Madhuri Dixit: ಮಾಧುರಿ ದೀಕ್ಷಿತ್ ನೃತ್ಯಕ್ಕೆ ಫಿದಾ ಆದ ಅಭಿಮಾನಿಗಳು; ವಿಡಿಯೋ ನೋಡಿ

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ನೃತ್ಯ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.

Madhuri Dixit: ಮಾಧುರಿ ದೀಕ್ಷಿತ್ ನೃತ್ಯಕ್ಕೆ ಫಿದಾ ಆದ ಅಭಿಮಾನಿಗಳು; ವಿಡಿಯೋ ನೋಡಿ
ಮಾಧುರಿ ದೀಕ್ಷಿತ್

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸಾಮಾಜಿಕ ಜಾಲತಾಣಗಳ ಮುಖಾಂತರ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ಅವರು ಇನ್ಸ್ಟಾಗ್ರಾಂ ಮುಖಾಂತರ ರೀಲ್ಸ್ ಒಂದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಅದು ಖ್ಯಾತ ಹಾಡು ‘ಏಕ್ ದೋ ತೀನ್’ ಹಾಡಿನ ನೃತ್ಯವನ್ನು  ನೆನಪಿಸಿದೆ. ಮೇಘನ್ ಟ್ರೈನರ್​​ ಅವರ ‘ಮಿ ಟೂ’ ಹಾಡಿಗೆ ಮಾಧುರಿ ಹೆಜ್ಜೆ ಹಾಕಿದ್ದು, ಅವರ ಸ್ಟೆಪ್ಸ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಇಂಟರ್​ನೆಟ್​ನಲ್ಲಿ ಮಾಧುರಿ ನೃತ್ಯ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಇಷ್ಟವಾಗಿದೆ. ತಮ್ಮ ಪೋಸ್ಟ್​ಗೆ ಮಾಧುರಿ ‘ಇಫ್ ಐ ವಾಸ್ ಯೂ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಸದ್ಯ ಈ ರೀಲ್ ಬಾಲಿವುಡ್ ಸೆಲೆಬ್ರಿಟಿಗಳ ಮನಸ್ಸನ್ನೂ ಗೆದ್ದಿದ್ದು, ಅವರೂ ಕಾಮೆಂಟ್ಸ್ ಮಾಡುತ್ತಿದ್ದಾರೆ. ಸದ್ಯ ವಿಡಿಯೋ 2 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ.

ಮಾಧುರಿ ಹಂಚಿಕೊಂಡ ವಿಡಿಯೋ ಇಲ್ಲಿದೆ:

 

View this post on Instagram

 

A post shared by Madhuri Dixit (@madhuridixitnene)


ನಟಿ ಮಾಧುರಿ ವಿಡಿಯೋ ರೀಲ್ಸ್ ಮುಖಾಂತರ ಅಭಿಮಾನಿಗಲ ಮನಗೆಲ್ಲುವುದು ಇದೇ ಮೊದಲೇನೂ ಅಲ್ಲ. ಇತ್ತೀಚೆಗಷ್ಟೇ ಅವರು, ಗುಜರಾತಿ ಖಾದ್ಯಗಳ ಎದುರು ಕುಳಿತು ಒಂದು ವಿಡಿಯೋ ಹಂಚಿಕೊಂಡಿದ್ದರು. ಅದೂ ಕೂಡ, ಆಹಾರ ಪ್ರಿಯರ ಮನಗೆದ್ದಿತ್ತು.

ಆ ವಿಡಿಯೋ ಇಲ್ಲಿದೆ:

 

View this post on Instagram

 

A post shared by Madhuri Dixit (@madhuridixitnene)


ಚಿತ್ರಗಳ ವಿಷಯಕ್ಕೆ ಬಂದರೆ ಮಾಧುರಿ ಕೊನೆಯದಾಗಿ ಕಾಣಿಸಿಕೊಂಡಿದ್ದು, 2019ರಲ್ಲಿ ತೆರೆಗೆ ಬಂದ ‘ಕಳಂಕ್’ ಚಿತ್ರದಲ್ಲಿ. ಆ ಚಿತ್ರದಲ್ಲಿ ವರುಣ್ ಧವನ್, ಸೊನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಸಂಜಯ್ ದತ್ ಮೊದಲಾದವರು ಬಣ್ಣ ಹಚ್ಚಿದ್ದರು.

ಇದನ್ನೂ ಓದಿ:

‘ಈ ಬಾರಿ ನಿಮ್ಮಿಂದ ಸ್ವಲ್ಪ ದೂರ, ಆದರೆ ಬೇಗ ಮರಳುವೆ’ ಎಂದು ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ  

ಅದರಿಂದಾದ ಆಘಾತ ಜೀವಮಾನವಿಡೀ ಇರುತ್ತದೆ; ಖಾಸಗಿ ಚಿತ್ರಗಳು ಲೀಕ್ ಆಗಿದ್ದ ಕುರಿತಂತೆ ನೋವು ಹೊರಹಾಕಿದ‌ ಆಸ್ಕರ್ ವಿಜೇತ ನಟಿ

Click on your DTH Provider to Add TV9 Kannada