Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಗುಡ್​ ನ್ಯೂಸ್; 60 ದಿನ ಮೊದಲು ಟಿಕೆಟ್​ ಬುಕಿಂಗ್​ಗೆ ಅವಕಾಶ

ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಇನ್ನುಮುಂದೆ 120 ದಿನಗಳ ಬದಲು 60 ದಿನಗಳ ಮೊದಲು ಪ್ರಯಾಣಿಕರು ಟಿಕೆಟ್ ಬುಕಿಂಗ್ ಮಾಡಬಹುದು. ನವೆಂಬರ್ 1ರಿಂದ ರೈಲು ಟಿಕೆಟ್​ ಬುಕಿಂಗ್​​ಗೆ ಈ ಹೊಸ ನಿಯಮ ಅನ್ವಯವಾಗಲಿದೆ. IRCTC ಬುಕಿಂಗ್ ಪ್ರಕಾರ, ರೈಲ್ವೆ ಟಿಕೆಟ್‌ಗಳ ಮುಂಗಡ ಕಾಯ್ದಿರಿಸುವಿಕೆಯ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ ಎಂದು ಘೋಷಿಸಿದೆ.

ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಗುಡ್​ ನ್ಯೂಸ್; 60 ದಿನ ಮೊದಲು ಟಿಕೆಟ್​ ಬುಕಿಂಗ್​ಗೆ ಅವಕಾಶ
ರೈಲ್ವೆ ಇಲಾಖೆ
Follow us
ಸುಷ್ಮಾ ಚಕ್ರೆ
|

Updated on: Oct 17, 2024 | 4:00 PM

ನವದೆಹಲಿ: ರೈಲ್ವೆ ಟಿಕೆಟ್‌ಗಳ ಮುಂಗಡ ಕಾಯ್ದಿರಿಸುವಿಕೆಯ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ. ನವೆಂಬರ್ 1ರಿಂದಲೇ ಈ ನಿಯಮ ಜಾರಿಗೆ ಬರಲಿದೆ. ಹಾಗೇ, ಟಿಕೆಟ್ ರಹಿತ ಪ್ರಯಾಣಕ್ಕೆ ರೈಲ್ವೆ ಇಲಾಖೆ ಕಡಿವಾಣ ಹಾಕಿದೆ. ರೈಲ್ವೆ ಸಚಿವಾಲಯವು 17 ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ಪತ್ರ ಬರೆದು ಅಕ್ಟೋಬರ್ 1-15 ಮತ್ತು ಅಕ್ಟೋಬರ್ 25- ನವೆಂಬರ್ 10ರ ನಡುವೆ ವಿಶೇಷ ಡ್ರೈವ್‌ನ ಪ್ರಾರಂಭವನ್ನು ನಿರ್ದೇಶಿಸುತ್ತದೆ. 1989ರ ರೈಲ್ವೇ ಕಾಯಿದೆಯ ಪ್ರಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.

“ಘಜಿಯಾಬಾದ್ ಮತ್ತು ಕಾನ್ಪುರ ನಡುವಿನ ನಮ್ಮ ಇತ್ತೀಚಿನ ದಿಢೀರ್ ತಪಾಸಣೆಯಲ್ಲಿ ಯಾವುದೇ ಟಿಕೆಟ್ ಇಲ್ಲದೆ ವಿವಿಧ ಎಕ್ಸ್‌ಪ್ರೆಸ್ ಮತ್ತು ರೈಲುಗಳ ಎಸಿ ಕೋಚ್‌ಗಳಲ್ಲಿ ನೂರಾರು ಪೊಲೀಸರು ಪ್ರಯಾಣಿಸುತ್ತಿದ್ದುದನ್ನು ನಾವು ಕಂಡುಕೊಂಡಿದ್ದೇವೆ. ನಾವು ಅವರಿಗೆ ದಂಡವನ್ನು ವಿಧಿಸಿದಾಗ ಆರಂಭದಲ್ಲಿ ಅವರು ಪಾವತಿಸಲು ನಿರಾಕರಿಸಿದರು, ನಮಗೆ ಬೆದರಿಕೆ ಹಾಕಿದರು” ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Uttarakhand: ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ, ರೈಲ್ವೆ ಹಳಿಯಲ್ಲಿ ಸಿಲಿಂಡರ್ ಪತ್ತೆ

ನಾರ್ತ್ ಸೆಂಟ್ರಲ್ ರೈಲ್ವೆ ವಲಯದ ಟಿಕೆಟ್ ಚೆಕ್ ಮಾಡುವ ಅಧಿಕಾರಿಗಳು ಪೊಲೀಸರು ಮತ್ತು ಇತರ ಅನಧಿಕೃತ ಪ್ರಯಾಣಿಕರ ಮೇಲೆ ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ. ಏಕೆಂದರೆ ಅವರು ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ