ದ್ವೇಷಪೂರಿತ ಭಾಷಣ ಪ್ರರಕರಣ: ಯೋಗಿ ಆದಿತ್ಯನಾಥ್ ಮೇಲೆ ಕಾನೂನು ಕ್ರಮದ ಅರ್ಜಿ ವಜಾ ಮಾಡಿದ ಸುಪ್ರೀಂ

ಜನವರಿ 27, 2007ರಂದು ಗೋಖರ್ ಪುರದಲ್ಲಿ ನಡೆದ ಸಭೆಯಲ್ಲಿ ಹಿಂದೂ ಯುವ ವಾಹಿನಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡುವಾಗ, ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಸೃಷ್ಟಿಸುವ ಭಾಷಣವನ್ನು ಮಾಡಿದ್ದಾರೆ ಎಂದು ಪರ್ವೇಜ್ ಪರ್ವಾಜ್ ಆರೋಪಿಸಿದ್ದರು.

ದ್ವೇಷಪೂರಿತ ಭಾಷಣ ಪ್ರರಕರಣ: ಯೋಗಿ ಆದಿತ್ಯನಾಥ್  ಮೇಲೆ ಕಾನೂನು ಕ್ರಮದ ಅರ್ಜಿ ವಜಾ ಮಾಡಿದ ಸುಪ್ರೀಂ
Yogi Adityanath and Supreme Court
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 26, 2022 | 11:22 AM

ಉತ್ತರ ಪ್ರದೇಶ: 2007ರಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರಿಂ ಕೋರ್ಟ್ ವಜಾ ಮಾಡಿದೆ. ಜನವರಿ 27, 2007ರಂದು ಗೋಖರ್ ಪುರದಲ್ಲಿ ನಡೆದ ಸಭೆಯಲ್ಲಿ ಹಿಂದೂ ಯುವ ವಾಹಿನಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡುವಾಗ, ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಸೃಷ್ಟಿಸುವ ಭಾಷಣವನ್ನು ಮಾಡಿದ್ದಾರೆ ಎಂದು ಪರ್ವೇಜ್ ಪರ್ವಾಜ್ ಆರೋಪಿಸಿದ್ದರು.

ಮೇ 3 2017ರಂದು ಯುಪಿ ಸರ್ಕಾರವು ಯೋಗಿ ಅವರನ್ನು ಪ್ರಾಸಿಕ್ಯೂಷನ್ ಮಾಡಲು ಅನುಮತಿ ನಿರಾಕರಿಸುವ ನಿರ್ಧಾರವನ್ನು ಮತ್ತು ಪ್ರಕರಣದಲ್ಲಿ ಸಲ್ಲಿಸಿದ ಮುಕ್ತಾಯ ವರದಿಯನ್ನು ಅವರು ಪ್ರಶ್ನಿಸಿರು. ಅವರು ಈ ಹಿಂದೆ ಅಲಹಬಾದ್ ಹೈಕೋರ್ಟ್​ಗೆ ಮೊರೆ ಹೋಗಿದ್ದರು, ಅದು ಫ್ರೆಬ್ರವರಿ 22 20018ರಂದು ಅರ್ಜಿಯನ್ನು ವಜಾಗೊಳಿಸಿತು, ನಂತರ ಅವರು ಸುಪ್ರೀಂ ಕೋರ್ಟ್​ಗೆ ವಿಶೇಷ ಅರ್ಜಿಯನ್ನು ಸಲ್ಲಿಸಿದರು.

ಪ್ರಕರಣದ ಕೊನೆಯ ವಿಚಾರಣೆಯಲ್ಲಿ ಅರ್ಜಿದಾರರ ಪರ ಹಾಜರಾದ ವಕೀಲ ಫುಝೈಲ್ ಅಯ್ಯುಬಿ ಈ ವಿಷಯದಲ್ಲಿ ಕರಡು ಅಂತಿಮ ವರದಿಯನ್ನು ರಚಿಸಲಾಗಿದೆ ಮತ್ತು ಅಪರಾಧ ವಿಭಾಗವು ಸೆಕ್ಷನ್ 143,153,153 ಎ 295 ಎ ಅಡಿಯಲ್ಲಿ ಅಪರಾಧಗಳನ್ನು ಪತ್ತೆ ಮಾಡಿದೆ ಎಂದು ತನಿಖಾ ಸಂಸ್ಥೆ ಸ್ಪಷ್ಟವಾಗಿದ ಸೂಚಿಸಿದೆ ಎಂದು ಹೇಳಿದರು.

505 IPC ಮಾಡಲಾಗುವುದು. ಇದನ್ನು ಕಾನೂನು ಇಲಾಖೆ ನಿರಾಕರಿಸುತ್ತಿದೆ ಎಂದು ಹೇಳಿದರು. ಇದಕ್ಕೆ ವಿರುದ್ಧವಾಗಿ ಉತ್ತರ ಪ್ರದೇಶ ರಾಜ್ಯದ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ದ್ವೀಷದ ಭಾಷಣದ ಧ್ವನಿಮುದ್ರಣವನ್ನು ಹೊಂದಿರುವ ಪ್ರಶ್ನೆಯಲ್ಲಿರುವ ಸಿಡಿಯನ್ನು ಟ್ಯಾಂಪರ್ ಮಾಡಲಾಗಿದೆ ಮತ್ತು ನಕಲಿ ಎಂದು CSFL ಹೇಳಿದೆ ಎಂಎಉ ಹೇಳಿದರು, ಇದೀಗ ಈ ಅರ್ಜಿಯನ್ನು ಸುಪ್ರಿಂ ಕೋರ್ಟ್ ವಜಾ ಮಾಡಿದೆ.