ತಮಿಳುನಾಡಿನ ಖಾಸಗಿ ಕಾರ್ಖಾನೆಯಲ್ಲಿ ದುರಂತ: ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಟ್ಯಾಂಕ್‌ಗೆ ಬಿದ್ದು 3 ಕಾರ್ಮಿಕರ ಸಾವು

ಹೊಸೂರು ಸಮೀಪದ ರಾಯಕೋಟೆಯ ಖಾಸಗಿ ಕಾರ್ಖಾನೆಯಲ್ಲಿ ಭಾರಿ ದುರಂತ ಸಂಭವಿಸಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಟ್ಯಾಂಕ್‌ಗೆ ಬಿದ್ದು ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲಸ ಮಾಡುತ್ತಿದ್ದ ವೇಳೆ ತ್ಯಾಜ್ಯ ನೀರಿನ ಟ್ಯಾಂಕ್‌ಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ರಾಯಕೋಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡಿನ ಖಾಸಗಿ ಕಾರ್ಖಾನೆಯಲ್ಲಿ ದುರಂತ: ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಟ್ಯಾಂಕ್‌ಗೆ ಬಿದ್ದು 3 ಕಾರ್ಮಿಕರ ಸಾವು
3 ಕಾರ್ಮಿಕರ ಸಾವು
Edited By:

Updated on: Nov 10, 2026 | 4:19 PM

ಮುಖ್ಯಾಂಶಗಳು

  • ರಾಯಕೋಟೆ ಬಳಿಯ ಖಾಸಗಿ ಕಾರ್ಖಾನೆಯಲ್ಲಿ ದುರಂತ
  • ಟ್ಯಾಂಕ್‌ಗೆ ಬಿದ್ದು 3 ಕಾರ್ಮಿಕರ ಸಾವು
  • ಕೆಲಸ ಮಾಡುತ್ತಿದ್ದ ವೇಳೆ ತ್ಯಾಜ್ಯ ನೀರಿನ ಟ್ಯಾಂಕ್‌ಗೆ ಬಿದ್ದಿರುವ ಶಂಕೆ

ತಮಿಳುನಾಡು, ನವೆಂಬರ್​​ 10: ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಟ್ಯಾಂಕ್‌ಗೆ ಬಿದ್ದು 3 ಕಾರ್ಮಿಕರು ಸಾವನ್ನಪ್ಪಿರುವ ದುರಂತ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಂಕೇರಿ ತಾಲೂಕಿನ ರಾಯಕೋಟೆಯಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾರದಿಕುಮಾರ್(25), ಅಕ್ಮಲ್‌ಬಾಬು ಬಾಯಿ(28) ಮತ್ತು ಕಾವೇರಿ(31) ಮೃತ ದುರ್ದೈವಿಗಳು. ಸ್ಥಳಕ್ಕೆ ಹೊಸೂರು ಡಿವೈಎಸ್​​ಪಿ ಸುಧೀರ್​ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ರಾಯಕೋಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಹೊಸೂರು ಸಮೀಪದ ರಾಯಕೋಟೆ ಬಳಿಯ ಖಾಸಗಿ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಸೋಮವಾರದಂದು ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ತ್ಯಾಜ್ಯ ನೀರಿನ ಟ್ಯಾಂಕ್‌ಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಮೂವರನ್ನು ರಕ್ಷಿಸಿ ಹೊಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

Loading...

ಇದನ್ನೂ ಓದಿ: ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ

ಪೊಲೀಸರ ಮಾಹಿತಿ ಪ್ರಕಾರ ಮೂವರು ಕಾರ್ಮಿಕರು ನ್ಯಾನೋ ಫಿಲ್ಟರ್​​ ಟ್ಯಂಟ್​ ಎಂದು ಕರೆಯಲ್ಪಡುವ ತ್ಯಾಜ್ಯನೀರು ಸಂಗ್ರಹ ಟ್ಯಾಂಕ್​​ ಅನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದರು. ಈ ಸ್ವಚ್ಛತಾ ಕಾರ್ಯವನ್ನು ಕಾರ್ಮಿಕರು ಪ್ರತಿ ಎರಡು ತಿಂಗಳಿಗೊಮ್ಮೆ ಸರದಿಯಲ್ಲಿ ಮಾಡುತ್ತಾರೆ.

ಮೊದಲಿಗೆ ಅಕ್ಮಲ್‌ಬಾಬು ಬಾಯಿ, ಟ್ಯಾಂಕ್​​ನ ಮೇಲೆ ಹತ್ತಿ ಪರಿಶೀಲನೆ ಮಾಡಲು ಅದರ ಮುಚ್ಚಳವನ್ನು ತೆರೆದಿದ್ದಾನೆ ಆದರೆ, ಟ್ಯಾಂಕ್‌ನಿಂದ ಹೊರಬಂದ ವಿಷಾನಿಲವು ಆತನ ಮೇಲೆ ಪರಿಣಾಮ ಬೀರಿದ್ದರಿಂದ, ಅದರೊಳಗೆ ಬಿದ್ದಿದ್ದಾನೆ.

ಇದನ್ನೂ ಓದಿ: ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು

ಇದನ್ನು ಗಮನಿಸಿದ ಶಾರದಿ ಕುಮಾರ್​ ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಈ ವೇಳೆ ಆತ ಕೂಡ ಅನಿಲದ ಪ್ರಭಾವಕ್ಕೆ ಒಳಗಾಗಿ ಟ್ಯಾಂಕ್‌ನೊಳಗೆ ಬಿದಿದ್ದಾನೆ. ಆಗ ಕಾರ್ಖಾನೆಯ ಸುರಕ್ಷತಾ ತಂಡಕ್ಕೆ ವಿಷಯ ತಿಳಿಸಿದ ಕಾವೇರಿ, ಆ ಇಬ್ಬರು ವ್ಯಕ್ತಿಗಳನ್ನು ರಕ್ಷಿಸಲು ಮುಂದಾದ್ದಾರೆ. ಆದರೆ ಕಾವೇರಿ ಕೂಡ ಅದೇ ರೀತಿ ಅನಿಲದ ಪ್ರಭಾವಕ್ಕೆ ಒಳಗಾಗಿ ಟ್ಯಾಂಕ್‌ನೊಳಗೆ ಬಿದ್ದು ಸಾವನ್ನಪ್ಪಿರುವುದಾಗಿ ಎನ್​​ಡಿ ಟಿವಿ9 ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More
Loading...
Unable to load recommendations.
Follow Us