ಗುಜರಾತ್ನ ಮೊರ್ಬಿ ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ಮೊರ್ಬಿ ಅಪಘಾತದ ಪ್ರಾಥಮಿಕ ತನಿಖೆಯಲ್ಲಿ ಸೇತುವೆಯ ಅರ್ಧದಷ್ಟು ಕೇಬಲ್ ತಂತಿಗಳು ತುಕ್ಕು ಹಿಡಿದಿದ್ದವು, ದುರಸ್ತಿ ಸಮಯದಲ್ಲಿ ಹಳೆಯ ಮತ್ತು ಹೊಸ ತಂತಿಗಳನ್ನು ಒಟ್ಟಿಗೆ ಬೆಸುಗೆ ಹಾಕಿರುವುದು ಇತ್ಯಾದಿ ವಿಚಾರಗಳು ಬೆಳಕಿಗೆ ಬಂದಿವೆ. ಇದರಿಂದ ಸೇತುವೆಯ ದುರ್ಬಲ ತಂತಿಗಳು ತುಂಡಾಗಿವೆ. ಕಳೆದ ವರ್ಷ ಅಕ್ಟೋಬರ್ 30 ರಂದು ಮೊರ್ಬಿಯ ತೂಗು ಸೇತುವೆ ಕುಸಿದು 135 ಜನರು ಮೃತಪಟ್ಟಿದ್ದರು.
ಈ SIT ವರದಿಯನ್ನು ಇತ್ತೀಚೆಗೆ ರಾಜ್ಯ ನಗರಾಭಿವೃದ್ಧಿ ಇಲಾಖೆಯು ಮೊರ್ಬಿ ಪುರಸಭೆಯೊಂದಿಗೆ ಹಂಚಿಕೊಂಡಿದೆ. ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ (ಒರೆವಾ ಗ್ರೂಪ್) ನದಿಯ ಮೇಲೆ ಬ್ರಿಟಿಷ್ ಕಾಲದ ತೂಗು ಸೇತುವೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿತ್ತು. ಸೇತುವೆಯ ದುರಸ್ತಿ, ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಹಲವು ಲೋಪದೋಷಗಳನ್ನು ಎಸ್‌ಐಟಿ ಪತ್ತೆ ಮಾಡಿದೆ.
ಮತ್ತಷ್ಟು ಓದಿ: Morbi bridge collapse: ಕಳೆದ ವಾರವಷ್ಟೇ ನವೀಕರಿಸಲಾಗಿದ್ದ ಮೊರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು?
1887ರಲ್ಲಿ ಅಂದಿನ ಆಡಳಿತಗಾರರು ನಿರ್ಮಿಸಿದ ನದಿಯ ಸೇತುವೆಯ ಎರಡು ಮುಖ್ಯ ಕೇಬಲ್‌ಗಳಲ್ಲಿ ಒಂದರಲ್ಲಿ ತುಕ್ಕು ಸಮಸ್ಯೆ ಇತ್ತು ಮತ್ತು ಅಕ್ಟೋಬರ್ 30 ರಂದು ಕೇಬಲ್ ತುಂಟಾಗುವ ಮೊದಲು ಅದರ ಅರ್ಧದಷ್ಟು ತಂತಿಗಳು ಮುರಿದುಹೋಗಿವೆ ಎಂದು ಎಸ್‌ಐಟಿ ಪತ್ತೆ ಮಾಡಿದೆ.
ಐಎಎಸ್ ಅಧಿಕಾರಿ ರಾಜ್‌ಕುಮಾರ್ ಬೇನಿವಾಲ್, ಐಪಿಎಸ್ ಸುಭಾಷ್ ತ್ರಿವೇದಿ, ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ ಕಾರ್ಯದರ್ಶಿ, ಮುಖ್ಯ ಎಂಜಿನಿಯರ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರು ಐವರು ಎಸ್‌ಐಟಿಯ ಸದಸ್ಯರಾಗಿದ್ದರು.
ಎಸ್‌ಐಟಿ ಪ್ರಕಾರ, ನದಿಯ ಮೇಲ್ಭಾಗದ ಮುಖ್ಯ ಕೇಬಲ್ ಮುರಿದಿರುವುದು ಅಪಘಾತಕ್ಕೆ ಕಾರಣವಾಯಿತು. ತನಿಖೆಯ ವೇಳೆ ಕೇಬಲ್‌ನ 49 ವೈರ್‌ಗಳಲ್ಲಿ 22 ತುಕ್ಕು ಹಿಡಿದಿರುವುದು ಕಂಡುಬಂದಿದ್ದು, ಘಟನೆಗೂ ಮುನ್ನವೇ ಆ ತಂತಿಗಳು ತುಂಡಾಗಿರಬಹುದು ಎಂದು ಎಸ್‌ಐಟಿ ತನ್ನ ವರದಿಯಲ್ಲಿ ತಿಳಿಸಿದೆ. ಅಪಘಾತದ ವೇಳೆ ಉಳಿದ ತಂತಿಗಳು ತುಂಡಾಗಿವೆ.
SIT ಪ್ರಕಾರ, ಸೇತುವೆಯ ಮೇಲೆ ಸುಮಾರು 300 ಜನರಿದ್ದರು, ಇದು ಸೇತುವೆಯ ಭಾರ ಹೊರುವ ಸಾಮರ್ಥ್ಯಕ್ಕಿಂತ ಹೆಚ್ಚಾದ ಕಾರಣ ಸೇತುವೆ ಕುಸಿದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ