ತಮಿಳುನಾಡು: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ, ಚಪ್ಪಲಿಯಿಂದ ಹೊಡೆದು ಹಲ್ಲೆ
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ(Student)ಯನ್ನು ವಿವಸ್ತ್ರಗೊಳಿಸಿ ಚಪ್ಪಲಿಯಿಂದ ಥಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಮಧುರೈನಲ್ಲಿರುವ ಸರ್ಕಾರಿ ಹಾಸ್ಟೆಲ್‌ನಲ್ಲಿ ಐಟಿಐ ವಿದ್ಯಾರ್ಥಿನಿಯೊಬ್ಬನಿಗೆ ಸಹ ವಿದ್ಯಾರ್ಥಿಗಳ ಗುಂಪೊಂದು ಚಿತ್ರಹಿಂಸೆ ನೀಡಿದೆ, ವಿವಸ್ತ್ರಗೊಳಿಸಿ ಅವಮಾನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯನ್ನು ರ‍್ಯಾಗಿಂಗ್‌ಗೆ ಒಳಪಡಿಸಿದ್ದಕ್ಕಾಗಿ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಚೆನ್ನೈ, ಸೆಪ್ಟೆಂಬರ್ 24: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ(Student)ಯನ್ನು ವಿವಸ್ತ್ರಗೊಳಿಸಿ ಚಪ್ಪಲಿಯಿಂದ ಥಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಮಧುರೈನಲ್ಲಿರುವ ಸರ್ಕಾರಿ ಹಾಸ್ಟೆಲ್‌ನಲ್ಲಿ ಐಟಿಐ ವಿದ್ಯಾರ್ಥಿನಿಯೊಬ್ಬನಿಗೆ ಸಹ ವಿದ್ಯಾರ್ಥಿಗಳ ಗುಂಪೊಂದು ಚಿತ್ರಹಿಂಸೆ ನೀಡಿದೆ, ವಿವಸ್ತ್ರಗೊಳಿಸಿ ಅವಮಾನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯನ್ನು ರ‍್ಯಾಗಿಂಗ್‌ಗೆ ಒಳಪಡಿಸಿದ್ದಕ್ಕಾಗಿ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಆ ವಿಡಿಯೋದಲ್ಲಿ ಒಬ್ಬನ ಕೈಯಲ್ಲಿ ಟವಲ್ ಇದ್ದು, ವಿದ್ಯಾರ್ಥಿಯ ವಿವಸ್ತ್ರಗೊಳಿಸುವ ಮೊದಲು ಅದನ್ನು ಧರಿಸಿದ್ದ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಯು ತನ್ನ ಪ್ಯಾಂಟ್ ಧರಿಸಲು ಅವಕಾಶ ನೀಡುವಂತೆ ಮನವಿ ಮಾಡಿದರೂ, ಆತನ ಮನವಿಗಳನ್ನು ನಿರ್ಲಕ್ಷಿಸಿರುವುದು ವಿಡಿಯೋ ತೋರಿಸುತ್ತದೆ.
ವೀಡಿಯೊದಲ್ಲಿ, ಮೂವರು ವಿದ್ಯಾರ್ಥಿಗಳು ಯುವ ವಿದ್ಯಾರ್ಥಿಗೆ ಕಿರುಕುಳ ನೀಡುತ್ತಿರುವುದು ಕಂಡುಬರುತ್ತದೆ, ಒಬ್ಬನು ಕೃತ್ಯವನ್ನು ಚಿತ್ರೀಕರಿಸುತ್ತಿದ್ದರೆ, ಇನ್ನೊಬ್ಬ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆಯುತ್ತಿದ್ದಾನೆ, ಮತ್ತು ಮೂರನೆಯವನು ಆ ವಿದ್ಯಾರ್ಥಿಯ ಖಾಸಗಿ ಭಾಗಗಳ ಬಗ್ಗೆ ಅಶ್ಲೀಲ ಮಾತುಗಳನ್ನು ಆಡಿದ್ದಾನೆ. ಇನ್ನೂ ಹಲವರು ಅಲ್ಲೇ ನಿಂತಿದ್ದರೂ ಕೂಡ ತಪ್ಪಿಸುವ ಕೆಲಸವನ್ನು ಯಾರೂ ಮಾಡಿಲ್ಲ. ಇದೆಲ್ಲವೂ ನಶೆಯಲ್ಲಿ ಮಾಡಿರುವಂತಿದೆ ಎಂದು ಆರೋಪಿಸಲಾಗಿದೆ.
ಮತ್ತಷ್ಟು ಓದಿ: ಸೈಕಲ್ ಮೇಲೆ ಹೋಗುತ್ತಿದ್ದ ವಿದ್ಯಾರ್ಥಿ ಮೇಲೆ ಬೀದಿ ನಾಯಿ ದಾಳಿ
ವಿದ್ಯಾರ್ಥಿಗಳು ಐಟಿಐ ಓದುತ್ತಿದ್ದಾರೆ ಮತ್ತು ಚೆಕ್ಕನೂರಾನಿಯಲ್ಲಿರುವ ಕಲ್ಲಾರ್ ರಿಕ್ಲಮೇಷನ್ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಾರೆ. ಈ ಘಟನೆ ಸೆಪ್ಟೆಂಬರ್ 18 ರಂದು ನಡೆದಿದೆ. ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆ ಹೆಚ್ಚುತ್ತಿರುವುದಕ್ಕೆ ಪ್ರತಿಪಕ್ಷ ಎಐಎಡಿಎಂಕೆ ಈ ಘಟನೆಯನ್ನು ದೂಷಿಸಿದೆ.
ಶಾಲೆಗಳಲ್ಲಿ ಕಲಿಸುವ ಮೌಲ್ಯಗಳಿಗೂ ಮತ್ತು ಅವರು ಪಾಲಿಸುವ ಮೌಲ್ಯಗಳಿಗೂ ಯಾವುದೇ ಸಂಬಂಧವಿಲ್ಲ. ಆಡಳಿತಾರೂಢ ಡಿಎಂಕೆ ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಪಕ್ಷದ ವಕ್ತಾರ ಕೋವೈ ಸತ್ಯನ್ ಹೇಳಿದ್ದಾರೆ. ರಾಜ್ಯ ಸರ್ಕಾರ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ, ಆದರೆ ಆಡಳಿತಾರೂಢ ಡಿಎಂಕೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದೆ.
ಡಿಎಂಕೆ ವಕ್ತಾರ ಡಾ. ಸೈಯದ್ ಹಫೀಜುಲ್ಲಾ ಮಾತನಾಡಿ,ರ‍್ಯಾಗಿಂಗ್ ವಿರೋಧಿ ಕಠಿಣ ಕಾನೂನುಗಳು ಮತ್ತು ವ್ಯವಸ್ಥೆಗಳು ಜಾರಿಯಲ್ಲಿವೆ. ವಾರ್ಡನ್ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು. ಈ ಹಿಂದೆ, ರಾಜ್ಯ ಸರ್ಕಾರ ಮತ್ತು ಪೊಲೀಸರು ಆರೋಪಗಳನ್ನು ನಿರಾಕರಿಸಿದ್ದರು, ತಮಿಳುನಾಡು ಮಾದಕವಸ್ತು ತಯಾರಿಸುವ ರಾಜ್ಯವೂ ಅಲ್ಲ ಅಥವಾ ಹೆಚ್ಚಿನ ಬಳಕೆಯ ರಾಜ್ಯವೂ ಅಲ್ಲ ಎಂದು ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




