ಕಾರಿನ ಮೇಲೆ 3,400 ಲಿಪ್‌ಸ್ಟಿಕ್ ಕಿಸ್ಸಿಂಗ್ ಮಾರ್ಕ್ಸ್: ರೀಲ್ಸ್‌ಗಾಗಿ ಹುಚ್ಚಾಟ ಮೆರೆದ ಯುವಕನಿಗೆ 5,500 ರೂ. ದಂಡ

ಗ್ವಾಲಿಯರ್‌ನಲ್ಲಿ ಯುವಕನೊಬ್ಬ ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ತನ್ನ ಕಾರಿನ ಮೇಲೆ 3,400 ಲಿಪ್‌ಸ್ಟಿಕ್ ಕಿಸ್ ಮಾರ್ಕ್ಸ್ ಹಾಕಿಸಿ ವಿಡಿಯೋ ಮಾಡಿದ್ದ. ಇದು ವೈರಲ್ ಆದ ನಂತರ ಗ್ವಾಲಿಯರ್ ಟ್ರಾಫಿಕ್ ಪೊಲೀಸರು ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗಾಗಿ ಕಾರು ಜಪ್ತಿ ಮಾಡಿ 5,500 ರೂ. ದಂಡ ವಿಧಿಸಿದ್ದಾರೆ. ಯುವಕನೇ ಕಾರನ್ನು ಸ್ವಚ್ಛಗೊಳಿಸಬೇಕಾಯಿತು. ರೀಲ್ಸ್‌ಗಾಗಿ ಅಪಾಯಕಾರಿ ಸ್ಟಂಟ್‌ಗಳಿಗೆ ಪೊಲೀಸರ ಎಚ್ಚರಿಕೆ.

ಕಾರಿನ ಮೇಲೆ 3,400 ಲಿಪ್‌ಸ್ಟಿಕ್ ಕಿಸ್ಸಿಂಗ್ ಮಾರ್ಕ್ಸ್: ರೀಲ್ಸ್‌ಗಾಗಿ ಹುಚ್ಚಾಟ ಮೆರೆದ ಯುವಕನಿಗೆ 5,500 ರೂ. ದಂಡ
ಕಾರು

Updated on: Aug 25, 2026 | 1:21 PM

ಗ್ವಾಲಿಯರ್, ಆಗಸ್ಟ್​ 25: ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಯುವಕನೊಬ್ಬ ತನ್ನ ಗೆಳತಿಯಿಂದ ಕಾರಿ(Car)ನ ತುಂಬೆಲ್ಲಾ 3,400 ಬಾರಿ ಲಿಪ್‌ಸ್ಟಿಕ್ ಕಿಸ್ ಮಾರ್ಕ್​ ಹಾಕಿಸಿ ವಿಡಿಯೋ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಈ ವಿಲಕ್ಷಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬರೋಬ್ಬರಿ 55 ಲಕ್ಷಕ್ಕೂ ಹೆಚ್ಚುವೀಕ್ಷಣೆ ಪಡೆದ ಬೆನ್ನಲ್ಲೇ ಎಚ್ಚೆತ್ತ ಗ್ವಾಲಿಯರ್ ಟ್ರಾಫಿಕ್ ಪೊಲೀಸರು ಕಾರನ್ನು ಜಪ್ತಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.

ಕಾರಿನ ಮಾಲೀಕ ಆದಿತ್ಯ ಸಿಕರ್ವಾರ್ ಎಂಬಾತನ ಪ್ರಕಾರ, ಆತನ ಸ್ನೇಹಿತೆ ಸುಮಾರು 800ರಿಂದ 900ರೂ. ಲಿಪ್‌ಸ್ಟಿಕ್ ಬಳಸಿ, ಸತತ ಮೂರೂವರೆ ಗಂಟೆಗಳ ಕಾಲ ಶ್ರಮಪಟ್ಟು ಕಾರಿನ ಮೇಲೆ ಸುಮಾರು 3,400 ಚುಂಬನದ ಗುರುತುಗಳನ್ನು ಹಾಕಿದ್ದಳು.

ಲಿಪ್‌ಸ್ಟಿಕ್ ಗುರುತುಗಳಿಂದ ಮುಚ್ಚಲ್ಪಟ್ಟ ಸ್ವಿಫ್ಟ್ ಕಾರನ್ನು ಗ್ವಾಲಿಯರ್‌ನ ಪಟೇಲ್ ನಗರ-ಸಿಟಿ ಸೆಂಟರ್ ರಸ್ತೆಯಲ್ಲಿ ಅತಿವೇಗವಾಗಿ ಚಲಾಯಿಸಿ, ಅದರ ವಿಡಿಯೋವನ್ನು ರೀಲ್ಸ್ ರೂಪದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿತ್ತು.

ಮತ್ತಷ್ಟು ಓದಿ:‘ಬಂಟಿ ಔರ್ ಬಬ್ಲಿ’ ಶೈಲಿಯಲ್ಲಿ ಐಷಾರಾಮಿ ಕಾರುಗಳ ಕಳವು: ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ರಾಜಸ್ಥಾನದ ಹೈಟೆಕ್ ಪ್ರೇಮಿಗಳು

ಥಾಟಿಪುರದಲ್ಲಿ ಕಾರು ವಶ: ವಿಡಿಯೋ ವೈರಲ್ ಆಗುತ್ತಿದ್ದಂತೆ ಟ್ರಾಫಿಕ್ ಪೊಲೀಸ್ ಅಧಿಕಾರಿ ಅಭಿಷೇಕ್ ರಘುವಂಶಿ ನೇತೃತ್ವದ ತಂಡವು ವಾಹನವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ.

ಮೋಟಾರು ವಾಹನ ಕಾಯ್ದೆಯ (Motor Vehicles Act) ಉಲ್ಲಂಘನೆಗಾಗಿ ಯುವಕನಿಗೆ 5,500 ರೂ. ದಂಡ ವಿಧಿಸಲಾಯಿತು. ಅಷ್ಟೇ ಅಲ್ಲದೆ, ಯುವಕನೇ ಪೊಲೀಸ್ ಠಾಣೆಯ ಆವರಣದಲ್ಲಿ ನಿಂತು ಕಾರಿನ ಮೇಲಿದ್ದ ಎಲ್ಲಾ ಲಿಪ್‌ಸ್ಟಿಕ್ ಗುರುತುಗಳನ್ನು ಸ್ವತಃ ಉಜ್ಜಿ ಸ್ವಚ್ಛಗೊಳಿಸಿದ ಬಳಿಕ ಬಿಡುಗಡೆ ಮಾಡಲಾಯಿತು.

ವಿಡಿಯೋ

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 52ರ ಅನ್ವಯ, ನೋಂದಾಯಿತ ವಾಹನದ ಮೂಲ ಬಣ್ಣ, ಲಕ್ಷಣಗಳು ಅಥವಾ ಬಾಡಿ ರಚನೆಯನ್ನು ಇಲಾಖೆಯ ಪೂರ್ವಾನುಮತಿಯಿಲ್ಲದೆ ಬದಲಾಯಿಸುವುದು ಅಥವಾ ರಸ್ತೆಯಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆಯುವಂತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ರೀಲ್ಸ್ ಹುಚ್ಚಾಟಕ್ಕೆ ಕಡಿವಾಣ: ಸಾರ್ವಜನಿಕ ರಸ್ತೆಗಳಲ್ಲಿ ಜೀವಕ್ಕೆ ಅಪಾಯ ತರುವಂತೆ ಸ್ಟಂಟ್ ಮಾಡುವುದು, ಅತಿವೇಗವಾಗಿ ವಾಹನ ಚಲಾಯಿಸುವುದು ಮತ್ತು ಅನುಮತಿಯಿಲ್ಲದೆ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us