26 ವರ್ಷದ ಈ ಯುವಕ.. ಅಭಿನವ ಕುಂಭಕರ್ಣ! ನಿದ್ದೆ ಮಾಡಲು ಶುರು ಮಾಡಿದವನು ಒಂದು ವಾರ ಕಾಲ ಎದ್ದಿಲ್ಲ! ಆ ಮೇಲೆ?

‘ಕುಂಭಕರ್ಣ ಸಿಂಡ್ರೋಮ್’ ಸುದೀರ್ಘ ನಿದ್ರೆ ಕಾಯಿಲೆಗೆ ಸರಿಯಾದ ಚಿಕಿತ್ಸೆ ಮತ್ತು ರೋಗದ ಕಾರಣಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಈ ರೋಗಕ್ಕೆ ಸ್ಪಷ್ಟ ಕಾರಣಗಳಿಲ್ಲ. ವೈರಲ್ ಸೋಂಕು ಸಹ ಕಾರಣ ಇರಬಹುದು ಎನ್ನಲಾಗಿದೆ. ಮನಸ್ಸಿಗೆ ಖುಷಿಯಾಗಬೇಕು ಎಂಬ ಉದ್ದೇಶದಿಂದ ಮಲಗಲು ಶುರು ಮಾಡಿದರೂ ದೇಹ ಏಳಲು ನೆರವಾಗುವುದಿಲ್ಲ.

26 ವರ್ಷದ ಈ ಯುವಕ.. ಅಭಿನವ ಕುಂಭಕರ್ಣ! ನಿದ್ದೆ ಮಾಡಲು ಶುರು ಮಾಡಿದವನು ಒಂದು ವಾರ ಕಾಲ ಎದ್ದಿಲ್ಲ! ಆ ಮೇಲೆ?
ನಿದ್ದೆ ಮಾಡಲು ಶುರು ಮಾಡಿದ ಈ ಯುವಕ.. ಒಂದು ವಾರ ಕಾಲ ಎದ್ದಿಲ್ಲ!
Follow us
ಸಾಧು ಶ್ರೀನಾಥ್​
|

Updated on:Nov 13, 2023 | 10:49 AM

26 ವರ್ಷದ ಯುವಕ ಸತತ ಎಂಟು ದಿನ ಮಲಗಿದ್ದ! ಈತನ ಅಸಹಜ ನಿದ್ದೆಯ ಪರಿಸ್ಥಿತಿಯನ್ನು ಕಂಡು ಮನೆಯವರು ಆತಂಕಗೊಂಡರು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಆತ ಎಂಟು ದಿನಗಳ ಕಾಲ ನಿದ್ರೆಯಲ್ಲಿದ್ದ -ಆತ ತಿನ್ನುವುದಕ್ಕೆ ಮತ್ತು ಸ್ನಾನಕ್ಕೆ ಹೋಗುವುದು ಮುಂತಾದ ಮೂಲ ಚಟುವಟಿಕೆಗಳನ್ನು ಪೂರೈಸಲು ಕೆಲವೇ ಬಾರಿ ಎಚ್ಚರಗೊಂಡಿದ್ದ… ಅದೂ ಅರೆಪ್ರಜ್ಞಾವಸ್ಥೆಯಲ್ಲಿ. ವೈದ್ಯರು ಯುವಕ ಕ್ಲೈನ್-ಲೆವಿನ್ ಸಿಂಡ್ರೋಮ್ (ಕೆಎಲ್ಎಸ್) ರೋಗಕ್ಕೆ ತುತ್ತಾಗಿರುವುದಾಗಿ ನಿರ್ಣಯಿಸಿದರು. ಯುವಕನ ಆರೋಗ್ಯ ಸ್ಥಿತಿ ಕುರಿತು ವೋಕಾರ್ಡ್ ಆಸ್ಪತ್ರೆಯ ನರರೋಗ ತಜ್ಞ ಡಾ. ಪ್ರಶಾಂತ್ ಮಖಿಜ ಹೀಗೆ ವಿವರಿಸಿದ್ದಾರೆ: KLS ಒಂದು ಸಂಕೀರ್ಣ ರೋಗ. ಈ ರೋಗದ ನಿಖರವಾದ ಕಾರಣವನ್ನು ವೈದ್ಯಕೀಯ ವಿಜ್ಞಾನವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಈ ರೋಗ ಬಹಳ ಅಪರೂಪ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಯುವಕನ ಅಸಹಜ ನಿದ್ರೆಯನ್ನು ಗಮನಿಸಿದ ಕುಟುಂಬ ಸದಸ್ಯರು ಮೊದಲು ಸ್ಥಳೀಯ ವೈದ್ಯರು ಮತ್ತು ಮಂತ್ರ ಮಾಟಗಾತಿಯರನ್ನು ಸಂಪರ್ಕಿಸಿದರು. ಆದರೆ, ಯಾವುದೇ ಫಲ ಸಿಗಲಿಲ್ಲ. ಆತ ಅದೇ ರೀತಿಯಲ್ಲಿ ನಿದ್ರೆ ಮುಂದುವರೆಸಿದ್ದಾನೆ. ಆತಂಕಗೊಂಡ ಮನೆಯವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದರು. ಅವರ ವೈದ್ಯ ಲೋಕದಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಕಳೆದ ವರ್ಷ ಎರಡು ಪ್ರಕರಣಗಳು ವರದಿಯಾಗಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಈ ರೋಗಕ್ಕೆ ಸ್ಪಷ್ಟ ಕಾರಣಗಳಿಲ್ಲ. ವೈರಲ್ ಸೋಂಕು ಸಹ ಕಾರಣ ಇರಬಹುದು ಎನ್ನಲಾಗಿದೆ. ಮನಸ್ಸಿಗೆ ಖುಷಿಯಾಗಬೇಕು ಎಂಬ ಉದ್ದೇಶದಿಂದ ಮಲಗಲು ಶುರು ಮಾಡಿದರೂ ದೇಹ ಏಳಲು ನೆರವಾಗುತ್ತಿಲ್ಲ. ಈ ಮೂಲಕ ದಿನಗಟ್ಟಲೆ ನಿದ್ರಾವಸ್ಥೆಯಲ್ಲಿ ಇರುವುದಾಗಿ ಹೇಳಿದರು.

Also Read: ಮಲಗುವಾಗ ಸ್ಮಾರ್ಟ್​ಫೋನ್ ಅನ್ನು ತಪ್ಪಿಯೂ ಈ ಸ್ಥಳದಲ್ಲಿ ಇಡಬೇಡಿ

KLS ಅನ್ನು ಪತ್ತೆ ಹಚ್ಚಲು ಯಾವುದೇ ನಿರ್ದಿಷ್ಟ ಪರೀಕ್ಷೆಗಳಿಲ್ಲ. ನರರೋಗ ತಜ್ಞ ಡಾ. ರಾಹುಲ್ ಚಾಕೋರ್ ಮಾತನಾಡಿ, 12ರಿಂದ 25 ವರ್ಷದೊಳಗಿನ ಹದಿಹರೆಯದವರು ಮತ್ತು ಯುವಜನರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ. ವೈದ್ಯರು ಈ ರೋಗವನ್ನು ‘ಕುಂಭಕರ್ಣ ಸಿಂಡ್ರೋಮ್’ ಎಂದೂ ಕರೆಯುತ್ತಾರೆ. ಆದರೆ, ಈ ಅಪರೂಪದ ಕಾಯಿಲೆ ಜಗತ್ತಿನಲ್ಲಿ ಕೆಲವೇ ಕೆಲವು ಜನರಲ್ಲಿ ಮಾತ್ರ ಕಂಡುಬರುತ್ತದೆ. ಅಂಥವರಿಗೆ ಸೂಕ್ತ ಚಿಕಿತ್ಸೆ ಬೇಕು.. ಆದರೆ ಅದರಿಂದ ಚೇತರಿಸಿಕೊಳ್ಳುತ್ತಾರೋ, ಇಲ್ಲವೋ ಎಂಬುದನ್ನು ಖಚಿತವಾಗಿ ಹೇಳಲು ವೈದ್ಯರಿಗೂ ಸಾಧ್ಯವಾಗುತ್ತಿಲ್ಲ.

ಇತ್ತೀಚೆಗೆ ರಾಜಸ್ಥಾನದ ನಾಗೌರ್ ಜಿಲ್ಲೆಯ ಭದ್ವಾ ಗ್ರಾಮದ ವ್ಯಕ್ತಿಯೊಬ್ಬರು ಇಂತಹ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಆತನೂ ಹೀಗೆಯೇ ದಿನಗಟ್ಟಲೆ ನಿದ್ದೆಗೆ ಜಾರಿದ್ದ. ಆತನನ್ನು ಎಬ್ಬಿಸಲು ಮನೆಯವರು ಮಾಡಿದ ತಂತ್ರಗಳುನ ಒಂದೆರಡಲ್ಲ. ಇದೀಗ ಮಹಾರಾಷ್ಟ್ರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ‘ಕುಂಭಕರ್ಣ ಸಿಂಡ್ರೋಮ್’ ಸುದೀರ್ಘ ನಿದ್ರೆ ಕಾಯಿಲೆಗೆ ಸರಿಯಾದ ಚಿಕಿತ್ಸೆ ಮತ್ತು ರೋಗದ ಕಾರಣಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

Published On - 10:46 am, Mon, 13 November 23

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ