AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಬಾವುಟ ತೆರವುಗೊಳಿಸಿದರೆ, ನಿಮ್ಮ ಬ್ಯಾಡ್ಜ್​ ಕಿತ್ತು ತೆಗೆಯುತ್ತೇನೆ-ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಎಸ್​ಪಿ ಮುಖಂಡ

ಆಸ್ಪತ್ರೆ ಕಟ್ಟಲೆಂದು ನೌಬಾಸ್ಟಾ ಮೌರಂಗ್​ ಮಂಡಿಯಿಂದ ಜಾಗ ತೆಗೆದುಕೊಂಡು ಅಲ್ಲಿ ಬಿಜೆಪಿ ತನ್ನ ಕಚೇರಿ ಕಟ್ಟಿಸಿದೆ ಎಂಬುದು ಸಮಾಜವಾದಿ ಪಕ್ಷದ ಆರೋಪ. ಇದೇ ಆರೋಪವನ್ನು ದೊಡ್ಡದಾಗಿ ಬರೆದ ಪೋಸ್ಟರ್​​ನ್ನು ಸಮಾಜವಾದಿ ಪಕ್ಷ ಬಿಜೆಪಿ ಹೊಸ ಕಚೇರಿಯ ಮೇಲೆ ಹಾಕಿತ್ತು.

ನಮ್ಮ ಬಾವುಟ ತೆರವುಗೊಳಿಸಿದರೆ, ನಿಮ್ಮ ಬ್ಯಾಡ್ಜ್​ ಕಿತ್ತು ತೆಗೆಯುತ್ತೇನೆ-ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಎಸ್​ಪಿ ಮುಖಂಡ
ಪೊಲೀಸರೊಂದಿಗೆ ಜಗಳಕ್ಕೆ ನಿಂತ ಸಮಾಜವಾದಿ ಪಕ್ಷದ ನಾಯಕ
Follow us
TV9 Web
| Updated By: Lakshmi Hegde

Updated on: Nov 24, 2021 | 4:20 PM

ಪೊಲೀಸ್​ ಅಧಿಕಾರಿಯೊಬ್ಬರಿಗೆ ಸಮಾಜವಾದಿ ಪಕ್ಷದ ನಾಯಕನೊಬ್ಬ ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಅದರ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗ್ತಿದೆ. ಬರ್ರಾ ಪೊಲೀಸ್ ಠಾಣೆಯಲ್ಲಿ ಎಸ್​ಪಿ ಕೌನ್ಸಿಲರ್​ ಅರ್ಪಿತ್​ ಯಾದವ್​  ಪೊಲೀಸ್​ ಅಧಿಕಾರಿಗೆ ರೋಪ್​ ಹಾಕಿದ್ದಾರೆ. ‘ನಾವು ಹಾಕಿದ ಬಾವುಟವನ್ನು ನೀವು ಕೆಳಗಿಳಿಸಿದರೆ, ನಾನು ನಿಮ್ಮ ಬ್ಯಾಡ್ಜ್​ ತೆಗೆದು ಹಾಕುತ್ತೇನೆ’ ಎಂದು ಅರ್ಪಿತ್​ ಕೂಗಾಡಿದ ವಿಡಿಯೋ ಈಗ ವೈರಲ್ ಆಗ್ತಿದೆ. ಇತ್ತೀಚೆಗಷ್ಟೇ ನಿರ್ಮಾಣವಾದ ಬಿಜೆಪಿಯ ಪ್ರಾದೇಶಿಕ ಕಚೇರಿ ಮೇಲೆ ಅರ್ಪಿತ್ ಯಾದವ್​ ಮತ್ತು ಅವರ ಬೆಂಬಲಿಗರು ಸೇರಿ ಅವರ ಪಕ್ಷದ ಪೋಸ್ಟರ್, ಬಾವುಟ ಹಾಕಿದ್ದರು. ಅದನ್ನು ಪೊಲೀಸರು ತೆಗೆದುಹಾಕಿದ್ದ ಬೆನ್ನಲ್ಲೇ ಗಲಾಟೆ ಶುರುವಾಗಿತ್ತು. 

ಆಸ್ಪತ್ರೆ ಕಟ್ಟಲೆಂದು ನೌಬಾಸ್ಟಾ ಮೌರಂಗ್​ ಮಂಡಿಯಿಂದ ಜಾಗ ತೆಗೆದುಕೊಂಡು ಅಲ್ಲಿ ಬಿಜೆಪಿ ತನ್ನ ಕಚೇರಿ ಕಟ್ಟಿಸಿದೆ ಎಂಬುದು ಸಮಾಜವಾದಿ ಪಕ್ಷದ ಆರೋಪ. ಇದೇ ಆರೋಪವನ್ನು ದೊಡ್ಡದಾಗಿ ಬರೆದ ಪೋಸ್ಟರ್​​ನ್ನು ಸಮಾಜವಾದಿ ಪಕ್ಷ ಬಿಜೆಪಿ ಹೊಸ ಕಚೇರಿಯ ಮೇಲೆ ಹಾಕಿತ್ತು. ನಿನ್ನೆ ಬಿಜೆಪಿ ನೂತನ ಕಚೇರಿಯ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಆಗಮಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಪೋಸ್ಟರ್​ ತೆಗೆದು ಹಾಕಿದ್ದರು.  ಹಾಗೇ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅರ್ಪಿತ್​ ಯಾದವ್​ರನ್ನು ವಶಕ್ಕೆ ಪಡೆದು, ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.

ಅಂದಹಾಗೆ ಅರ್ಪಿತ್​ ಯಾದವ್​ ಹೀಗೆ ಬೆದರಿಕೆ ಹಾಕಿದ್ದು ಅಜಯ್​ ಸೇಠ್​ ಎಂಬುವರಿಗೆ ಎಂದು ಹೇಳಲಾಗಿದೆ. ಈ ಬಗ್ಗೆ ಇಂಡಿಯಾ ಟುಡೆಗೆ ಪ್ರತಿಕ್ರಿಯೆ ನೀಡಿದ ಅಜಯ್​ ಸೇಠ್​,  ಪೊಲೀಸರು ಅವರ ಕರ್ತವ್ಯವನ್ನು ಮಾಡಿದ್ದಾರೆ.  ಆದರೆ ಅರ್ಪಿತ್ ಅನುಚಿತವಾಗಿ ವರ್ತಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾ ಆಟಗಾರರಿಗೆ ಹಲಾಲ್ ಆಹಾರ: ಕೊನೆಗೂ ಮೌನ ಮುರಿದ ಬಿಸಿಸಿಐ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್