ದೆಹಲಿ ಡಿಸೆಂಬರ್ 25: ಮಾನವ ಕಳ್ಳಸಾಗಣೆ (human trafficking) ಆರೋಪದ ಮೇಲೆ ಪ್ಯಾರಿಸ್ (Paris) ವಶದಲ್ಲಿದ್ದ ಸುಮಾರು 300 ಭಾರತೀಯ ಪ್ರಯಾಣಿಕರೊಂದಿಗೆ ಬಂಧನಕ್ಕೊಳಗಾದ ವಿಮಾನವನ್ನು ಫ್ರೆಂಚ್ ಪೊಲೀಸರು ಹೊರಡಲು ಅನುಮತಿ ನೀಡಿದ್ದಾರೆ. ಭಾರತೀಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದುಬೈನಿಂದ ಹೊರಟ ಏರ್‌ಬಸ್ A340 ನಿಕರಾಗುವಾಗೆ(Nicaragua) ಹೋಗುತ್ತಿದ್ದಾಗ ಇಂಧನ ತುಂಬಿಸಲು ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದಾಗ ಬಂಧಿಸಲಾಯಿತು ಎಂದು ಸುದ್ದಿ ಸಂಸ್ಥೆ ಎಎಫ್ಬಿ ವರದಿ ಮಾಡಿದೆ. ಮಾನವ ಕಳ್ಳಸಾಗಣೆಯ ಸಂಭಾವ್ಯ ಸಂತ್ರಸ್ತರನ್ನು ಹೊತ್ತೊಯ್ಯುತ್ತಿದೆ ಎಂಬ ಅನಾಮಧೇಯ ಸುಳಿವು ನಂತರ ವಿಮಾನವನ್ನು ಕೆಳಗಿಳಿಸಲಾಗಿತ್ತು. ನಾಳೆ (ಮಂಗಳವಾರ) ಬೆಳಗ್ಗಿನ ಜಾವ ವಿಮಾನ ಮುಂಬೈ ತಲುಪುವ ನಿರೀಕ್ಷೆ ಇದೆ.
ಈ ಬಗ್ಗೆ ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಟ್ವೀಟ್ ಮಾಡಿದ್ದು “ಭಾರತೀಯ ಪ್ರಯಾಣಿಕರು ಮನೆಗೆ ಮರಳಲು ಮತ್ತು ಆತಿಥ್ಯವನ್ನು ನೀಡಲು ಅನುವು ಮಾಡಿಕೊಡುವ ಪರಿಸ್ಥಿತಿಯನ್ನು ತ್ವರಿತವಾಗಿ ಪರಿಹರಿಸಿದ್ದಕ್ಕಾಗಿ ಫ್ರೆಂಚ್ ಸರ್ಕಾರ ಮತ್ತು ವಾಟ್ರಿ ವಿಮಾನ ನಿಲ್ದಾಣಕ್ಕೆ ಧನ್ಯವಾದಗಳು. ಪ್ರಯಾಣಿಕರ ಯೋಗಕ್ಷೇಮ ಮತ್ತು ಸುಗಮ ಮತ್ತು ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ರಾಯಭಾರ ಕಚೇರಿ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದೆ.
Thank French Gov and Vatry Airport for quick resolution of the situation enabling Indian passengers to return home & hospitality.
Also for working closely with embassy team, present throughout at the site to ensure welfare and smooth & safe return.
Thank agencies in India, too.— India in France (@IndiaembFrance) December 25, 2023
ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ಪ್ರಯಾಣಿಕರನ್ನು ಎರಡು ದಿನಗಳ ಕಾಲ ಪ್ರಶ್ನಿಸಿ ವಿಮಾನವನ್ನು ಹೊರಡಲು ಅನುಮತಿ ನೀಡಿದರು. ಎಎಫ್‌ಪಿ ಪ್ರಕಾರ ಪ್ರಯಾಣಿಕರನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಸ್ಥಳೀಯ ಬಾರ್ ಅಸೋಸಿಯೇಷನ್‌ನ ಮುಖ್ಯಸ್ಥ ಫ್ರಾಂಕೋಯಿಸ್ ಪ್ರೊಕ್ಯೂರ್ ಹೇಳಿದ್ದಾರೆ. ಭಾರತೀಯರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಕೆಲಸಗಾರರಾಗಿರಬಹುದು, ಅವರು ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾಕ್ಕೆ ಹೋಗಲು ನಿಕರಾಗುವಾಕ್ಕೆ ಬಂದರು ಎಂದು ಅವರು ಹೇಳಿದ್ದಾರೆ. ತನಿಖೆಯ ಸಮಯದಲ್ಲಿ ವಿಮಾನದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಕೂರಿಸಿದ್ದು, ಅವರಿಗೆ ಹಾಸಿಗೆಗಳು, ಶೌಚಾಲಯ ಸೌಲಭ್ಯ ಒದಗಿಸಲಾಗಿತ್ತು. ಪ್ಯಾರಿಸ್ ಪ್ರಾಸಿಕ್ಯೂಟರ್‌ಗಳ ಪ್ರಕಾರ ಪ್ರಯಾಣಿಕರಲ್ಲಿ 11 ಅಪ್ರಾಪ್ತ ವಯಸ್ಕರು ಸೇರಿದ್ದಾರೆ.
ಇನ್ನು ಮೂವರು ಪ್ರಯಾಣಿಕರನ್ನು ಬಂಧಿಸುವುದು ಕಾನೂನುಬಾಹಿರ ಎಂದು ಫ್ರೆಂಚ್ ನ್ಯಾಯಾಲಯ ತೀರ್ಪು ನೀಡಿದ ನಂತರ ವಿಮಾನವನ್ನು ಹೊರಡಲು ಅನುಮತಿ ನೀಡಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Mon, 25 December 23