ಮದುವೆ ಬಳಿಕ KKK ಎಂದು ಬದಲಾಗುತ್ತೆ ಕತ್ರಿನಾ ಕೈಫ್​ ಹೆಸರು; ಏನಿದರ ಅರ್ಥ?

Katrina Kaif: ಕತ್ರಿನಾ ಕೈಫ್​ ಅವರು ಮದುವೆ ಬಳಿಕ ತಮ್ಮ ಹೆಸರಿನ ಜೊತೆ ಗಂಡನ ಸರ್​ನೇಮ್​ ಸೇರಿಸಿಕೊಳ್ಳಲಿದ್ದಾರೆ. ‘ಟೈಗರ್​ 3’ ಸೇರಿದಂತೆ ಮುಂಬರುವ ಎಲ್ಲ ಸಿನಿಮಾದ ಟೈಟಲ್​ ಕಾರ್ಡ್​ನಲ್ಲಿ ಅವರು ಈ ಹೊಸ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ ಎನ್ನಲಾಗಿದೆ.

ಮದುವೆ ಬಳಿಕ KKK ಎಂದು ಬದಲಾಗುತ್ತೆ ಕತ್ರಿನಾ ಕೈಫ್​ ಹೆಸರು; ಏನಿದರ ಅರ್ಥ?
ಕತ್ರಿನಾ ಕೈಫ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 20, 2021 | 8:41 AM

ಬಾಲಿವುಡ್​ ನಟಿ ಕತ್ರಿನಾ ಕೈಫ್ (Katrina Kaif)​ ಅವರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಅದಕ್ಕಾಗಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಪ್ರಿಯಕರ ವಿಕ್ಕಿ ಕೌಶಲ್​ (Vicky Kaushal) ಜೊತೆ ಅವರು ಅದ್ದೂರಿಯಾಗಿ ಮದುವೆ ಆಗಲಿದ್ದಾರೆ. ಎರಡೂ ಕುಟುಂಬದವರು ಈಗಾಗಲೇ ರಾಜಸ್ಥಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ರಾಜಸ್ಥಾನದ ಐಷಾರಾಮಿ ಹೋಟೆಲ್​ನಲ್ಲಿ ಈ ಸ್ಟಾರ್​ ಜೋಡಿಯ ವಿವಾಹ (Katrina Kaif Vicky Kaushal Marriage) ನಡೆಯಲಿದೆ. ಮದುವೆ ಬಳಿಕ ಕತ್ರಿನಾ ಕೈಫ್​ ಹೆಸರು ಕೊಂಚ ಬದಲಾಗಲಿದೆ. ಇನ್ಮುಂದೆ ಅವರನ್ನು KKK ಎಂದು ಅಭಿಮಾನಿಗಳು ಕರೆಯಬಹುದು. ಏನಿದು KKK? ಕತ್ರಿನಾ ಕೈಫ್​ ಕೌಶಲ್​! ಹೌದು, ಈ ಬಗ್ಗೆ ಬಾಲಿವುಡ್​ ಅಂಗಳದಿಂದ ಈಗಾಗಲೇ ಗುಸುಗುಸು ಕೇಳಿಬರುತ್ತಿದೆ. ಮದುವೆ ಬಳಿಕ ತಮ್ಮ ಹೆಸರಿನ ಜೊತೆಯಲ್ಲಿ ಕೌಶಲ್​ ಎಂಬ ಸರ್​ನೇಮ್​ ಸೇರಿಸಿಕೊಳ್ಳಲು ಕತ್ರಿನಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅವರು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಮದುವೆ ಬಳಿಕ ಅನೇಕ ನಟಿಯರು ತಮ್ಮ ಹೆಸರಿನ ಜೊತೆ ಗಂಡನ ಹೆಸರು ಅಥವಾ ಗಂಡನ ಕುಟುಂಬದ ಸರ್​ನೇಮ್​ ಸೇರಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್​, ಕರೀನಾ ಕಪೂರ್ ಖಾನ್​ ಮುಂತಾದವರೇ ಈ ಮಾತಿಗೆ ಉದಾಹರಣೆ. ಅದೇ ರೀತಿ ಕತ್ರಿನಾ ಕೈಫ್​ ಕೂಡ ತಮ್ಮ ಹೆಸರಿನ ಜೊತೆ ಕೌಶಲ್​ ಎಂಬ ಸರ್​ನೇಮ್​ ಸೇರಿಸಿಕೊಳ್ಳಲಿದ್ದು, ಮುಂಬರುವ ಎಲ್ಲ ಸಿನಿಮಾದ ಟೈಟಲ್​ ಕಾರ್ಡ್​ನಲ್ಲಿ ಅವರು ಇದೇ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ ಎನ್ನಲಾಗಿದೆ.

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರಿಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರೆಲ್ಲರನ್ನೂ ಮದುವೆ ಆಹ್ವಾನಿಸಲಾಗುತ್ತಿದೆ. ಮುಂಬೈ, ದೆಹಲಿ ಮುಂತಾದ ನಗರಗಳಿಂದ ಸ್ನೇಹಿತರು ಜೈಪುರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರ ಓಡಾಟಕ್ಕಾಗಿ ಜೈಪುರದಲ್ಲಿ ಇರುವ ಎಲ್ಲ ಐಷಾರಾಮಿ ಬಾಡಿಗೆ ಕಾರುಗಳನ್ನು ಈಗಲೇ ಬುಕ್​ ಮಾಡಲಾಗಿದೆ. ಮದುವೆ ನಡೆಯುವ ದಿನಾಂಕಗಳು (ಡಿಸೆಂಬರ್​ 7ರಿಂದ 9ರವರೆಗೆ) ಮಾತ್ರವಲ್ಲದೇ ಅದರ ಆಸುಪಾಸಿನ ದಿನಗಳಿಗೂ ಸೇರಿ ಕಾರುಗಳನ್ನು ಮುಂಗಡವಾಗಿ ಬುಕ್​ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಜೈಪುರ ಸುತ್ತಮುತ್ತ ಶೂಟಿಂಗ್​ ಮಾಡುತ್ತಿರುವ ಇತರೆ ಟಿವಿ ಮತ್ತು ಸಿನಿಮಾ ಸೆಲೆಬ್ರಿಟಿಗಳಿಗೆ ಕಾರಿನ ಅಭಾವ ಕಾಡಲಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ:

ಮದುವೆ ಬಳಿಕ ಹನಿಮೂನ್​ಗೆ ಹೋಗಲ್ಲ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​; ಕಾರಣ ಏನು?

ವಿಕ್ಕಿ ಕೌಶಲ್​ಗಿಂತ ಕತ್ರಿನಾ ಕೈಫ್​ ಎಷ್ಟು ವರ್ಷ ದೊಡ್ಡವರು? ಮದುವೆಗೆ ಅಡ್ಡಿ ಆಗಲಿಲ್ಲ ವಯಸ್ಸಿನ ಅಂತರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ