ಪ್ರತಿಭಟನಾನಿರತ ರೈತರನ್ನು ಸಂಜೆ 7 ಗಂಟೆಗೆ ಮಾತುಕತೆಗೆ ಕರೆದ ಗೃಹ ಸಚಿವ ಅಮಿತ್ ಶಾ
ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಇಂದು ಸಂಜೆ 7ಗಂಟೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಮಾತುಕತೆ ನಡೆಸಲಿದ್ದಾರೆ.
ನವದೆಹಲಿ: ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಇಂದು ಸಂಜೆ 7ಗಂಟೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಮಾತುಕತೆ ನಡೆಸಲಿದ್ದಾರೆ.
ಮಂಗಳವಾರ ರೈತರು ಕರೆ ನೀಡಿದ ಭಾರತ್ ಬಂದ್ ನಿಂದಾಗಿ ದೇಶದ ಹಲವೆಡೆ ರಸ್ತೆ, ರೈಲು ಸಂಚಾರ ಸ್ಥಗಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಪ್ರತಿಭಟನಾಕಾರರು ತಡೆಯೊಡ್ಡಿದ್ದು ಮಾರುಕಟ್ಟೆಗಳು ಬಂದ್ ಆಗಿವೆ. ಸಂಜೆ 7 ಗಂಟೆಗೆ ಮಾತುಕತೆ ನಡೆಸಲು ಬನ್ನಿ ಎಂದು ಅಮಿತ್ ಶಾ ಕರೆ ಮಾಡಿ ಹೇಳಿದ್ದಾರೆ ಎಂದು ರೈತರ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
Published On - 3:35 pm, Tue, 8 December 20