ಗುರ್ಗಾಂವ್ 8 ಸ್ಥಳಗಳಲ್ಲಿ ನಮಾಜ್‌ಗೆ ಅನುಮತಿ ರದ್ದುಗೊಳಿಸಿದ ಜಿಲ್ಲಾಡಳಿತ, ಸ್ಥಳಗಳ ಬಗ್ಗೆ ನಿರ್ಧರಿಸಲು ಸಮಿತಿ ರಚನೆ
ನಗರದಲ್ಲಿ ಶುಕ್ರವಾರ ನಮಾಜ್ ಪ್ರಾರ್ಥನೆ ಸಲ್ಲಿಸುವ ಸ್ಥಳಗಳ ಪಟ್ಟಿಯನ್ನು ನಿರ್ಧರಿಸಲು ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಸಹಾಯಕ ಕಮಿಷನರ್ ಮಟ್ಟದ ಪೊಲೀಸ್ ಅಧಿಕಾರಿ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಮತ್ತು ಸಾಮಾಜಿಕ ಸಂಘಟನೆಗಳ ಸದಸ್ಯರ ಸಮಿತಿಯನ್ನು ಜಿಲ್ಲಾಡಳಿತ ಮಂಗಳವಾರ ರಚಿಸಿದೆ.
ಗುರ್ಗಾಂವ್: ಗುರ್ಗಾಂವ್ ಜಿಲ್ಲಾಡಳಿತವು ಮಂಗಳವಾರ ಎಂಟು ಸ್ಥಳಗಳಲ್ಲಿ ನಮಾಜ್ ಅನುಮತಿಯನ್ನು ರದ್ದುಗೊಳಿಸಿದೆ. ಈ ಹಿಂದೆ 37 ಗೊತ್ತುಪಡಿಸಿದ ಸೈಟ್‌ಗಳ ಪಟ್ಟಿಯಲ್ಲಿ ಈ ಸೈಟ್ ಗಳಿದ್ದು ಅಲ್ಲಿ ಶುಕ್ರವಾರದ ಪ್ರಾರ್ಥನೆಗೆ ಪೊಲೀಸ್ ರಕ್ಷಣೆ ಒದಗಿಸಲಾಗುತ್ತಿತ್ತು. ಸ್ಥಳೀಯ ನಿವಾಸಿಗಳು ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಆಕ್ಷೇಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಾಲಿ ಬಸ್ತಿ ಸೆಕ್ಟರ್ 49, ವಿ ಬ್ಲಾಕ್ ಡಿಎಲ್‌ಎಫ್ ಹಂತ 3, ಸೂರತ್ ನಗರ ಹಂತ 1, ಖೇರಿ ಮಜ್ರಾ ಗ್ರಾಮದ ಹೊರಗೆ, ದ್ವಾರಕಾ ಎಕ್ಸ್‌ಪ್ರೆಸ್‌ವೇಯಲ್ಲಿ ದೌಲತಾಬಾದ್ ಗ್ರಾಮದ ಬಳಿ, ರಾಮಗಢ ಗ್ರಾಮದ ಬಳಿ ಸೆಕ್ಟರ್ 68, ಡಿಎಲ್‌ಎಫ್ ಸ್ಕ್ವೇರ್ ಟವರ್ ಬಳಿ ರಾಂಪುರದಿಂದ ಗ್ರಾಮದಿಂದ ನಖ್ರೋಲಾ ರಸ್ತೆ- ಇಲ್ಲಿ ನಮಾಜ್ ಗೆ ಅನುಮತಿ ರದ್ದು ಮಾಡಲಾಗಿದೆ.
ನಗರದಲ್ಲಿ ಶುಕ್ರವಾರ ನಮಾಜ್ ಪ್ರಾರ್ಥನೆ ಸಲ್ಲಿಸುವ ಸ್ಥಳಗಳ ಪಟ್ಟಿಯನ್ನು ನಿರ್ಧರಿಸಲು ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಸಹಾಯಕ ಕಮಿಷನರ್ ಮಟ್ಟದ ಪೊಲೀಸ್ ಅಧಿಕಾರಿ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಮತ್ತು ಸಾಮಾಜಿಕ ಸಂಘಟನೆಗಳ ಸದಸ್ಯರ ಸಮಿತಿಯನ್ನು ಜಿಲ್ಲಾಡಳಿತ ಮಂಗಳವಾರ ರಚಿಸಿದೆ.
“ಸಮಿತಿಯು ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿದ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸ್ಥಳೀಯ ನಿವಾಸಿಗಳಿಂದ ಒಪ್ಪಿಗೆ ಪಡೆದ ನಂತರವೇ ನಮಾಜ್ ಗಾಗಿ ಸ್ಥಳವನ್ನು ಗೊತ್ತುಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವಾಗ, ನಿರ್ದಿಷ್ಟ ಸ್ಥಳದಲ್ಲಿ ನಮಾಜ್ ಮಾಡಲು ಪ್ರದೇಶದ ನಿವಾಸಿಗಳಿಗೆ ಯಾವುದೇ ವಿರೋಧವಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ನಮಾಜ್ ಅನ್ನು ಯಾವುದೇ ಮಸೀದಿ, ಈದ್ಗಾ ಅಥವಾ ಖಾಸಗಿ ಸ್ಥಳದಲ್ಲಿ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸೆಕ್ಟರ್ 12 ಎ ಮತ್ತು ಸೆಕ್ಟರ್ 47 ವಿಜಿಲೆನ್ಸ್ ಬೋರ್ಡ್ ಆಫೀಸ್ ಬಳಿ ಎರಡು ತಿಂಗಳುಗಳಿಂದ ನಿವಾಸಿಗಳು ಮತ್ತು ಬಲಪಂಥೀಯ ಗುಂಪುಗಳ ಸದಸ್ಯರು ನಮಾಜ್ ಗೆ ಅಡ್ಡಿ ಪಡಿಸುತ್ತಿದ್ದಾರೆ
ಮಂಗಳವಾರ, ಸಂಯುಕ್ತ ಹಿಂದೂ ಸಂಘರ್ಷ ಸಮಿತಿಯ ಅಡಿಯಲ್ಲಿ ಬಲಪಂಥೀಯ ಸಂಘಟನೆಗಳ ಒಕ್ಕೂಟದ ಸದಸ್ಯರು ಗುರ್ಗಾಂವ್ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ನಗರದ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಶುಕ್ರವಾರ ನಮಾಜ್ ಅನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ನಮಾಜ್‌ಗೆ ಅಡ್ಡಿಪಡಿಸಿ, ಪ್ರತಿಭಟನೆ ನಡೆಸಿದ 30 ಜನರನ್ನು ವಶಕ್ಕೆ ಪಡೆದ ಪೊಲೀಸರು