ವಾಟ್ಸಾಪ್​​ನಲ್ಲಿ ಮದುವೆ ಇನ್ವಿಟೇಶನ್ ಬಂದ್ರೆ ಓಪನ್ ಮಾಡ್ಬೇಡಿ, ಖಾತೆಯಲ್ಲಿರೋ ಅಷ್ಟೂ ಹಣ ಹೋಗ್ಬಹುದು ಎಚ್ಚರ

ತಂತ್ರಜ್ಞಾನ ಬದಲಾದಂತೆ ಸೈಬರ್ ವಂಚಕರು(Cyber Fruads) ಕೂಡ ಹಣ ವಸೂಲಿಗೆ ಹಲವು ಹೊಸ ಹೊಸ ಟ್ರಿಕ್​ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಜನರಿಗೆ ಅನುಮಾನವೇ ಬರದಂತೆ ಹಣವನ್ನು ಲೂಟಿ ಮಾಡುತ್ತಿದ್ದಾರೆ. ವಾಟ್ಸಾಪ್​ನಲ್ಲಿ ಬಂದ ಮದುವೆ ಇನ್ವಿಟೇಷನ್ ಓಪನ್ ಮಾಡಿ ವ್ಯಕ್ತಿಯೊಬ್ಬ 97 ಸಾವಿರ ರೂ. ಕಳೆದುಕೊಂಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ನಿಮಗೆ ಗೊತ್ತು ಪರಿಚಯ ಇರುವವರಿಂದ ಅಲ್ಲ, ಅಪರಿಚಿತ ಸಂಖ್ಯೆಯಿಂದ ಮದುವೆ ಆಮಂತ್ರಣ ಬಂದರೆ ಖಂಡಿತವಾಗಿಯೂ ಅದನ್ನು ಓಪನ್ ಮಾಡಲೇಬೇಡಿ.

ವಾಟ್ಸಾಪ್​​ನಲ್ಲಿ ಮದುವೆ ಇನ್ವಿಟೇಶನ್ ಬಂದ್ರೆ ಓಪನ್ ಮಾಡ್ಬೇಡಿ, ಖಾತೆಯಲ್ಲಿರೋ ಅಷ್ಟೂ ಹಣ ಹೋಗ್ಬಹುದು ಎಚ್ಚರ
ಸೈಬರ್ ಅಪರಾಧಿಗಳು

Updated on: Oct 07, 2025 | 10:28 AM

ಗುರುಗ್ರಾಮ, ಅಕ್ಟೋಬರ್ 07: ತಂತ್ರಜ್ಞಾನ ಬದಲಾದಂತೆ ಸೈಬರ್  ಅಪರಾಧಿಗಳು(Cyber Criminals) ಕೂಡ ಹಣ ವಸೂಲಿಗೆ ಹಲವು ಹೊಸ ಹೊಸ ಟ್ರಿಕ್​ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಜನರಿಗೆ ಅನುಮಾನವೇ ಬರದಂತೆ ಹಣವನ್ನು ಲೂಟಿ ಮಾಡುತ್ತಿದ್ದಾರೆ. ವಾಟ್ಸಾಪ್​ನಲ್ಲಿ ಬಂದ ಮದುವೆ ಇನ್ವಿಟೇಷನ್ ಓಪನ್ ಮಾಡಿ ವ್ಯಕ್ತಿಯೊಬ್ಬ 97 ಸಾವಿರ ರೂ. ಕಳೆದುಕೊಂಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ನಿಮಗೆ ಗೊತ್ತು ಪರಿಚಯ ಇರುವವರಿಂದ ಅಲ್ಲ, ಅಪರಿಚಿತ ಸಂಖ್ಯೆಯಿಂದ ಮದುವೆ ಆಮಂತ್ರಣ ಬಂದರೆ ಖಂಡಿತವಾಗಿಯೂ ಅದನ್ನು ಓಪನ್ ಮಾಡಲೇಬೇಡಿ.

ಅಂತಹ ಲಿಂಕ್​ಗಳನ್ನು ಓಪನ್ ಮಾಡುವ ಮೂಲಕ ನಿಮಗೆ ಅರಿವಿಲ್ಲದೆ ಸೈಬರ್ ವಂಚಕರು ನಿಮ್ಮ ಖಾತೆಯನ್ನು ಹಣ ದೋಚುವುದು ಸುಲಭವಾಗುತ್ತದೆ. ಸೈಬರ್ ಕ್ರೈಂ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿರುವ ಪ್ರಕರಣವು ಹೊಸ ಬೆದರಿಕೆಯನ್ನು ಒಡ್ಡುತ್ತಿದೆ. ವಿಷ್ಣು ಗಾರ್ಡನ್ ನಿವಾಸಿ ವಿನೋದ್ ಕುಮಾರ್ ಅವರ ಮೊಬೈಲ್​ಗೆ ವಾಟ್ಸಾಪ್​ನಲ್ಲಿ ಸೆಪ್ಟೆಂಬರ್ 4ರಂದು ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್​ನಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಬಂದಿತ್ತು.

ಅದು ಯಾರ ಆಹ್ವಾನ ಎಂದು ನೋಡಲು ಕುತೂಹಲದಿಂದ ಲಿಂಕ್ ಕ್ಲಿಕ್ ಮಾಡಿದ್ದಾರೆ, ಆಗ ಅವರಿಗೆ ತಿಳಿಯದೇ ಅವರ ಫೋನ್ ಹ್ಯಾಕ್ ಆಗಿತ್ತು. ಏನಾಯಿತು ಎಂದು ಅರಿತುಕೊಳ್ಳುವ ಹೊತ್ತಿಗೆ , ಮೂರು ಅನಧಿಕೃತ ವಹಿವಾಟುಗಳು ನಡೆದಿದ್ದವು ಮತ್ತು ಸೈಬರ್ ಅಪರಾಧಿಗಳು ಅವರ ಬ್ಯಾಂಕ್ ಖಾತೆಯಿಂದ 97 ಸಾವಿರ ರೂ. ತೆಗೆದುಕೊಂಡಿದ್ದರು.

ಮತ್ತಷ್ಟು ಓದಿ: ಬೆಂಗಳೂರು: ಮಹಿಳಾ ವಿಜ್ಞಾನಿಗೆ ಡಿಜಿಟಲ್ ಅರೆಸ್ಟ್; ಸೈಬರ್ ವಂಚಕರು ದೋಚಿದ್ದೆಷ್ಟು ಗೊತ್ತಾ?

ಈ ಘಟನೆಯ ಬಳಿಕ ಕುಮಾರ್ ಗುರುಗ್ರಾಮ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೈಬರ್ ಅಪರಾಧಿಗಳು ಜನರನ್ನು ವಂಚಿಸಲು ನಿರಂತರವಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ ಮತ್ತು ಸಾರ್ವಜನಿಕರು ಜಾಗರೂಕರಾಗಿರಬೇಕು.

ಇದೇ ರೀತಿಯ ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು, ಅಪರಿಚಿತ ಮೂಲಗಳಿಂದ ಬರುವ ಲಿಂಕ್‌ಗಳನ್ನು, ಅವು ಎಷ್ಟೇ ಮನವರಿಕೆಯಾಗುವಂತೆ ಕಂಡುಬಂದರೂ, ಅವುಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us