Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar Fraud: ಆಧಾರ್ ದುರ್ಬಳಕೆ ತಡೆಯಲು ಸರ್ಕಾರ ನೀಡಿದ 7 ಸಲಹೆಗಳಿವು

UIDAI: ಭಾರತ ವಿಶಿಷ್ಟ ಗುರುತು ಪ್ರಾಧಿಕಾರವು ಆಧಾರ್​ ಸಂಖ್ಯೆಗಳ ಅಕ್ರಮ ಬಳಕೆಯ ಮೂಲಕ ಆಗುವ ಮೋಸ ತಡೆಗಟ್ಟಲು ಏಳು ಸಲಹೆಗಳನ್ನು ನೀಡಿದೆ.

Aadhaar Fraud: ಆಧಾರ್ ದುರ್ಬಳಕೆ ತಡೆಯಲು ಸರ್ಕಾರ ನೀಡಿದ 7 ಸಲಹೆಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 06, 2022 | 9:08 AM

ದೆಹಲಿ: ಭಾರತ ವಿಶಿಷ್ಟ ಗುರುತು ಪ್ರಾಧಿಕಾರವು (The Unique Identification Authority of India – UIDAI) ಆಧಾರ್​ ಸಂಖ್ಯೆಗಳ ಅಕ್ರಮ ಬಳಕೆಯ ಮೂಲಕ ಆಗುವ ಮೋಸ ತಡೆಗಟ್ಟಲು ಏಳು ಸಲಹೆಗಳನ್ನು ನೀಡಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಡಿಜಿಟಲ್ ಇಡಿಯಾ’ ಉಪಕ್ರಮಕ್ಕೆ ವಿಶಿಷ್ಟ ಗುರುತು ಪ್ರಾಧಿಕಾರವು ಆಧಾರ ಸ್ತಂಭ ಎನಿಸಿದೆ. ದೇಶದ ಎಲ್ಲ ನಾಗರಿಕರಿಗೂ ಪ್ರಾಧಿಕಾರವು ವಿಶಿಷ್ಟು ಸಂಖ್ಯೆಗಳನ್ನು ನೀಡಲಿದೆ. ಆಧಾರ್​ನ ಭಾಗವಾಗಿ ನಿಮ್ಮ ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಇತರ ವಿಚಾರಗಳು ಆಧಾರ್​ನ ಭಾಗವಾಗಿ ಇರುತ್ತವೆ. ಆಧಾರ್ ಮೂಲಕ ಸಂಗ್ರಹಿಸುವ ದತ್ತಾಂಶಗಳು ಸುರಕ್ಷಿತವಾಗಿರುತ್ತವೆ ಎಂದು ಕೇಂದ್ರ ಸರ್ಕಾರವು ಖಾತ್ರಿಪಡಿಸಿದೆಯಾದರೂ, ಆಧಾರ್​ನ ಸುರಕ್ಷಿತ ಬಳಕೆಗೆ ಒತ್ತು ನೀಡಬೇಕೆಂದು ಜನರಲ್ಲಿ ಮನವಿ ಮಾಡಿದೆ.

ಇದನ್ನೂ ಓದಿ: Aadhaar Card ಆಧಾರ್ ಕಾರ್ಡ್ ಫೋಟೊಕಾಪಿ ಹಂಚಿಕೊಳ್ಳಬೇಡಿ ಎಂಬ ಯುಐಡಿಎಐ ಎಚ್ಚರಿಕೆ ವಾಪಸ್ ಪಡೆದ ಕೇಂದ್ರ ಸರ್ಕಾರ

ಆಧಾರ್​ ಅಂಕಿಗಳ ಬಳಕೆಯಿಂದ ಆಗುವ ಅಕ್ರಮ ತಡೆಯಲು ವಹಿಸಬೇಕಾದ ಮುಂಜಾಗ್ರತೆ ಕುರಿತು ವಿಶಿಷ್ಟ ಗುರುತು ಪ್ರಾಧಿಕಾರವು ಸಲಹೆಗಳನ್ನು ನೀಡಿದೆ. ಈ ಸಲಹೆಗಳ 7 ಮುಖ್ಯ ಅಂಶಗಳಿವು…

  1. ಆಧಾರ್ ದೃಢೀಕರಣ: ಆಧಾರ್ ಕಾರ್ಡ್​ ಅನ್ನು ಗುರುತಿನ ಪುರಾವೆಯಾಗಿ ಬಳಸುವ ಮೊದಲು ಅದನ್ನು ಪರಿಶೀಲಿಸಿ, ದೃಢೀಕರಿಸಬೇಕಾಗುತ್ತದೆ. ಕೇವಲ 12 ಅಂಕಿಗಳನ್ನಷ್ಟೇ ಆಧಾರ್ ಎಂದು ಪರಿಗಣಿಸಲು ಆಗುವುದಿಲ್ಲ. ಆಧಾರ್​ ಅನ್ನು ದೃಢೀಕರಿಸಲು myaadhaar.uidai.gov.in/verifyAadhaar ವೆಬ್​ಸೈಟ್​ಗೆ ಹೋಗಬೇಕು ಎಂದು UIDAI ಹೇಳಿದೆ.
  2. ಆಧಾರ್ ಒಟಿಪಿ: ಆಧಾರ್ ದೃಢೀಕರಣಕ್ಕೆ ಇರುವ ಅತ್ಯುತ್ತಮ ಮತ್ತು ಸುಲಭದ ಮಾರ್ಗವೆಂದರೆ ಆಧಾರ್ ಒಟಿಪಿ. ಇದನ್ನು ನೀವಷ್ಟೇ ಬಳಸಬೇಕು. ಬೇರೆ ಯಾರೊಂದಿಗೂ ಇದನ್ನು ಶೇರ್ ಮಾಡಬಾರದು. ನೀವು ನೋಂದಾಯಿಸಿರುವ ಮೊಬೈಲ್ ನಂಬರ್​ಗೆ ಮಾತ್ರ ಆಧಾರ್​ ಒಟಿಪಿ ಬರುತ್ತದೆ.
  3. ಆಧಾರ್ ದೃಢೀಕರಣದ ಇತಿಹಾಸ: ಕಳೆದ 6 ತಿಂಗಳ ಅವಧಿಯಲ್ಲಿ ನೀವು ಎಷ್ಟು ಬಾರಿ ಆಧಾರ್ ದೃಢೀಕರಿಸಿದ್ದೀರಿ ಎನ್ನುವುದನ್ನು ಪರಿಶೀಲಿಸಬಹುದು. ಗಮನಿಸಿ, ಇದು ಗರಿಷ್ಠ 50 ದೃಢೀಕರಣನ್ನು ಮಾತ್ರ ತೋರಿಸುತ್ತದೆ. ಒಂದು ವೇಳೆ ನಿಮ್ಮ ಇಷ್ಟಕ್ಕೆ ವಿರುದ್ಧವಾಗಿ ಅಥವಾ ನಿಮ್ಮ ಗಮನಕ್ಕೆ ಬಾರದಂತೆ ಆಧಾರ್ ಸಂಖ್ಯೆ ಬಳಕೆಯಾಗಿದ್ದರೆ ಈ ಹಂತದಲ್ಲಿ ನೀವು ಕಂಡುಕೊಳ್ಳಬಹುದು.
  4. ಆಧಾರ್ ಡೌನ್​ಲೋಡ್: UIDAI ವೆಬ್​ಸೈಟ್​ ಬಳಕೆಯ ಮುಖ್ಯ ಉದ್ದೇಶವೇ ಆಧಾರ್​ ಡೌನ್​ಲೋಡ್ ಮಾಡಿಕೊಳ್ಳುವುದು ಆಗಿರುತ್ತದೆ. ಒಂದು ವೇಳೆ ನೀವು ಸಾರ್ವಜನಿಕ ಕಂಪ್ಯೂಟರ್​ನಲ್ಲಿ ಆಧಾರ್ ಡೌನ್​ಲೋಡ್ ಮಾಡಿಕೊಂಡಿದ್ದರೆ ಅಥವಾ UIDAI ವೆಬ್​ಸೈಟ್ ಬಳಸಿದ್ದರೆ ಡೌನ್​ಲೋಡ್ ಆಗಿರುವ ಫೈಲ್ ಡಿಲೀಟ್ ಮಾಡಲು ಮತ್ತು ಹಿಸ್ಟರಿ ಕ್ಲಿಯರ್ ಮಾಡಲು ಮರೆಯದಿರಿ.
  5. ಆಧಾರ್ ಬಯೊಮೆಟ್ರಿಕ್ಸ್: ಆಧಾರ್ ಬಯೊಮೆಟ್ರಿಕ್ಸ್​ ವಿವರಗಳನ್ನು ಪರಿಶೀಲಿಸುವ ಮೂಲಕವೂ ಆಧಾರ್ ದುರ್ಬಳಕೆ ತಡೆಯಬಹುದು. ಇದಕ್ಕಾಗಿ ಆಧಾರ್ ಆ್ಯಪ್ ಅಥವಾ ಪೋರ್ಟಲ್ ಬಳಸಬಹುದು. ಗಮನಿಸಿ, ಈ ಪ್ರಕ್ರಿಯೆ ಪೂರ್ಣಗೊಳಿಸಲು ವರ್ಚುವಲ್ ಐಡಿ (VID) ಅತ್ಯಗತ್ಯ. ಬಯೊಮೆಟ್ರಿಕ್ಸ್ ನಿಯಂತ್ರಕ್ಕಾಗಿ ಬಳಸಬೇಕಾದ ಲಿಂಕ್: resident.uidai.gov.in/aadhaar-lockunlock
  6. ಮಾಸ್ಕಡ್ ಆಧಾರ್: ನಿಮಗೆ ಆಧಾರ್ ನಂಬರ್ ಸಂಪೂರ್ಣವಾಗಿ ಬಹಿರಂಗಪಡಿಸುವುದು ಇಷ್ಟವಿಲ್ಲ ಎಂದಾದರೆ ನೀವು ಮಾಸ್ಕಡ್ ಆಧಾರ್ ಅಥವಾ ವರ್ಚುವಲ್ ಐಡಿ (VID) ಬಳಸಬಹುದು. ಇದಕ್ಕೂ ಮಾನ್ಯತೆಯಿದ್ದು, ಎಲ್ಲಡೆ ಬಳಸಬಹುದಾಗಿದೆ. ಮಾಸ್ಕ್ ಆಧಾರ್ ಆಪ್ಷನ್ ಮೂಲಕ ನೀವು ಡೌನ್​ಲೋಡ್ ಮಾಡಿಕೊಂಡರೆ ನಿಮ್ಮ ಆಧಾರ್ ನಂಬರ್ ಮರೆಮಾಚಬಹುದು. ನಿಮ್ಮ ಆಧಾರ್ ಅಂಕಿಗಳನ್ನು xxxx-xxxx ಮೂಲಕ ನಿಮ್ಮ ನಿಜವಾದ ಅಂಕಿಗಳನ್ನು ಮಾಸ್ಕಡ್ ಆಧಾರ್​ಗಳಲ್ಲಿ ಮರೆಮಾಚಬಹುದು. ಕೊನೆಯ ನಾಲ್ಕು ಅಂಕಿಗಳು ಮಾತ್ರ ಎಲ್ಲರಿಗೂ ಕಾಣಿಸುತ್ತದೆ.
  7. ಮೊಬೈಲ್ / ಇಮೇಲ್ ಅಪ್​ಡೇಟ್ ಮಾಡಿ: ಆಧಾರ್ ವ್ಯವಸ್ಥೆಯಲ್ಲಿ ನಿಮ್ಮ ಮೊಬೈಲ್ ನಂಬರ್ ಅಪ್​ಡೇಟ್ ಮಾಡುವುದನ್ನು ಮರೆಯದಿರಿ. ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಅಪ್​ಡೇಟ್ ಮಾಡುವಲ್ಲಿ ಸಮಸ್ಯೆಯಾಗಿದೆ ಎನಿಸಿದರೆ myaadhaar.uidai.gov.in/verify-email-mobile ಲಿಂಕ್ ಮೂಲಕ ನೀವು ನಿಮ್ಮ ಆಧಾರ್​ಗೆ ಜೋಡಣೆಯಾಗಿರುವ ಮೊಬೈಲ್, ಇಮೇಲ್ ಸರಿಪಡಿಸಿಕೊಳ್ಳಬಹುದು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:05 am, Mon, 6 June 22

ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ