (NCC) at Cariappa Ground. pic.twitter.com/bLSYBl2Bgp
— ANI (@ANI) January 28, 2021
‘ನಿಮಗೆ ದುರಹಂಕಾರ ಬರಲು ರೈತರೇ ಕಾರಣ; ಪ್ರಧಾನಿ ಮೋದಿಯ ಅಹಂಕಾರಕ್ಕೆ ಎಚ್ಚರಿಕೆ’
ಹೊಸ ಪುಸ್ತಕ Middle Class, Media and Modi | ಮಧ್ಯಮ ವರ್ಗ, ಮಾಧ್ಯಮವನ್ನು ಮೋದಿ ಆವರಿಸಿಕೊಂಡ ಪರಿಯಿದು
Published On - 6:12 pm, Thu, 28 January 21