Gyanvapi Mosque Case ಜ್ಞಾನವಾಪಿ ಮಸೀದಿ ಪ್ರಕರಣ: ಆದೇಶ ಕಾಯ್ದಿರಿಸಿದ ವಾರಣಾಸಿ ನ್ಯಾಯಾಲಯ, ನಾಳೆ ತೀರ್ಪು

| Updated By: ರಶ್ಮಿ ಕಲ್ಲಕಟ್ಟ

Updated on: May 23, 2022 | 5:47 PM

ವಾರಣಾಸಿಯ ಜ್ಞಾನವಾಪಿ ಮಸೀದಿಯ ಹೊರಗೋಡೆಯ ಮೇಲೆ ವಿಗ್ರಹಗಳಿರುವ ಹಿಂದೂ ದೇವತೆಗಳ ದರ್ಶನ ಮತ್ತು ಪೂಜೆಯ ಹಕ್ಕನ್ನು ಘೋಷಿಸಲು ಮತ್ತು ಪ್ರತಿಪಾದಿಸಲು ವಾರಣಾಸಿ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿರುವ ಹಿಂದೂ ಮಹಿಳಾ ಫಿರ್ಯಾದಿಗಳು...

Gyanvapi Mosque Case ಜ್ಞಾನವಾಪಿ ಮಸೀದಿ ಪ್ರಕರಣ: ಆದೇಶ ಕಾಯ್ದಿರಿಸಿದ ವಾರಣಾಸಿ ನ್ಯಾಯಾಲಯ, ನಾಳೆ ತೀರ್ಪು
ಜ್ಞಾನವಾಪಿ ಮಸೀದಿ
Image Credit source: PTI
Follow us on

ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇಗುಲ ಸಂಕೀರ್ಣ ವಿವಾದದ (Gyanvapi mosque-Kashi Viswanath temple complex dispute)ಕುರಿತು ಸಿವಿಲ್ ದಾವೆಯ ವಿಚಾರಣೆ ನಡೆಸುತ್ತಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯವು (Varanasi district Courtಜ್ಞಾನವಾಪಿ ಮಸೀದಿಯ (Gyanvapi Mosque) ಕಮಿಷನರ್ ಸಮೀಕ್ಷೆ ವರದಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಬೇಕೆ ಅಥವಾ ಮಸೀದಿ ಸಮಿತಿಯ ಆದೇಶ 7 ನಿಯಮ 11 ಅರ್ಜಿಯ ವಿಚಾರಣೆ ನಡೆಸಬೇಕೆ ಎಂಬುದರ ಬಗ್ಗೆ ಮಂಗಳವಾರ ಆದೇಶ ನೀಡಲಿದೆ. ಹಿಂದೂಗಳು ಆಕ್ಷೇಪಣೆಗಳನ್ನು ಕೇಳಬೇಕೆಂದು ಬಯಸುತ್ತಾರೆ.ಆದರೆ ಮುಸ್ಲಿಮರು O7R11 ಅನ್ನು ನಿರ್ಧರಿಸಬೇಕೆಂದು ಬಯಸುತ್ತಾರೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ವಿಚಾರಣೆಯನ್ನು  ಸುಪ್ರೀಂಕೋರ್ಟ್  ವಾರಣಾಸಿಯ ಜಿಲ್ಲಾ  ನ್ಯಾಯಾಧೀಶರಿಗೆ ವರ್ಗಾಯಿಸಲು ಆದೇಶಿಸದ ನಂತರ ವಾರಣಾಸಿ ನ್ಯಾಯಾಲಯವು ಸೋಮವಾರ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕಕ್ಷಿದಾರರು ಮತ್ತು ಅವರ ವಕೀಲರು ಮಾತ್ರ ನ್ಯಾಯಾಲಯದ ಕೋಣೆಗೆ ಪ್ರವೇಶವನ್ನು ಅನುಮತಿಸಲಾಗಿತ್ತು. ವಾರಣಾಸಿಯ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ಮುಂದೆ ಬಾಕಿ ಉಳಿದಿರುವ “ಸಿವಿಲ್ ಮೊಕದ್ದಮೆಯಲ್ಲಿ ಒಳಗೊಂಡಿರುವ ಸಮಸ್ಯೆಗಳ ಸಂಕೀರ್ಣತೆ” ಯನ್ನು ಒತ್ತಿಹೇಳಿದ ಸುಪ್ರೀಂ ಕೋರ್ಟ್ ಶುಕ್ರವಾರ ಈ ಮೊಕದ್ದಮೆಯನ್ನು ಉತ್ತರ ಪ್ರದೇಶದ ಹಿರಿಯ ಮತ್ತು ಅನುಭವಿ ನ್ಯಾಯಾಂಗ ಅಧಿಕಾರಿಯ ಮುಂದೆ ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿತ್ತು.

ವಾರಣಾಸಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ 30 ನಿಮಿಷಗಳ ಸುದೀರ್ಘ ವಿಚಾರಣೆ ನಡೆಯಿತು.

“ಪ್ರಕರಣವನ್ನು ನಿರ್ವಹಿಸಲಾಗುವುದಿಲ್ಲ ಎಂದು ಹೇಳುವ ನಮ್ಮ ಅರ್ಜಿಯನ್ನು ಮೊದಲು ಆಲಿಸಬೇಕು ಎಂದು ನಾನು ನ್ಯಾಯಾಲಯಕ್ಕೆ ಹೇಳಿದೆ, ನಾನು ನನ್ನ ಅರ್ಜಿಯನ್ನು ಓದಿದ್ದೇನೆ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನೂ ಓದಿದ್ದೇನೆ. ಎದುರಾಳಿ ವಕೀಲರು ಅವರಿಗೆ ಹೆಚ್ಚಿನ ದಾಖಲೆಗಳು ಮತ್ತು ಸಮಯ ಬೇಕು ಎಂದು ಹೇಳಿದರು. ನಮ್ಮ ಅರ್ಜಿಗೆ ಆಕ್ಷೇಪಣೆಗಳನ್ನು ಸಲ್ಲಿಸಿ ಆದರೆ ನಿರ್ವಹಣೆಯನ್ನು ಮೊದಲು ನಿರ್ಧರಿಸಬೇಕು ಎಂದು ನಾನು ಹೇಳಿದೆ ”ಎಂದು ಮಸೀದಿ ಸಮಿತಿಯ ವಕೀಲರಾದ ಅಭಯ್ ನಾಥ್ ಯಾದವ್ ಎನ್‌ಡಿಟಿವಿಗೆ ತಿಳಿಸಿದರು.

ಇದನ್ನೂ ಓದಿ
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಹಿಂದೂ ಕಾಲೇಜಿನ ಪ್ರೊಫೆಸರ್ ಬಂಧನ
Gyanvapi Mosque Case ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ಪ್ರಕರಣವನ್ನು ವರ್ಗಾಯಿಸಲು ಸುಪ್ರೀಂಕೋರ್ಟ್ ಆದೇಶ
Gyanvapi mosque case ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮಾತ್ರವಲ್ಲ ತ್ರಿಶೂಲ, ಡಮರು, ಶಿಲ್ಪಗಳೂ ಸಿಕ್ಕಿವೆ ಎಂದ ಸಮೀಕ್ಷೆ ವರದಿ
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಹಿಂದೂ ಕಾಲೇಜಿನ ಪ್ರೊಫೆಸರ್ ವಿರುದ್ಧ ಕೇಸು ದಾಖಲು

ಗುರುವಾರ ವಾರಣಾಸಿ ನ್ಯಾಯಾಲಯಕ್ಕೆ ಮುಚ್ಚಿದ ಕವರ್‌ನಲ್ಲಿ ದಾಖಲೆ ಹಸ್ತಾಂತರಿಸಿದ ಕೆಲವೇ ಗಂಟೆಗಳ ನಂತರ ಹಿಂದೂ ಅರ್ಜಿದಾರರು ಮಸೀದಿ ಚಿತ್ರೀಕರಣದ ವರದಿಯ ವಿವರಗಳನ್ನು ಬಿಡುಗಡೆ ಮಾಡಿದ್ದರಿಂದ ಪತ್ರಿಕೆಗಳಿಗೆ “ಆಯ್ದ ಸೋರಿಕೆ” ನಿಲ್ಲಬೇಕು ಎಂದು ನ್ಯಾಯಾಲಯ ಹೇಳಿದೆ.

1936 ರಲ್ಲಿ ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಕಾಲದ ಸರ್ಕಾರದ ನಿಲುವನ್ನು ಉಲ್ಲೇಖಿಸಿದ ಹಿಂದೂ ಭಕ್ತರು
ವಾರಣಾಸಿಯ ಜ್ಞಾನವಾಪಿ ಮಸೀದಿಯ ಹೊರಗೋಡೆಯ ಮೇಲೆ ವಿಗ್ರಹಗಳಿರುವ ಹಿಂದೂ ದೇವತೆಗಳ ದರ್ಶನ ಮತ್ತು ಪೂಜೆಯ ಹಕ್ಕನ್ನು ಘೋಷಿಸಲು ಮತ್ತು ಪ್ರತಿಪಾದಿಸಲು ವಾರಣಾಸಿ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿರುವ ಹಿಂದೂ ಮಹಿಳಾ ಫಿರ್ಯಾದಿಗಳು 1936 ರಲ್ಲಿ ವಕ್ಫ್ ಆಸ್ತಿ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾದ ದಾವೆಯಲ್ಲಿ ಬ್ರಿಟಿಷ್ ಸರ್ಕಾರವು ತೆಗೆದುಕೊಂಡ ನಿಲುವನ್ನು ಉಲ್ಲೇಖಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:35 pm, Mon, 23 May 22