ಚೆನ್ನೈನಲ್ಲಿ ನಿರಂತರ ಮಳೆ; ಚೆಂಬರಂಬಕ್ಕಂ ಜಲಾಶಯದಿಂದ ನೀರು ಬಿಡುಗಡೆ
ಇಂದು ಚೆನ್ನೈ ನಗರದಲ್ಲಿ 6 ಸೆಮೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ಸಾಮಾನ್ಯ ಮಳೆಯಾಗಲಿದ್ದು, ಮೋಡಮುಸುಕಿದ ವಾತಾವರಣ ಇರಲಿದೆ. ಚೆನ್ನೈ ನಗರದ ರಸ್ತೆಗಳು ಈಗಾಗಲೇ ನೀರಿನಿಂದ ತುಂಬಿದ್ದು, ನಾಳೆ ತಮಿಳುನಾಡಿನ ಇತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಚೆನ್ನೈ: ನಗರದಲ್ಲಿ ಮಂಗಳವಾರ (ಜ.5) ಮುಂಜಾನೆಯಿಂದ ಭಾರೀ ಮಳೆಯಾಗುತ್ತಿದ್ದು ಚೆಂಬರಂಬಕ್ಕಂ ಜಲಾಶಯದಿಂದ ನೀರು ಹೊರಕ್ಕೆ ಹರಿಬಿಡಲಾಗಿದೆ . ಚೆನ್ನೈಯಿಂದ ಸುಮಾರು 25 ಕಿಮೀ ದೂರದಲ್ಲಿರುವ ಚೆಂಬರಂಬಕ್ಕಂ ಜಲಾಶಯದ ಗೇಟ್ಗಳನ್ನು ಮಧ್ಯಾಹ್ನ 2 ಗಂಟೆಗೆ ತೆರೆಯಲಾಗಿದೆ. ಬೆಳಿಗ್ಗೆ 8 ಗಂಟೆ ಹೊತ್ತಿಗೆ ಜಲಾಶಯದಲ್ಲಿ ನೀರಿನ ಮಟ್ಟ 23 ಅಡಿ ತಲುಪಿದ್ದು 500 ಕ್ಯುಸೆಕ್ ನೀರನ್ನು ಹೊರಗೆ ಹರಿಬಿಡಲಾಗಿದೆ.
ಇಂದು ಚೆನ್ನೈ ನಗರದಲ್ಲಿ 6 ಸೆಮೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ಸಾಮಾನ್ಯ ಮಳೆಯಾಗಲಿದ್ದು, ಮೋಡಮುಸುಕಿದ ವಾತಾವರಣ ಇರಲಿದೆ.
#WATCH I Tamil Nadu: Severe water-logging in parts of Chennai following heavy rainfall in the area; visuals from T Nagar pic.twitter.com/xVCn8iFohO
— ANI (@ANI) January 5, 2021
ರಸ್ತೆ ಮತ್ತು ಸೇತುವೆಗಳು ಜಲಾವೃತವಾಗಲಿದ್ದು ಸಂಚಾರಕ್ಕೆ ಅಡಚಣೆಯುಂಟಾಗಲಿದೆ. ಚೆನ್ನೈ ನಗರದ ರಸ್ತೆಗಳು ಈಗಾಗಲೇ ನೀರಿನಿಂದ ತುಂಬಿದ್ದು, ಇವತ್ತು ಮತ್ತು ನಾಳೆ ತಮಿಳುನಾಡಿನ ಇತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
What a cold intense rainy morning ! Haven't seen too much rains at this part of the year. #chennairains pic.twitter.com/2CKj1TiREr
— krithika sivaswamy (@krithikasivasw) January 5, 2021
ಹವಾಮಾನ ಇಲಾಖೆಯ ಪ್ರಕಾರ ಮಂಗಳವಾರ ವಿಲ್ಲುಪುರಂ, ಚೆನ್ನೈ, ಕಾಂಚೀಪುರಂ, ಕಡಲೂರು, ನಾಗಪಟ್ಟಣಂ, ತಿರಿವನ್ನಾಮಲೈ ಮತ್ತು ಪುದುಚ್ಚೇರಿಯಲ್ಲಿ ಭಾರೀ ಮಳೆಯಾಗಲಿದೆ. ಜನವರಿ 6, ಬುಧವಾರದಂದು ನೀಲಗಿರಿ, ಕಡಲೂರು, ನಾಗಪಟ್ಟಣಂ, ಮೈಲಾಡುತುರೈ, ವಿಲ್ಲುಪುರಂ ಜಿಲ್ಲೆಯಲ್ಲಿ ಮಳೆಯಾಗಲಿದೆ.
Nivar Cyclone ತಮಿಳುನಾಡು, ಪುದುಚೇರಿ, ಆಂಧ್ರದಲ್ಲಿ ಬಿರುಗಾಳಿ ಸಹಿತ ಮಳೆ: ಜನಜೀವನ ಅಸ್ತವ್ಯಸ್ತ