‘ಹಿಂದು ಹುಡುಗಿಯರ ತಂಟೆಗೆ ಬರುವವರನ್ನು ಸುಮ್ಮನೆ ಬಿಡೋದಿಲ್ಲ’-ಗುಜರಾತ್​ ಸಿಎಂ ಎಚ್ಚರಿಕೆ

ಗುಜರಾತ್​ನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ತಿದ್ದುಪಡಿ ಕಾಯ್ದೆ 2021ನ್ನು ಏಪ್ರಿಲ್​ ತಿಂಗಳಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಹಾಗೇ, ಜೂನ್​ 15ರಂದು ಅಧಿಸೂಚನೆ ಹೊರಡಿಸಲಾಗಿದೆ.

‘ಹಿಂದು ಹುಡುಗಿಯರ ತಂಟೆಗೆ ಬರುವವರನ್ನು ಸುಮ್ಮನೆ ಬಿಡೋದಿಲ್ಲ’-ಗುಜರಾತ್​ ಸಿಎಂ ಎಚ್ಚರಿಕೆ
ವಿಜಯ್​ ರೂಪಾನಿ
Follow us
TV9 Web
| Updated By: Lakshmi Hegde

Updated on: Sep 11, 2021 | 10:44 AM

ಅಹಮದಾಬಾದ್​: ಹಿಂದು ಹುಡುಗಿಯರ ತಂಟೆಗೆ ಬರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾನಿ( Gujarat Chief Minister Vijay Rupani)ಎಚ್ಚರಿಕೆ ನೀಡಿದ್ದಾರೆ. ಅಹಮದಾಬಾದ್​​ನ ವೈಷ್ಣೋದೇವಿ ವೃತ್ತದ ಬಳಿ, ಮಾಲಧಾರಿ ಸಮುದಾಯ (ಜಾನುವಾರು ಸಾಕಾಣಿಕೆಯನ್ನು ವೃತ್ತಿಯಾಗಿಸಿಕೊಂಡ ಸಮುದಾಯ) ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದು ಹುಡುಗಿಯರನ್ನು ಮರಳು ಮಾಡಿ, ಅವರನ್ನು ಕರೆದುಕೊಂಡು ಪರಾರಿ ಆಗುವ ಯಾರನ್ನೂ ಬಿಡುವುದಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಗೋಹತ್ಯೆ (Cow Slaughter) ಮಾಡುವವರ ವಿರುದ್ಧವೂ ಕ್ರಮ ನಿಶ್ಚಿತ ಎಂದಿದ್ದಾರೆ.  

ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಠಿಣ ನಿಬಂಧನೆಗಳೊಂದಿಗೆ ಹಲವು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದೆ. ಗೋವು ವಧೆಯನ್ನು ತಡೆಯುವುದರಿಂದ ಹಿಡಿದು, ಸರಗಳ್ಳತನ ನಿಯಂತ್ರಣದವರೆಗೆ ಹಲವು ಕಾನೂನು ಅನುಷ್ಠಾನಕ್ಕೆ ಬಂದಿದೆ.  ಹಾಗೇ, ಲವ್​ ಜಿಹಾದ್​ ವಿರುದ್ಧ ಕಠಿಣ ನಿಯಮ ತಂದಿದೆ. ಅದರ ಅನ್ವಯ, ಹಿಂದು ಹುಡುಗಿಯರಿಗೆ ಬಲೆ ಬೀಸಿ, ಅವರನ್ನು ಕರೆದುಕೊಂಡು ಹೋಗುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.

ಗುಜರಾತ್​ನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ತಿದ್ದುಪಡಿ ಕಾಯ್ದೆ 2021ನ್ನು ಏಪ್ರಿಲ್​ ತಿಂಗಳಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಹಾಗೇ, ಜೂನ್​ 15ರಂದು ಅಧಿಸೂಚನೆ ಹೊರಡಿಸಲಾಗಿದೆ. ಅದರ ಅನ್ವಯ ಮದುವೆ ಅಥವಾ ಇನ್ಯಾವುದೇ ವಿಧಾನದ ಮೂಲಕ ಬಲವಂತದ ಮತಾಂತರ ಕ್ರಿಯೆ ನಡೆಸಿದರೆ, ಕಠಿಣ ಶಿಕ್ಷೆಯಿದೆ.  ಆದರೆ ಈ ಕಾನೂನಿನಲ್ಲಿರುವ ಕೆಲವು ವಿವಾದಾತ್ಮಕ ಅಂಶಗಳಿಗೆ ಕಳೆದ ತಿಂಗಳು ಗುಜರಾತ್ ಹೈಕೋರ್ಟ್ ತಡೆ ನೀಡಿದೆ.

ಇದನ್ನೂ ಓದಿ: ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅಭಿಮಾನಿಯಿಂದ ರೂಲ್ಸ್ ಬ್ರೇಕ್!

Sai Dharam Tej: ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಸಾಯಿ ಧರಮ್​ ತೇಜ್​; ಆದರೆ ಆಪ್ತರು ಹೇಳೋದೇ ಬೇರೆ

(Gujarat Cm Vijay Rupani Warning Against trapping Hindu Girls)

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ