ಇಂಡಿಯಾ ಮೊಬೈಲ್ ಸಮಾವೇಶ; ಹಳ್ಳಿ ಜನರಿಗೊಂದು ಖುಷಿ ಸುದ್ದಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ

ತಂತ್ರಜ್ಞಾನದೊಟ್ಟಿಗೇ ನಮ್ಮ ಜೀವನ ಮಟ್ಟವನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂಬುದನ್ನು ಯೋಚಿಸಬೇಕು. ಅದಕ್ಕೆ ತಕ್ಕಂತೆ ಪೂರ್ವಸಿದ್ಧತೆ ಮಾಡುತ್ತ ಸಾಗಬೇಕು ಎಂದು ಪ್ರಧಾನಿ ಹೇಳಿದರು.

ಇಂಡಿಯಾ ಮೊಬೈಲ್ ಸಮಾವೇಶ; ಹಳ್ಳಿ ಜನರಿಗೊಂದು ಖುಷಿ ಸುದ್ದಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on:Dec 08, 2020 | 2:51 PM

ದೆಹಲಿ: ಇಂಡಿಯಾ ಮೊಬೈಲ್ ಕಾಂಗ್ರೆಸ್(IMC)-2020ರ ಮೂರು ದಿನಗಳ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಮಾತನಾಡಿದರು.

ನಮ್ಮ ದೇಶ ಮೊಬೈಲ್ ತಯಾರಿಕೆಗೆ ಆದ್ಯ ಸ್ಥಳ ಎಂಬುದನ್ನು ಇಲ್ಲಿನ ಡಿಜಿಟಲ್​ ತಂತ್ರಜ್ಞಾನ ಸಾಕ್ಷೀಕರಿಸಿದೆ. ನಮ್ಮ ದೇಶದಲ್ಲಿ ಆ್ಯಪ್​ ಮಾರ್ಕೆಟ್ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮೊಬೈಲ್ ಫೋನ್​​ಗಳ ಮೇಲೆ ವಿಶ್ವದಲ್ಲೇ ಅತಿ ಕಡಿಮೆ ಸುಂಕ ವಿಧಿಸಲಾಗುತ್ತಿದೆ. ಭಾರತದ ಡಿಜಿಟಲ್​ ಸಾಮರ್ಥ್ಯಕ್ಕೆ ಸಾಟಿ ಇಲ್ಲ. ಈ ಮೊಬೈಲ್ ತಂತ್ರಜ್ಞಾನದ ಮೂಲಕವೇ ನಮ್ಮ ದೇಶದಲ್ಲಿ ಕೊವಿಡ್​ 19 ಲಸಿಕೆ ವಿತರಣಾ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ತಿಳಿಸಿದರು.

ತಂತ್ರಜ್ಞಾನದೊಟ್ಟಿಗೇ ನಮ್ಮ ಜೀವನ ಮಟ್ಟವನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂಬುದನ್ನು ಯೋಚಿಸಬೇಕು. ಅದಕ್ಕೆ ತಕ್ಕಂತೆ ಪೂರ್ವಸಿದ್ಧತೆ ಮಾಡುತ್ತ ಸಾಗಬೇಕು. ಅತ್ಯುತ್ತಮ ಟೆಕ್ನಾಲಜಿ ನಮಗೆ ಆರೋಗ್ಯ ಸೇವೆ ಒದಗಿಸುತ್ತದೆ. ಶಿಕ್ಷಣಕ್ಕೆ ಸಹಾಯ ಮಾಡುತ್ತದೆ…ಹಾಗೇ ರೈತರಿಗೆ ಅವಕಾಶಗಳನ್ನು ಸೃಷ್ಟಿಸಿಕೊಡುತ್ತದೆ.

ಇದನ್ನೆಲ್ಲ ಗುರಿಯಾಗಿಟ್ಟುಕೊಂಡು ನಾವು ಕೆಲಸ ಮಾಡಬೇಕು. ಸಾಂಕ್ರಾಮಿಕ ರೋಗದ ನಡುವೆಯೂ ಜಗತ್ತು ಕ್ರಿಯಾತ್ಮಕವಾಗಿ ಮುನ್ನಡೆಯುತ್ತಿರುವುದು ಈ ತಂತ್ರಜ್ಞಾನದ ನಾವೀನ್ಯತೆ, ಅದಕ್ಕೆ ತಕ್ಕಂತೆ ನಿಮ್ಮೆಲ್ಲರ ಪ್ರಯತ್ನದಿಂದ ಎಂದು ಹೇಳಿದರು.

3 ವರ್ಷದಲ್ಲಿ ಹೈ ಸ್ಪೀಡ್ ಫೈಬರ್ ಆಪ್ಟಿಕ್ ಡಾಟಾ ಸಂಪರ್ಕ ಭಾರತದ ಅರ್ಧದಷ್ಟು ಮೊಬೈಲ್​ ಬಳಕೆದಾರರು ಹಳ್ಳಿಯ ಜನರು. ಇನ್ನು ಮೂರು ವರ್ಷಗಳಲ್ಲಿ ದೇಶದ ಪ್ರತಿ ಹಳ್ಳಿಯೂ ಹೈ ಸ್ಪೀಡ್ ಫೈಬರ್ ಆಪ್ಟಿಕ್ ಡಾಟಾ ಸಂಪರ್ಕ ಹೊಂದುವಂತೆ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ವೇಗದ ಇಂಟರ್​​ನೆಟ್​ ಸೌಕರ್ಯ ಕಲ್ಪಿಸಲಾಗುವುದು.

ತಾಂತ್ರಿಕ ನವೀಕರಣದ ಕಾರಣದಿಂದಾಗಿ ನಾವು ಆಗಾಗ ಹ್ಯಾಂಡ್​ಸೆಟ್ ಮತ್ತು ಗ್ಯಾಜೆಟ್​ಗಳನ್ನು ಬದಲಿಸುವ ಸಂಪ್ರದಾಯ ಹೊಂದಿದ್ದೇವೆ. ಲಕ್ಷಾಂತರ ಭಾರತೀಯರ ಸಬಲೀಕರಣ ಮತ್ತು ಭವಿಷ್ಯದ ತಂತ್ರಜ್ಞಾನವನ್ನು ಉತ್ತುಂಗಕ್ಕೆ ಒಯ್ಯಲು 5ಜಿ ಸೇವೆಯನ್ನು ಆದಷ್ಟು ಬೇಗ ಪ್ರಾರಂಭಿಸಲು ಚಿಂತಿಸಬೇಕು.. ಟೆಲಿಕಾಂ ಉಪಕರಣಗಳ ಉತ್ಪಾದನೆ, ವಿನ್ಯಾಸ, ಅಭಿವೃದ್ಧಿಯಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿಸಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಹೇಳಿದರು.

Published On - 2:50 pm, Tue, 8 December 20

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ