Breaking ಗುಜರಾತ್: ಹಲವದ್ ಜಿಐಡಿಸಿ ಸಾಗರ್ ಉಪ್ಪಿನ ಕಾರ್ಖಾನೆಯ ಗೋಡೆ ಕುಸಿತ; 13 ಕಾರ್ಮಿಕರು ಸಾವು
ಹಲವದ್ನ ಜಿಐಡಿಸಿಯಲ್ಲಿರುವ ಸಾಗರ್ ಸಾಲ್ಟ್ ಕಾರ್ಖಾನೆಯ ಗೋಡೆ ಕುಸಿದು ಬಿದ್ದಿದೆ. ದಿಢೀರನೆ ಗೋಡೆ ಕುಸಿದು ಬಿದ್ದಿದ್ದು, 13 ಮಂದಿಯ ಮೃತದೇಹವನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ.
ಗುಜರಾತಿನ ಮೋರ್ಬಿ ಜಿಲ್ಲೆಯ ಹಲವದ್ ಜಿಐಡಿಸಿ (Halvad GIDC) ಸಾಗರ್ ಉಪ್ಪಿನ ಕಾರ್ಖಾನೆಯ (Sagar salt factory) ಗೋಡೆ ಕುಸಿದು (Wall collapse )13 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ವರದಿ ಆಗಿದೆ. 30 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಲಭಿಸಿರುವ ಮಾಹಿತಿ ಪ್ರಕಾರ ಹಲವದ್ನ ಜಿಐಡಿಸಿಯಲ್ಲಿರುವ ಸಾಗರ್ ಸಾಲ್ಟ್ ಕಾರ್ಖಾನೆಯ ಗೋಡೆ ಕುಸಿದು ಬಿದ್ದಿದೆ. ದಿಢೀರನೆ ಗೋಡೆ ಕುಸಿದು ಬಿದ್ದಿದ್ದು, 13 ಮಂದಿಯ ಮೃತದೇಹವನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಇಂದು (ಬುಧವಾರ) ಮಧ್ಯಾಹ್ನ 12ಗಂಟೆಗೆ ಈ ದುರಂತ ಸಂಭವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ದಿಢೀರ್ ಆಗಿ ಗೋಡೆ ಕುಸಿಯಲು ಕಾರಣ ಏನೆಂಬುದು ಈವರೆಗೆ ಗೊತ್ತಾಗಿಲ್ಲ. ಸ್ಥಳೀಯ ಶಾಸಕ ಪರ್ಸೋತ್ತಮ್ ಸಬರಿಯಾ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.ಜೆಸಿಬಿ ಸಹಾಯದಿಂದ ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತಗೆಯಲಾಗುತ್ತಿದೆ .
9 workers dead after wall collapses in salt factory of Halvad GIDC, #Morbi #TV9News pic.twitter.com/PQ7n0QToP9
ಇದನ್ನೂ ಓದಿ— Tv9 Gujarati (@tv9gujarati) May 18, 2022
ಕಾರ್ಮಿಕರು ಮಧ್ಯಾಹ್ನದ ಊಟ ಮಾಡಲು ಹೋಗಿದ್ದರು. ಹಾಗಾಗಿ ಕೆಲವು ಕಾರ್ಮಿಕರು ಮಾತ್ರ ಅಲ್ಲಿದ್ದರು. ಇಲ್ಲವಾದರೆ ಹಲವು ಕಾರ್ಮಿಕರು ಈ ಘಟನೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಕೆಲವು ಮೂಲಗಳ ಪ್ರಕಾರ ಗೋಡೆ ಬಳಿ ಉಪ್ಪಿನ ಹಾಸಿಗೆ ಹಾಕಲಾಗಿದೆ. ಇದರಿಂದಾಗಿ ಗೋಡೆಯು ಒತ್ತಡದಿಂದ ಕುಸಿದಿದ್ದು, ಗೋಡೆ ಪಕ್ಕದಲ್ಲಿ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಪ್ರಾಣ ಕಳೆದುಕೊಂಡ ಕಾರ್ಮಿಕರು ರಾಧನ್‌ಪುರ ಬಳಿಯ ಕಾರ್ಮಿಕರು ಎಂದುಹೇಳಲಾಗುತ್ತಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:34 pm, Wed, 18 May 22