ಗುಜರಾತ್: ಬೋರ್​ವೆಲ್​ಗೆ ಬಿದ್ದ 2 ವರ್ಷದ ಮಗುವಿನ ರಕ್ಷಣೆ

|

Updated on: Feb 07, 2024 | 11:04 AM

ಮಂಗಳವಾರ ಗುಜರಾತ್‌ನ ಜಾಮ್‌ನಗರದಲ್ಲಿ ಮಗುವೊಂದು ಬೋರ್‌ವೆಲ್‌ಗೆ ಬಿದ್ದಿತ್ತು. 9 ಗಂಟೆಗಳ ಕಠಿಣ ಪರಿಶ್ರಮದ ನಂತರ ಹೊರತೆಗೆಯಲಾಗಿದೆ ಮಗು ಸುರಕ್ಷಿತವಾಗಿde. ಅಗ್ನಿಶಾಮಕ ದಳದ ಸಿಬ್ಬಂದಿ ಬಿಡುವು ನೀಡದೆ ನಿರಂತರವಾಗಿ 9 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಮಗುವನ್ನು ಸುಸ್ಥಿತಿಯಲ್ಲಿಟ್ಟು ಗುಂಡಿಯಿಂದ ಹೊರ ತೆಗೆಯಲಾಗಿದೆ. ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಜರಾತ್: ಬೋರ್​ವೆಲ್​ಗೆ ಬಿದ್ದ 2 ವರ್ಷದ ಮಗುವಿನ ರಕ್ಷಣೆ
ಬೋರ್​ವೆಲ್
Follow us on

ಬೋರ್​ವೆಲ್(Borewell) ​ಗೆ ಬಿದ್ದ 2 ವರ್ಷದ ಮಗುವನ್ನು ರಕ್ಷಣೆ ಮಾಡಿರುವ ಘಟನೆ ಗುಜರಾತ್​ನ ಜಾಮ್​ನಗರದಲ್ಲಿ ನಡೆದಿದೆ. ಗುಜರಾತ್​ನ ಜಾಮ್​ನಗರದ ಗೋವಾನಾ ಗ್ರಾಮದಲ್ಲಿ ಮಂಗಳವಾರ ಸಂಜೆ ಮಗುವೊಂದು ಬೋರ್​ವೆಲ್​ಗೆ ಬಿದ್ದಿತ್ತು, ಆ ಮಗುವನ್ನು ಇಂದು ಬೆಳಗಿನ ಜಾವ ರಕ್ಷಣೆ ಮಾಡಲಾಗಿದೆ. ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿತ್ತು, ತಕ್ಷಣ ಚಿಕಿತ್ಸೆಗಾಗಿ ಜಾಮ್​ನಗರದ ಆಸ್ಪತ್ರೆಗೆ ಕಳುಹಿಸಲಾಗಿದೆ.

ಎರಡು ವರ್ಷದ ಮಗುವಿನ ಹೆಸರು ರಾಜು ಮತ್ತು ಪೋಷಕರು ಮಧ್ಯಪ್ರದೇಶದ ನಿವಾಸಿಗಳು. ಜಾಮ್‌ನಗರ ನಗರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪಾಲಕರು 15 ದಿನಗಳ ಹಿಂದೆ ಜಾಮ್‌ನಗರಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದು, ರಾಜು ಕಿರಿಯ ಮಗ.

ಅಗ್ನಿಶಾಮಕ ಸೇವಾ ಇಲಾಖೆಯ ಎರಡು ತಂಡಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ಕರೆಯಲಾಗಿತ್ತು. ಜನವರಿಯಲ್ಲಿ ಗುಜರಾತ್​ನ ದ್ವಾರಕಾದಲ್ಲಿ ಬೋರ್​ವೆಲ್​ಗೆ ಬಿದ್ದ ಮೂರು ವರ್ಷದ ಬಾಲಕಿಯನ್ನು ರಕ್ಷಿಸಿದ ಒಂದು ಗಂಟೆಯೊಳಗೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಳು.

ಮತ್ತಷ್ಟು ಓದಿ:150 ಅಡಿ ಆಳದ ಬೋರ್​ವೆಲ್​ಗೆ ಬಿದ್ದ 4 ವರ್ಷದ ಮಗು; ಪೊಲೀಸರಿಂದ ರಕ್ಷಣಾ ಕಾರ್ಯಾಚಾರಣೆ

ಏಂಜೆಲ್ ಸಖ್ರಾ ಎಂದು ಗುರುತಿಸಲಾದ ಬಾಲಕಿಯನ್ನು ಎಂಟು ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಯಿತು, ಖಂಭಾಲಿಯಾ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಆಕೆ ಸಾವನ್ನಪ್ಪಿದ್ದಾಳೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ