ಇನ್ನೇನು ಮದುವೆ ಆಗಬೇಕಿತ್ತು! ವರನಿಗೆ ಶಾಕ್ ಕೊಟ್ಟರು ತೆಲಂಗಾಣ ಪೊಲೀಸರು! ಏನಿದು ಕೇಸ್
ಮದುವೆಗೆ ಬೇಕಾದ ಎಲ್ಲಾ ಏರ್ಪಾಡುಗಳು ಪೂರ್ಣಗೊಂಡಿದ್ದವು. ಆದರೆ ಅದೇ ಸಮಯದಲ್ಲಿ ವರ ತನಗೆ ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.
ಇನ್ನೇನು ಮದುವೆ ಆಗಬೇಕಿತ್ತು! ಆದರೆ ಮದುವೆ ಸಮಾರಂಭ ನಡೆಯುವಾಗ ಪೊಲೀಸರು (Telangana Police) ರಂಗ ಪ್ರವೇಶಿಸುತ್ತಾರೆ. ಮೂರು ಗಂಟು ಹಾಕಬೇಕಿದ್ದ ಅಳಿಯನನ್ನು (Groom) ಬಂಧಿಸಿ ಕರೆದುಕೊಂಡು ಹೋಗುತ್ತಾರೆ. ಇಂತಹ ದೃಶ್ಯಗಳನ್ನು ನಾವು ಸಿನಿಮಾಗಳಲ್ಲಿ ಆಗಾಗ ನೋಡುತ್ತಿರುತ್ತೇವೆ. ಆದರೆ ಇತ್ತೀಚೆಗಷ್ಟೇ ನಿಜ ಜೀವನದಲ್ಲೂ ಅಂಥದ್ದೇ ಒಂದು ಘಟನೆ ನಡೆದಿದೆ. ಕಾಮರೆಡ್ಡಿ (Kamareddy) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸದ್ಯದಲ್ಲೇ ಮದುವೆಯಾಗಬೇಕಿದ್ದ ವರನನ್ನು ಬಂಧಿಸಲಾಗುತ್ತದೆ.
ವಿವರಕ್ಕೆ ಹೋದರೆ… ಕಾಮರೆಡ್ಡಿ ಜಿಲ್ಲೆಯ ಮದ್ನೂರ್ ಮಂಡಲದ ಮೊಗ ಗ್ರಾಮದ ಮಾರುತಿ ಎಂಬ ಯುವಕ ವಿವಾಹಕ್ಕೆ ಅಣಿಯಾಗುತ್ತಿದ್ದರು. ಸೋಮವಾರ ಮದುವೆ ನಿಶ್ಚಯವಾಗಿತ್ತು. ಇದರೊಂದಿಗೆ ಮದುವೆಗೆ ಬೇಕಾದ ಎಲ್ಲಾ ಏರ್ಪಾಡುಗಳು ಪೂರ್ಣಗೊಂಡಿದ್ದವು. ಆದರೆ ಅದೇ ಸಮಯದಲ್ಲಿ ವರ ತನಗೆ ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಘಟನಾ ಸ್ಥಳಕ್ಕಾಗಮಿಸಿದ ಬಿಚ್ಚುಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ.
Also Read: Viral Video: ವರದಕ್ಷಿಣೆ ಕೇಳ್ತೀಯಾ… ಮಗಳು, ನೆಂಟರಿಷ್ಟರ ಎದುರೇ ಅಳಿಯನಿಗೆ ಬಿತ್ತು
ಮಾರುತಿ ತನ್ನನ್ನು ಪ್ರೀತಿಯ ಹೆಸರಲ್ಲಿ ವಂಚಿಸಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಹಿಂಸೆ ನೀಡಿದ್ದು, ಮದುವೆಯಾಗದೆ ಬೇರೊಬ್ಬ ಯುವತಿಯ ಕೊರಳಿಗೆ ತಾಳಿ ಕಟ್ಟಲು ಮುಂದಾಗಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗಾಗಿ ವರ ಮಾರುತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್.ಎಸ್. ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ. ಇದೇ ವೇಳೆ ಮಾರುತಿ ಈ ಹಿಂದೆಯೂ ಹಲವು ಹುಡುಗಿಯರ ಜತೆ ಪ್ರಣಯ ಸಂಬಂಧ ಹೊಂದಿದ್ದ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ