ಕತ್ರಿನಾ-ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಷರತ್ತು; ಇದನ್ನು ಪಾಲಿಸಲೇಬೇಕು
ಕತ್ರಿನಾ ಕೈಫ್ ಅವರು ವಿಕ್ಕಿ ಕೌಶಲ್ ನಟನೆಯನ್ನು ನೋಡಿ ಮೆಚ್ಚಿಕೊಂಡಿದ್ದರು. ಅವರ ಜತೆ ನಟಿಸಬೇಕು ಎನ್ನುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಇದಾದ ನಂತರದಲ್ಲಿ ಇಬ್ಬರೂ ಭೇಟಿ ಆದರು. ಗೆಳೆತನ ಪ್ರೀತಿಗೆ ತಿರುಗಿತ್ತು.
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಗೆ (Katrina Kaif And Vicky Kaushal Marriage) ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 7ರಿಂದ ಮದುವೆ ಕಾರ್ಯಕ್ರಮ ಆರಂಭವಾಗಲಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ (Six Senses Fort Hotel) ಮದುವೆ ಕಾರ್ಯಕ್ರಮ ನಡೆಯುತ್ತಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಬಾಲಿವುಡ್ ಸೆಲೆಬ್ರಿಟಿಗಳಿಗೆ ಮದುವೆ ಆಮಂತ್ರಣ ಹೋಗಿದೆ. ಅಚ್ಚರಿ ಎಂದರೆ ಈ ಮದುವೆಗೆ ಬರುವವರು ಕೆಲ ಷರತ್ತುಗಳನ್ನು ಪಾಲಿಸಲೇಬೇಕು.
ಕತ್ರಿನಾ ಕೈಫ್ ಅವರು ವಿಕ್ಕಿ ಕೌಶಲ್ ನಟನೆಯನ್ನು ನೋಡಿ ಮೆಚ್ಚಿಕೊಂಡಿದ್ದರು. ಅವರ ಜತೆ ನಟಿಸಬೇಕು ಎನ್ನುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಇದಾದ ನಂತರದಲ್ಲಿ ಇಬ್ಬರೂ ಭೇಟಿ ಆದರು. ಗೆಳೆತನ ಪ್ರೀತಿಗೆ ತಿರುಗಿತ್ತು. ಆದರೆ, ಇವರ ನಡುವೆ ವಯಸ್ಸಿನ ಅಂತರದ ಪ್ರಶ್ನೆ ಮೂಡಿಯೇ ಇಲ್ಲ. ಪ್ರೀತಿ ಪ್ರೇಮದ ವಿಚಾರದಲ್ಲಿ ಕತ್ರಿನಾ ಕೈಫ್ ಈ ಮೊದಲು ಸಾಕಷ್ಟು ನೊಂದಿದ್ದರು. ಕೊನೆಗೂ ಅವರು ಪ್ರೀತಿಸಿಯೇ ಮದುವೆ ಆಗುತ್ತಿದ್ದಾರೆ.
ವಿಕ್ಕಿ ಹಿಂದು, ಕತ್ರಿನಾ ಕೈಫ್ ಮುಸ್ಲಿಂ. ಈ ಕಾರಣಕ್ಕೆ ಎರಡೂ ಧರ್ಮದ ಪ್ರಕಾರ ಮದುವೆ ಕಾರ್ಯ ನಡೆಯಲಿದೆ ಎನ್ನಲಾಗುತ್ತಿದೆ. ವಿವಾಹ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಕರಣ್ ಜೋಹರ್, ಅಲಿ ಅಬ್ಬಾಸ್ ಜಫರ್, ಕಬೀರ್ ಖಾನ್, ರೋಹಿತ್ ಶೆಟ್ಟಿ, ಸಿದ್ದಾರ್ಥ್ ಮಲ್ಹೋತ್ರಾ, ಕಿಯಾರಾ ಆಡ್ವಾಣಿ, ವರುಣ್ ಧವನ್ ಹಾಗೂ ಅವರ ಪತ್ನಿ ನತಾಶಾ ದಲಾಲ್ ಸೇರಿ ಅನೇಕರಿಗೆ ಆಮಂತ್ರಣ ಹೋಗಿದೆ.
ಕತ್ರಿನಾ ಹಾಗೂ ವಿಕ್ಕಿ ವಿಕ್ಕಿ ಮದುವೆಗೆ ಆಗಮಿಸುವ ಅತಿಥಿಗಳು ಮೊಬೈಲ್ ತರುವಂತಿಲ್ಲ. ಮದುವೆ ನಡೆಯುವ ಸ್ಥಳಕ್ಕೆ ಯಾರೊಬ್ಬರೂ ಮೊಬೈಲ್ ತರದಂತೆ ನೋಡಿಕೊಳ್ಳಬೇಕು ಎನ್ನುವ ಸೂಚನೆ ಆಯೋಜಕರಿಗೆ ಹೋಗಿದೆ. ಭದ್ರತೆಗೆ ಹಾಗೂ ಖಾಸಗಿತನಕ್ಕೆ ಹೆಚ್ಚು ಮಹತ್ವ ನೀಡುವಂತೆಯೂ ಸೂಚಿಸಲಾಗಿದೆ. ಅತಿಥಿಗಳು ಮೊಬೈಲ್ ತೆಗೆದುಕೊಂಡು ಹೋದರೆ ಮದುವೆ ಫೋಟೋ ಹಾಗೂ ವಿಡಿಯೋಗಳನ್ನು ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಇದು ಆಗದಂತೆ ನೋಡಿಕೊಳ್ಳಬೇಕು ಎಂಬುದು ಈ ಜೋಡಿಯ ಲೆಕ್ಕಾಚಾರ ಎನ್ನಲಾಗಿದೆ.
ಇದನ್ನೂಓದಿ: ವಿಕ್ಕಿ ಕೌಶಲ್ಗಿಂತ ಕತ್ರಿನಾ ಕೈಫ್ ಎಷ್ಟು ವರ್ಷ ದೊಡ್ಡವರು? ಮದುವೆಗೆ ಅಡ್ಡಿ ಆಗಲಿಲ್ಲ ವಯಸ್ಸಿನ ಅಂತರ
ಮದುವೆ ಬಳಿಕ KKK ಎಂದು ಬದಲಾಗುತ್ತೆ ಕತ್ರಿನಾ ಕೈಫ್ ಹೆಸರು; ಏನಿದರ ಅರ್ಥ?
Published On - 3:40 pm, Wed, 24 November 21