Nayab Singh Saini: 2ನೇ ಬಾರಿ ಹರ್ಯಾಣ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕಾರ

ಹರ್ಯಾಣದಲ್ಲಿ ಸತತ ಎರಡನೇ ಬಾರಿ ನಯಾಬ್ ಸಿಂಗ್ ಸೈನಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಪಂಚಕುಲದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಇತರ ಸಿಎಂಗಳು ಉಪಸ್ಥಿತರಿದ್ದರು.

Nayab Singh Saini: 2ನೇ ಬಾರಿ ಹರ್ಯಾಣ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕಾರ
ನಯಾಬ್ ಸಿಂಗ್ ಸೈನಿ
Follow us
|

Updated on:Oct 17, 2024 | 1:59 PM

ಪಂಚಕುಲ ಅಕ್ಟೋಬರ್ 17: ಸತತ ಎರಡನೇ ಬಾರಿಗೆ ಹರ್ಯಾಣ ಸಿಎಂ ಆಗಿ ನಯಾಬ್ ಸಿಂಗ್ ಸೈನಿ (Nayab Singh Saini) ಅವರು ಇಂದು (ಗುರುವಾರ) ಪಂಚಕುಲದಲ್ಲಿ (Panchkula) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಇತರ ಸಿಎಂಗಳು, ಉಪ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಎನ್‌ಡಿಎ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಹೊಸ ಹರಿಯಾಣ ಸರ್ಕಾರದಲ್ಲಿ ಬಿಜೆಪಿ ಶಾಸಕರಾದ ಅರವಿಂದ್ ಕುಮಾರ್ ಶರ್ಮಾ, ಶ್ಯಾಮ್ ಸಿಂಗ್ ರಾಣಾ, ರಣಬೀರ್ ಸಿಂಗ್ ಗಂಗ್ವಾ ಮತ್ತು ಕ್ರಿಶನ್ ಬೇಡಿ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಂವಿಧಾನದ ಪರಿಚ್ಛೇದ 164 (1A) ಪ್ರಕಾರ, ಹರ್ಯಾಮ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 13 ಮಂತ್ರಿಗಳು ಇರಬಹುದು.

ಪ್ರಮುಖ ಒಬಿಸಿ ನಾಯಕರಾಗಿರುವ ಸೈನಿ, ಈ ವರ್ಷದ ಆರಂಭದಲ್ಲಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಸಿಎಂ ಸ್ಥಾನದಿಂದ ಬದಲಿಸಿದಾಗ ಅಧಿಕಾರ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮವು ಮಹರ್ಷಿ ವಾಲ್ಮೀಕಿ ಜಯಂತಿಯಂದೇ ನಡೆದಿದ್ದು, ಪ್ರಮಾಣವಚನಕ್ಕೆ ಮುಂಚಿತವಾಗಿ ಸೈನಿ ಅವರು ಪಂಚಕುಲದ ವಾಲ್ಮೀಕಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಸುಮಾರು 50,000 ಜನರು ಸಮಾರಂಭಕ್ಕೆ ಸಾಕ್ಷಿಯಾದರು, ಬೃಹತ್ ಭದ್ರತಾ ವ್ಯವಸ್ಥೆಗಳು ಮತ್ತು ಸಾರ್ವಜನಿಕರಿಗೆ 14 ಎಲ್ಇಡಿ ಪರದೆಗಳನ್ನು ಸ್ಥಾಪಿಸಲಾಗಿದೆ. ವಿರೋಧ ಪಕ್ಷದ ನಾಯಕರು, ರೈತರು, ‘ಲಖ್ಪತಿ ದೀದಿಗಳು’ ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳನ್ನು ಸಹ ಆಹ್ವಾನಿಸಲಾಗಿದೆ..

ಈ ಪ್ರಮಾಣ ವಚನ ಸ್ವೀಕಾರದ ನಂತರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಸಭೆಯು ರಾಷ್ಟ್ರೀಯ ಅಭಿವೃದ್ಧಿ ವಿಷಯಗಳು ಮತ್ತು ತುರ್ತು ಪರಿಸ್ಥಿತಿಯ 50 ನೇ ವಾರ್ಷಿಕೋತ್ಸವದ ಕುರಿತು ಚರ್ಚಿಸಲು ನಡೆಯಲಿದೆ. ಮುಂಬರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳಿಗೆ ಕಾರ್ಯತಂತ್ರ ರೂಪಿಸುತ್ತಿರುವಾಗ ಈ ಸಮಾವೇಶವು ಆಡಳಿತಾರೂಢ ಒಕ್ಕೂಟದ ನಿರ್ಣಾಯಕ ಸಭೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ಬಾಬಾ ಸಿದ್ದಿಕ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಶುಭಂ ಲೋಂಕರ್‌ಗೆ ಲುಕ್ ಔಟ್ ಸುತ್ತೋಲೆ

ಚಂಡೀಗಢ ಆಡಳಿತವು ಅಕ್ಟೋಬರ್ 16 ರಿಂದ ಅಕ್ಟೋಬರ್ 18 ರವರೆಗೆ ಡ್ರೋನ್‌ಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳಿಗೆ (UAVs) ನಗರವನ್ನು “ನೊ-ಫ್ಲೈಯಿಂಗ್ ಝೋನ್” ಎಂದು ಘೋಷಿಸಿತು. ನಿಷೇಧವು ಪೊಲೀಸ್, ಅರೆಸೇನಾ ಪಡೆಗಳು, ವಾಯುಪಡೆ, SPG ಸೇರಿದಂತೆ ಕಾನೂನು ಜಾರಿ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Thu, 17 October 24

ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ