Stambheshwar Temple: ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತೆ ಈ ದೇವಾಲಯ, ವಿಶೇಷತೆ ಏನು?

ಸ್ತಂಭೇಶ್ವರ ಮಹಾದೇವ ದೇವಸ್ಥಾನ, ಇದು ಗುಜರಾತ್​ನಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಇದರ ವಿಶೇಷತೆ ಏನೆಂದರೆ ಈ ದೇವಸ್ಥಾನವು ದಿನದಲ್ಲಿ ಎರಡು ಬಾರಿ ಕಣ್ಮರೆಯಾಗುತ್ತದೆ. ಭಕ್ತರು ದರ್ಶನಕ್ಕಾಗಿ ಬಂದರೆ ಇಡೀ ದಿನವು ಕೆಲವೊಮ್ಮೆ ಕಾಯಬೇಕಾಗುತ್ತದೆ. ಈ ದೇವಾಲಯವನ್ನು ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾದಾಗಲೆಲ್ಲಾ ಈ ದೇವಾಲಯವು ಗೋಚರಿಸುವುದಿಲ್ಲ.

Stambheshwar Temple: ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತೆ ಈ ದೇವಾಲಯ, ವಿಶೇಷತೆ ಏನು?
ದೇವಸ್ಥಾನ

Updated on: Apr 16, 2024 | 8:14 AM

ದೇಶದಲ್ಲಿ ಹಿಂದೂ ದೇವರು ಮತ್ತು ದೇವತೆಗಳಿಗೆ ಮುಡಿಪಾದ ಅನೇಕ ಪ್ರಾಚೀನ ದೇವಾಲಯಗಳಿವೆ, ಅವುಗಳು ತಮ್ಮದೇ ಆದ ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು ಹೊಂದಿವೆ. ದಿನಕ್ಕೆ ಎರಡು ಬಾರಿ ಅದೃಶ್ಯವಾಗುವ ಸ್ತಂಭೇಶ್ವರ ಮಹಾದೇವ ದೇವಾಲಯ(Stambheshwar Mahadev Temple)ದ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ. ಈ ದೇವಾಲಯವು ಗುಜರಾತ್​ನ ಜಂಬೂಸರ್​ನಲ್ಲಿರುವ ಕವಿ ಕಬೋಯಿ ಎಂಬ ಹೆಸರಿನ ಸಣ್ಣ ಹಳ್ಳಿಯಲ್ಲಿದೆ.

ಈ ದೇವಾಲಯವು ಅರಬ್ಬಿ ಸಮುದ್ರ ಹಾಗೂ ಕ್ಯಾಂಬೆ ಕೊಲ್ಲಿಯ ನಡುವೆ ಇದೆ. ತೀರದಿಂದ ಕೆಲವೇ ಮೀಟರ್ ದೂರದಲ್ಲಿದೆ. ದೇವಾಲಯದ ವಾಸ್ತುಶೈಲಿ ಅಸಮಾನ್ಯದಾದುದೇನೂ ಅಲ್ಲ ಆದರೆ ಅದರ ವಿಶಿಷ್ಟ ಸ್ಥಳದಿಂದಾಗಿ ಇದು ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದಾಗಿದೆ.

ಯಾವುದೇ ಭಕ್ತನು ನಿಶ್ಕಲ್ಮಶ ಮನಸ್ಸಿನಿಂದ ಏನೇ ಕೇಳಿಕೊಂಡರೂ ಅದು ಖಂಡಿತವಾಗಿಯೂ ಈಡೇರುತ್ತೆ ಎಂದು ನಂಬಲಾಗಿದೆ. ದಲ್ಲದೇ ಅವರ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತೆ.

ಮತ್ತಷ್ಟು ಓದಿ: Ram Navami 2024: ರಾಮ ಮನುಷ್ಯ ರೂಪದಲ್ಲಿ ಭೂಮಿಗೆ ಬಂದ ದಿನ ರಾಮನವಮಿ, ಇದರ ಇತಿಹಾಸ, ಮಹತ್ವ ಇಲ್ಲಿದೆ

ದಿನದಲ್ಲಿ ಎರಡು ಬಾರಿ ಕಣ್ಮರೆಯಾಗುವ ದೇವಾಲಯ

ಶಿವನಿಗೆ ಅರ್ಪಿತವಾದ ಶ್ರೀ ಸ್ತಂಭೇಶ್ವರ ಮಹಾದೇವ ದೇವಾಲಯವು ಗುಜರಾತ್‌ನ ಭರೂಚ್‌ನಲ್ಲಿದೆ. ಈ ದೇವಾಲಯವು ಸುಮಾರು 150 ವರ್ಷಗಳಷ್ಟು ಹಳೆಯದು. ಈ ದೇವಾಲಯವು ದಿನಕ್ಕೆ ಎರಡು ಬಾರಿ ಮಾತ್ರ ಗೋಚರಿಸುತ್ತದೆ ಎಂದು ಹೇಳಲಾಗುತ್ತದೆ, ಉಳಿದ ಸಮಯವು ನೀರಿನಿಂದ ಆವೃತವಾಗಿರುತ್ತದೆ. ಈ ದೇವಾಲಯದಲ್ಲಿ ಶಿವನ ವಿಗ್ರಹದ ಜೊತೆಗೆ ಬೃಹತ್ ಶಿವಲಿಂಗವನ್ನು ಸಹ ಸ್ಥಾಪಿಸಲಾಗಿದೆ.

ಈ ದೇವಾಲಯದಲ್ಲಿ ಇರುವ ಶಿವನ ವಿಗ್ರಹವನ್ನು ನೀವು ನೋಡಲು ಬಯಸಿದರೆ, ನೀವು ಕನಿಷ್ಠ ಒಂದು ದಿನ ಇಲ್ಲೇ ಇರಬೇಕಾಗುತ್ತದೆ. ಆಗ ಮಾತ್ರ ನೀವು ಈ ಅದ್ಭುತ ದೇವಾಲಯಕ್ಕೆ ಭೇಟಿ ನೀಡಬಹುದು.

ಈ ದೇವಾಲಯವನ್ನು ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾದಾಗಲೆಲ್ಲಾ ಈ ದೇವಾಲಯವು ಗೋಚರಿಸುವುದಿಲ್ಲ. ಅದೇ ಸಮಯದಲ್ಲಿ, ನೀರಿನ ಮಟ್ಟ ಕಡಿಮೆಯಾದಾಗ, ದೇವಾಲಯವು ಗೋಚರಿಸುತ್ತದೆ.

ಸ್ತಂಭೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ನಂಬಿಕೆ
ಶಿವನು ಇಷ್ಟಪಟ್ಟ ಭಕ್ತ ಮಾತ್ರ ಇಲ್ಲಿಗೆ ಬರಬಹುದು. ಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಬಯಸುವವರು ಇಲ್ಲಿಗೆ ಬರಬೇಕು ಎಂದು ಹೇಳಲಾಗುತ್ತದೆ. ಇದಲ್ಲದೆ, ಇಲ್ಲಿಗೆ ಬಂದು ಶಿವನನ್ನು ನಿಜವಾದ ಹೃದಯದಿಂದ ಪೂಜಿಸಿದ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಎಂಬ ನಂಬಿಕೆಯೂ ಇದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:08 am, Tue, 16 April 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us