ಬೆಳೆಯಲ್ಲಿ ಪೋಷಕಾಂಶ ಕಾಪಾಡಲು ಮತ್ತು ರೈತರ ಆದಾಯ ವೃದ್ಧಿಗೆ ಹಲವು ಕ್ರಮ ಘೋಷಿಸಿದ ಕೇಂದ್ರ ಸರ್ಕಾರ

ದೇಶದ ಆರ್ಥಿಕತೆಯ ಬೆನ್ನೆಲುಬು ಎನಿಸಿರುವ ಗ್ರಾಮೀಣ ಪ್ರದೇಶದಲ್ಲಿ ಹಣಕಾಸು ಹರಿವು ಸುಧಾರಿಸುವ ಉದ್ದೇಶದಿಂದ ಕೃಷಿ ಕ್ಷೇತ್ರದ ಸುಧಾರಣೆಗೆ ಹಲವು ಹೊಸ ಕ್ರಮಗಳನ್ನು ಘೋಷಿಸಿದೆ.

ಬೆಳೆಯಲ್ಲಿ ಪೋಷಕಾಂಶ ಕಾಪಾಡಲು ಮತ್ತು ರೈತರ ಆದಾಯ ವೃದ್ಧಿಗೆ ಹಲವು ಕ್ರಮ ಘೋಷಿಸಿದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Jun 28, 2021 | 9:06 PM

ದೆಹಲಿ: ಕೊವಿಡ್ 2ನೇ ಅಲೆಯ ಹೊಡೆತದಿಂದ ನಲುಗಿರುವ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ₹ 1.1 ಲಕ್ಷ ಕೋಟಿ ಮೊತ್ತದ ಬೃಹತ್ ಪ್ಯಾಕೇಜ್​ ಒಂದನ್ನು ಕೇಂದ್ರ ಸರ್ಕಾರ ಘೋಷಿಸಿದೆ. ದೇಶದ ಆರ್ಥಿಕತೆಯ ಬೆನ್ನೆಲುಬು ಎನಿಸಿರುವ ಗ್ರಾಮೀಣ ಪ್ರದೇಶದಲ್ಲಿ ಹಣಕಾಸು ಹರಿವು ಸುಧಾರಿಸುವ ಉದ್ದೇಶದಿಂದ ಕೃಷಿ ಕ್ಷೇತ್ರದ ಸುಧಾರಣೆಗೆ ಹಲವು ಹೊಸ ಕ್ರಮಗಳನ್ನು ಘೋಷಿಸಿದೆ. ಈ ಕ್ರಮಗಳ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಾಹಿತಿ ನೀಡಿದರು.

ಆಹಾರ ಧಾನ್ಯಗಳ ಬೆಳೆಗಳ ಬಗ್ಗೆ ಈ ಹಿಂದೆ ಸಂಶೋಧನೆ ನಡೆಯುತ್ತಿದ್ದಾಗ ಕೇವಲ ಹೆಚ್ಚು ಇಳುವರಿ ನೀಡುವ ತಳಿಗಳನ್ನು ಅಭಿವೃದ್ಧಿಪಡಿಸಲು ಗಮನ ನೀಡಲಾಗುತ್ತಿತ್ತು. ಪೌಷ್ಟಿಕಾಂಶ, ವಾತಾವರಣ ವೈಪರಿತ್ಯಗಳನ್ನು ತಡೆದುಕೊಳ್ಳುವ ಶಕ್ತಿಯೂ ಸೇರಿದಂತೆ ಇತರ ಪ್ರಮುಖ ಅಂಶಗಳನ್ನು ನಿರ್ಲಕ್ಷಿಸಲಾಗುತ್ತಿತ್ತು. ಅತ್ಯಗತ್ಯ ಪೌಷ್ಟಿಕಾಂಶಗಳು ಅಗತ್ಯ ಪ್ರಮಾಣಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿರುತ್ತಿತ್ತು. ಬಯೋಟಿಕ್ ಮತ್ತು ಆ್ಯಂಟಿಬಯೋಟಿಕ್ ಒತ್ತಡಗಳನ್ನೂ ಈ ಬೆಳೆಗಳು ತಡೆದುಕೊಳ್ಳುತ್ತಿರಲಿಲ್ಲ ಎಂದು ಸಚಿವರು ವಿವರಿಸಿದರು.

ಭಾರತೀಯ ಕೃಷಿ ಸಂಶೋಧನಾ ಮಂಡಳಿ (Indian Council of Agriculture Research – ICAR) ಈಚೆಗೆ ಹೆಚ್ಚು ಪೌಷ್ಟಿಕಾಂಶಗಳಿರುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಈ ತಳಿಗಳಲ್ಲಿ ಪ್ರೊಟೀನ್, ಕಬ್ಬಿಣದ ಅಂಶ, ಸತು ಮತ್ತು ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿದೆ. ರೋಗಗಳು, ಕ್ರಿಮಿ ಮತ್ತು ಕೀಟಗಳು, ಬರ, ಜೌಗು ಭೂಮಿ ಮತ್ತು ಪ್ರವಾಹದ ಪ್ರತಿಕೂಲ ಸಂದರ್ಭದಲ್ಲಿಯೂ ಬೆಳೆಯುವ ಸಾಮರ್ಥ್ಯ ಹೊಂದಿವೆ. ಇತರ ತಳಿಗಳಿಗೆ ಹೋಲಿಸಿದರೆ ಬೇಗ ಬೆಳೆಯುವ ಮತ್ತು ಯಾಂತ್ರಿಕ ಕೊಯ್ಲಿಗೆ ಅವಕಾಶ ಕಲ್ಪಿಸುವ ತಳಿಗಳನ್ನು ಐಸಿಎಆರ್ ಅಭಿವೃದ್ಧಿಪಡಿಸಿದೆ. ಭತ್ತ, ಶೇಂಗಾ, ಕಿರುಧಾನ್ಯಗಳು, ಸೊಯಾಬೀನ್, ನವಣೆ, ಹುರುಳಿ, ಜೋಳ, ಬಟಾಣಿ ಸೇರಿದಂತೆ ಹಲವು ಬೆಳೆಗಳನ್ನು ಅಭಿವೃದ್ಧಿಪಡಿಸಿ ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈಶಾನ್ಯ ಭಾರತ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮದ ಪುನಶ್ಚೇತನಕ್ಕೆ (Revival of North Eastren Regional Agricultural Marketing Corporation – NERAMAC) ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಇದಕ್ಕಾಗಿ ₹ 77.45 ಕೋಟಿ ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಈಶಾನ್ಯ ಭಾರತದ ರೈತರು ಬೆಳೆಯುವ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಧಾರಣೆ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ 1982ರಲ್ಲಿ ಈ ಸಂಸ್ಥೆಯನ್ನು ಆರಂಭಿಸಲಾಯಿತು. ಈಶಾನ್ಯ ಭಾರತದಲ್ಲಿ ಕೃಷಿ ಉತ್ಪಾದನೆ, ಸಂಗ್ರಹ, ಸಂಸ್ಕರಣೆ ಮತ್ತು ಮಾರ್ಕೆಟಿಂಗ್​ ಮೂಲ ಸೌಕರ್ಯ ಒದಗಿಸಲು ಈ ಸಂಸ್ಥೆಯು ಶ್ರಮಿಸುತ್ತಿದೆ. 75 ರೈತ ಉತ್ಪಾದನಾ ಸಂಘಟನೆಗಳು ಈ ಸಂಸ್ಥೆಯಡಿ ನೋಂದಣಿಯಾಗಿದ್ದು, 13 ಭೌಗೋಳಿಕ ವಿಶಿಷ್ಟ (Geographical Indication) ಬೆಳೆಗಳನ್ನು ನೋಂದಾಯಿಸಲಾಗಿದೆ. ಮಧ್ಯವರ್ತಿಗಳ ಅವಲಂಬನೆಯಿಲ್ಲದೆ ಮಾರುಕಟ್ಟೆ ಸಿಗುವಂಥ ವ್ಯವಸ್ಥೆ ಮಾಡಲಾಗಿದೆ. ಇದರಿಂದ ರೈತರಿಗೆ ಶೇ 10ರಿಂದ 15ರಷ್ಟು ಹೆಚ್ಚುವರಿ ಲಾಭ ಸಿಗುತ್ತಿದೆ ಎಂದು ಸಚಿವರು ವಿವರಿಸಿದರು.

ರೈತರ ಸಾಮರ್ಥ್ಯ ವೃದ್ಧಿ, ಮೌಲ್ಯವರ್ಧನೆ, ವಿಂಗಡಣೆ, ಮಾರುಕಟ್ಟೆ ಲಭ್ಯತೆಗೆ ತಂತ್ರಜ್ಞಾನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸಾವಯವ ಬೆಳೆ ಪದ್ಧತಿಗೆ ಪ್ರೋತ್ಸಾಹ ನೀಡಲು ಈಶಾನ್ಯ ಭಾರತದ ಬೆಳೆ ಕೇಂದ್ರ ಸ್ಥಾಪನೆ, ರೈತರಿಗೆ ಅಗತ್ಯ ಬಂಡವಾಳ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈಶಾನ್ಯ ಭಾರತದ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮದ ಪುನಶ್ಚೇತನಕ್ಕೆ ₹ 77.45 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

(Govt of India Announces Measures to Improve Farmers Income Through Agriculture Research)

ಇದನ್ನೂ ಓದಿ: BharatNet: ಹಳ್ಳಿಹಳ್ಳಿಗೂ ಬ್ರಾಡ್​ಬ್ಯಾಂಡ್ ತಲುಪಿಸುವುದಕ್ಕೆ ಹೆಚ್ಚುವರಿಯಾಗಿ 19,041 ಕೋಟಿ ರೂ. ಘೋಷಿಸಿದ ನಿರ್ಮಲಾ

ಇದನ್ನೂ ಓದಿ: ಕೊವಿಡ್ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ