ಹೊಸೂರಿನಲ್ಲಿ ರಾಸಾಯನಿಕ ಬಾಯ್ಲರ್ ಸ್ಫೋಟ: 150ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
ತಮಿಳುನಾಡು ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಕೆಮಿಕಲ್ ಬಾಯ್ಲರ್ ಸ್ಫೋಟಗೊಂಡು ರಾಸಾಯನಿಕ ಸೋರಿಕೆಯಾದ ಪರಿಣಾಮ ಉಸಿರಾಟ ತೊಂದರೆಯಾಗಿ 150ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊಸೂರು: ತಮಿಳನಾಡು ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಕೆಮಿಕಲ್ ಬಾಯ್ಲರ್ ಸ್ಪೋಟ್ಗೊಂಡು (Boiler explosion) ರಾಸಾಯನಿಕ ಸೋರಿಕೆಯಾದ ಪರಿಣಾಮ ಉಸಿರಾಟ ತೊಂದರೆಯಾಗಿ 150ಕ್ಕೂ ಹೆಚ್ಚು ಮಕ್ಕಳು (Children) ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಸೂರು ಪಟ್ಟಣದಲ್ಲಿ ಖಾಸಗಿ ಕಾರ್ಖಾನೆಯ ರಾಸಾಯನಿಕ ಬಾಯ್ಲರ್ ಸ್ಪೋಟ್ಗೊಂಡ ಪರಿಣಾಮ ರಾಸಯನಿಕ ಸೋರಿಕೆಯಾಗಿದೆ. ಇದರಿಂದ ಗಾಳಿಯಲ್ಲಿ ರಾಸಾಯನಿಕ ಹರಡಿಕೊಂಡಿದೆ.
ಈ ವೇಳೆ ಕಾರ್ಖಾನೆಯ ಮುಂಬಾಗದಲ್ಲಿದ್ದ ಹೊಸೂರು ಮಹಾನಗರ ಪಾಲಿಕೆಯ ಕಾಮರಾಜ್ ಕಾಲೋನಿಯಲ್ಲಿರುವ ಕಾರ್ಪೋರೇಷನ್ ಶಾಲೆಯಲ್ಲಿ ಮಕ್ಕಳು ಊಟ ಮುಗಿಸಿಕೊಂಡು ಮರಳಿ ತರಗಿತಿಗೆ ಬಂದಾಗ ಆರು ಮತ್ತು ಏಳನೇ ಮಕ್ಕಳಲ್ಲಿ ಆರೋಗ್ಯದಲ್ಲಿ ಬದಲಾವಣೆಯಾಗಿದೆ. ಒಬ್ಬರ ನಂತರ ಮತ್ತೊಬ್ಬರಂತೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಹೀಗೆ 150ಕ್ಕೂ ಹೆಚ್ಚಿನ ಮಕ್ಕಳು ಉಸಿರಾಟ ತೊಂದರೆಯಿಂದ ಬಳಲಿದ್ದಾರೆ. ಕೂಡಲೆ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಹೊಸೂರು ಆಸ್ಪತ್ರೆಯಲ್ಲಿ 67 ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದ್ದು, ಮಕ್ಕಳನ್ನು ವೈದ್ಯರು ಒಂದು ದಿನ ಅಬ್ಸರ್ವೇಷನ್ನಲ್ಲಿ ಇಟ್ಟಿದ್ದಾರೆ. ಚೇತರಿಸಿಕೊಂಡ ಮಕ್ಕಳನ್ನು ಪೋಷಕರು ಮನೆಗೆ ಕರೆದೊಯ್ದದಿದ್ದಾರೆ. 7ನೇ ತರಗತಿಯ ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಕೃಷ್ಣಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಹೊಸೂರು ಶಾಲೆಗೆ ಟೌನ್ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಸದ್ಯ ಮಗಳು ಚೇತರಿಸಿಕೊಂಡಿದ್ದಾಳೆ: ವಿದ್ಯಾರ್ಥಿನಿ ಮುಬಸಿರಾ ತಂದೆ ಯೂಸೆಫ್ ಖಾನ್
ಮೂರು ಗಂಟೆ ಸಮಯಕ್ಕೆ ವಿಚಾರ ಗೊತ್ತಾಯ್ತು. ಹೊದಾಗ ಶಾಲೆಯಲ್ಲಿ ಯಾರು ಪ್ರತಿಕ್ರಿಯೆ ನೀಡಲಿಲ್ಲ. ಈ ವೇಳೆ ಅಲ್ಲಿ ಮಗಳು ಪ್ರಜ್ಞಾಹೀನಳಾಗಿದ್ದಳು. ಕೂಡಲೇ ಆಕೆಯನ್ನು ಆ್ಯಂಬುಲೆನ್ಸ್ ಮುಖಾಂತರ ಕರೆತರಲಾಯ್ತು. ಸದ್ಯ ಮಗಳು ಚೇತರಿಸಿಕೊಂಡಿದ್ದಾಳೆ. ಜನರಲ್ ವಾರ್ಡ್ ನಲ್ಲಿಟ್ಟಿದ್ದಾರೆ. ಇನ್ನೊಮ್ಮೆ ಚೆಕ್ ಬಳಿಕ ಮನೆಗೆ ಹೋಗಬಹುದು ಅಂತ ಹೇಳಿದ್ದಾರೆ. ಗಾಳಿಯಲ್ಲಿ ಏನೊ ಸ್ಮೆಲ್ ಬಂದು ಹೀಗೆ ಆಗಿದೆ ಅಂತ ಮಗಳು ಹೇಳಿದಳು. ಎಂದು ಅಸ್ವಸ್ತಗೊಂಡಿದ್ದ ಆರನೇ ತರಗತಿಯ ವಿದ್ಯಾರ್ಥಿನಿ ಮುಬಸಿರಾ ತಂದೆ ಯೂಸೆಫ್ ಖಾನ್ ಹೇಳಿದ್ದಾರೆ
ಸ್ಮೆಲ್ ಜಾಸ್ತಿ ಆಗಿ ವಾಮಿಟ್ ಆಯ್ತು, ಫುಲ್ ಸುಸ್ತಾಯಿತು
ಮಧ್ಯಾಹ್ನ ಲಂಚ್ ಬ್ರೇಕ್ ಆದ್ಮೇಲೆ ಕ್ಲಾಸ್ ಸ್ಟಾರ್ಟ್ ಆಗಿತ್ತು. ಈ ವೇಳೆ ಮೇಡಂ ಕೂಡ ಕ್ಲಾಸ್ ನಲ್ಲೇ ಇದ್ದರು. ವಿಂಡೊ ಓಪನ್ ಮಾಡೊಕೆ ಅಂತ ಎಲ್ಲರೂ ಮಾಸ್ಕ್ ಹಾಕೊಂಡು ಬಂದರು. ನಾವು ಮಾಸ್ಕ್ ಹಾಕೊಂಡಿದ್ದವಿ. ಆದರೆ ಸ್ಮೆಲ್ ಜಾಸ್ತಿ ಆಗಿ ವಾಮಿಟ್ ಆಯ್ತು, ಫುಲ್ ಸುಸ್ತಾಯಿತು. ಟೀಚರ್ ಆ್ಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸೇರಿಸಿದರು ಎಂದು ಅಸ್ವತ್ತಗೊಂಡಿದ್ದ ಐದನೇ ತರಗತಿ ವಿದ್ಯಾರ್ಥಿ ಹೇಳಿದ್ದಾಳೆ
ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Fri, 14 October 22