ಕತ್ರೀನಾ ಕೈಫ್ ಕೆನ್ನೆಯಂತಹ ನುಣುಪಾದ ರಸ್ತೆ ನಿರ್ಮಿಸಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಸಚಿವ 

ರಾಜಸ್ಥಾನದ ಹೊಸ ಸಚಿವರೊಬ್ಬರು, ರಸ್ತೆಗಳು ಕತ್ರಿನಾ ಕೈಫ್ ಕೆನ್ನೆಯಂತೆ ನಿರ್ಮಾಣವಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಚಿವರ ಹೇಳಿಕೆ ವಿವಾದ ಸೃಷ್ಟಿಸಿದೆ.

ಕತ್ರೀನಾ ಕೈಫ್ ಕೆನ್ನೆಯಂತಹ ನುಣುಪಾದ ರಸ್ತೆ ನಿರ್ಮಿಸಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಸಚಿವ 
ಸಚಿವ ರಾಜೇಂದ್ರ ಸಿಂಗ್, ಮಟಿ ಕತ್ರಿನಾ ಕೈಫ್ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: shivaprasad.hs

Updated on:Nov 24, 2021 | 3:19 PM

ರಾಜಸ್ಥಾನ: 2005ರಲ್ಲಿ ಆಗಿನ ರೈಲ್ವೆ ಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್, ಬಿಹಾರದ ರಸ್ತೆಗಳು ಹೇಮಾ ಮಾಲಿನಿಯವರ ಕೆನ್ನೆಯಂತಾಗಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಹೇಳಿಕೆ ದೇಶಾದ್ಯಂತ ತೀವ್ರ ವಿವಾದ ಹುಟ್ಟುಹಾಕಿತ್ತು. ಇದೇ ಮಾದರಿಯಲ್ಲಿ ಸೈನಿಕ ಕಲ್ಯಾಣ ಖಾತೆ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಢ ಇತ್ತೀಚೆಗೆ ಹೇಳಿಕೆ ನೀಡಿದ್ದು, ರಸ್ತೆಗಳು ಕತ್ರಿನಾ ಕೈಫ್ ಕೆನ್ನೆಯಂತಾಗಬೇಕು ಎಂದಿದ್ದಾರೆ. ಇದು ಎಲ್ಲೆಡೆ ವಿವಾದಕ್ಕೆ ಕಾರಣವಾಗಿದೆ. ಮಂಗಳವಾರದಂದು ಜುಂಜು ಜಿಲ್ಲೆಯ ಪಾಂಖ್ ಗ್ರಾಮದಲ್ಲಿ ಗ್ರಾಮ ಅಭಿಯಾನವಿತ್ತು. ಅದರಲ್ಲಿ ಪಿಡಬ್ಲ್ಯುಡಿ ಇಲಾಖೆಯ ಎನ್​ಕೆ ಜೋಶಿ ವಿವರಣೆ ನೀಡುತ್ತಿದ್ದರು. ಮಧ್ಯದಲ್ಲಿ ಅವರಿಂದ ಮೈಕ್ ತೆಗೆದುಕೊಂಡ ಸಚಿವ ರಾಜೇಂದ್ರ ಸಿಂಗ್, ‘‘ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಂತೆ ಮಾಡಬೇಕು’’ ಎಂದು ಹೇಳಿದರು. ಆದರೆ ನಂತರ ಅವರು, ಇದೀಗ ಹೇಮಾ ಮಾಲಿನಿ ಅವರಿಗೆ ವಯಸ್ಸಾಗಿದೆ ಎಂದರು. ನೆರೆದಿದ್ದ ಸಭಿಕರಲ್ಲಿ, ಈಗಿನ ಖ್ಯಾತ ನಟಿ ಯಾರು ಎಂದು ಸಚಿವರು ಕೇಳಿದರು.

ಸಭಿಕರು, ಕತ್ರಿನಾ ಕೈಫ್ ಎಂದು ಉತ್ತರಿಸಿದಾಗ, ಸಚಿವ ರಾಜೇಂದ್ರ ಸಿಂಗ್ ‘‘ರಸ್ತೆಗಳನ್ನು ಕತ್ರಿನಾ ಕೈಫ್ ಕೆನ್ನೆಯಂತೆ ಮಾಡಬೇಕು’’ ಎಂದು ನಗುತ್ತಾ ನಿರ್ದೇಶಿಸಿದರು. ಇದು ಸಭೆಯಲ್ಲೂ ನಗು ಉಕ್ಕಲು ಕಾರಣವಾಗಿದೆ. ಆದರೆ ಇದು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.

ಸಚಿವ ರಾಜೇಂದ್ರ ಸಿಂಗ್ ಮಾತನಾಡಿರುವ ವಿಡಿಯೋ ಇಲ್ಲಿದೆ:

‘ಹೇಮಾ ಮಾಲಿನಿಯವರ ಕೆನ್ನೆಯಂತೆ ರಸ್ತೆ ನಿರ್ಮಿಸಬೇಕು’; ಈ ಹೇಳಿಕೆ ಇದೇ ಮೊದಲೇನಲ್ಲ! ಮೊದಲು ಯಾರೆಲ್ಲಾ ಹೇಳಿದ್ದರು ಎಂಬ ವಿವರ ಇಲ್ಲಿದೆ: 2005 ರಲ್ಲಿ ಆಗಿನ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳ ಬಗ್ಗೆ ಹೇಮಾ ಮಾಲಿನಿ ಅವರ ಕೆನ್ನೆಯಂತೆಯೇ ಇಲ್ಲಿನ ರಸ್ತೆಗಳು ಸುಗಮವಾಗಿರುತ್ತವೆ ಎಂದು ಹೇಳಿದ್ದರು. ಈ ವಿವಾದದ ನಂತರ 2013 ರಲ್ಲಿ ಆಗಿನ ಉತ್ತರ ಪ್ರದೇಶ ಸಚಿವ ರಾಜಾರಾಮ್ ಪಾಂಡೆ ಅವರು ಹೇಮಾ ಮಾಲಿನಿ ಅವರ ಕೆನ್ನೆಗಳನ್ನು ಉತ್ತಮ ರಸ್ತೆಗೆ ಹೋಲಿಸಿದ್ದರು. 2019 ರ ಅಕ್ಟೋಬರ್‌ನಲ್ಲಿ ಮಧ್ಯಪ್ರದೇಶದ ಆಗಿನ ಸಚಿವ ಪಿಸಿ ಶರ್ಮಾ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ಇದರ ನಂತರ, 2019ರ ನವೆಂಬರ್​ನಲ್ಲಿ ಛತ್ತೀಸ್‌ಗಢದ ಅಂದಿನ ಸಚಿವ ಖವಾಸಿ ಲಖ್ಮಾ ಕೂಡ ಹೇಮಾ ಮಾಲಿನಿಯ ಕೆನ್ನೆಯಂತಹ ರಸ್ತೆಗಳನ್ನು ನಿರ್ಮಿಸಲು ಹೇಳಿಕೆ ನೀಡಿದ್ದರು. ಇದೀಗ ಈ ಸಾಲಿಗೆ ರಾಜಸ್ಥಾನದ ಸಚಿವ ರಾಜೇಂದ್ರ ಸಿಂಗ್ ಕೂಡ ಸೇರ್ಪಡೆಯಾಗಿದ್ದು, ಅವರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಕತ್ರಿನಾ ಕೈಫ್ ಕೆನ್ನೆಯನ್ನು ಉದಾಹರಿಸಿದ್ದಾರೆ.

ಹೇಮಾ ಮಾಲಿನಿ ಮಥುರಾದಿಂದ ಬಿಜೆಪಿಯ ಸಂಸದರಾಗಿ ಆಯ್ಕೆಗೊಂಡಿದ್ದರು. ಅಚ್ಚರಿಯ ವಿಚಾರವೆಂದರೆ ಇದುವರೆಗೆ ಹೇಮಾ ಮಾಲಿನಿ ಕೆನ್ನೆಯನ್ನು ರಸ್ತೆಗೆ ಹೋಲಿಸಿ ಹೇಳಿಕೆ ನೀಡಿರುವ ಎಲ್ಲಾ ಸಚಿವರೂ ಬಿಜೆಪಿಯ ವಿರೋಧ ಪಕ್ಷಗಳಿಂದ ಬಂದವರಾಗಿದ್ದಾರೆ!

ಇದನ್ನೂ ಓದಿ:

ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್​ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಪಿಡಬ್ಲೂಡಿ ಶಾಂತಗೌಡ; ವಿಡಿಯೋ ನೋಡಿ

Madhuri Dixit: ಮಾಧುರಿ ದೀಕ್ಷಿತ್ ನೃತ್ಯಕ್ಕೆ ಫಿದಾ ಆದ ಅಭಿಮಾನಿಗಳು; ವಿಡಿಯೋ ನೋಡಿ

Published On - 3:08 pm, Wed, 24 November 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್